ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ

ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
|

Updated on: Jun 18, 2024 | 9:45 AM

ಜಯಣ್ಣ ಒಡೆತನದ ಶೆಡ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ಇದು ಶಾಕಿಂಗ್ ಎನಿಸಿದೆ. ದರ್ಶನ್ ಸೇರಿದಂತೆ 19 ಮಂದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ಶೆಡ್​ಗೆ ಬಂದಿದ್ದು ತಮಗೆ ಗೊತ್ತೇ ಇಲ್ಲ ಎಂದು ಜಯಣ್ಣ ಅವರು ಹೇಳಿದ್ದರು.

ಪಟ್ಟಣಗೆರೆ ಜಯಣ್ಣ (Jayanna) ಒಡೆತನದ ಶೆಡ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ಇದು ಶಾಕಿಂಗ್ ಎನಿಸಿದೆ. ದರ್ಶನ್ ಸೇರಿದಂತೆ 19 ಮಂದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ಶೆಡ್​ಗೆ ಬಂದಿದ್ದು ತಮಗೆ ಗೊತ್ತೇ ಇಲ್ಲ ಎಂದು ಜಯಣ್ಣ ಅವರು ಹೇಳಿದ್ದರು. ‘ನಾನು ಶೆಡ್​ನ ಬಾಡಿಗೆ ನೀಡಿದ್ದೇನೆ. ಅವರು ಹೋಗಿದ್ದು ನನಗೆ ಗೊತ್ತೇ ಇಲ್ಲ. ಕಿಶೋರ್ ಅವರು ಬಾಡಿಗೆದಾರ. ಕೀ ಅವನ ಬಳಿಯೇ ಇರುತ್ತದೆ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಚಾರಣೆ ವೇಳೆ ಪ್ರಾಪರ್ಟಿ ಬಗ್ಗೆ ಮಾತ್ರ ಕೇಳಿದರು’ ಎಂದಿದ್ದಾರೆ ಜಯಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us