Aadhaar Update: ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಷ್ಕ್ರಿಯವಾಗುತ್ತಾ?
ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗಳು ಜೂನ್ 14 ರ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎಂಬ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯುಐಡಿಎಐ ಇದು ಸುಳ್ಳು ಸುದ್ದಿ ಎಂದು ಹೇಳಿ ಸ್ಪಷ್ಟಪಡಿಸಿದೆ.
ಆಧಾರ್ ಕಾರ್ಡ್ನಲ್ಲಿ ನೀಡಿರುವ ವಿವರಗಳನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಅಪ್ಡೇಟ್ ಮಾಡಬೇಕು ಎನ್ನುವುದು ಆಧಾರ್ ಪ್ರಾಧಿಕಾರದ ನಿಯಮ. ಅದರಂತೆ, ಜನರು ಆಧಾರ್ ಕಾರ್ಡ್ ಪಡೆದ ಬಳಿಕ ಅದರಲ್ಲಿನ ವಿವರ, ಮಾಹಿತಿಯನ್ನು ಅಪ್ಡೇಟ್ ಮಾಡುವುದು ಅಗತ್ಯ. ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗಳು ಜೂನ್ 14 ರ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎಂಬ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯುಐಡಿಎಐ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಜೂನ್ 14ರ ಬಳಿಕ ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ವಿವರವನ್ನು ಉಚಿತವಾಗಿ ಅಪ್ಡೇಟ್ ಮಾಡಲು ಆಗುವುದಿಲ್ಲ. ಅದನ್ನೇ ತಿರುಚಿ ಸುಳ್ಳು ಹಬ್ಬಿಸಲಾಗುತ್ತಿದೆ. ಹಾಗಾದರೆ ಏನಿದು ಸಮಾಚಾರ? ವಿಡಿಯೊ ನೋಡಿ..