‘ನಾನು ಲೀಡರ್ ಆಗೋಕೆ ಲಾಯಕ್ ಇಲ್ಲ’; ನೇರ ಮಾತಲ್ಲಿ ಹೇಳಿದ ರವಿಚಂದ್ರನ್

‘ನಾನು ಲೀಡರ್ ಆಗೋಕೆ ಲಾಯಕ್ ಇಲ್ಲ’; ನೇರ ಮಾತಲ್ಲಿ ಹೇಳಿದ ರವಿಚಂದ್ರನ್

ರಾಜೇಶ್ ದುಗ್ಗುಮನೆ
|

Updated on: May 31, 2024 | 8:58 AM

ಸದ್ಯ ಏನೇ ತೊಂದರೆ ಆದರೂ ಹಿರಿಯ ನಟ ಶಿವರಾಜ್​ಕುಮಾರ್ ಬಳಿ ಹೋಗುತ್ತಾರೆ. ರವಿಚಂದ್ರನ್ ಕೂಡ ಈ ಬಗ್ಗೆ ಮುಂದಾಳತ್ವ ತೆಗೆದುಕೊಳ್ಳಬಹುದಿತ್ತು ಅನ್ನೋದು ಕೆಲವರ ಅಭಿಪ್ರಾಯ. ಈ ಬಗ್ಗೆ ರವಿಚಂದ್ರನ್ ಅವರು ಮೌನ ಮುರಿದಿದ್ದಾರೆ.

ಕನ್ನಡ ಇಂಡಸ್ಟ್ರಿಯಲ್ಲಿ ಅನೇಕ ಹಿರಿಯ ನಟರಿದ್ದಾರೆ. ಏನಾದರೂ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸೋಕೆ ಬರೋದು ಕೆಲವೇ ಕೆಲವು ಮಂದಿ. ಸದ್ಯ ಏನೇ ತೊಂದರೆ ಆದರೂ ಹಿರಿಯ ನಟ ಶಿವರಾಜ್​ಕುಮಾರ್ ಬಳಿ ಹೋಗುತ್ತಾರೆ. ರವಿಚಂದ್ರನ್ (Ravichandran) ಕೂಡ ಈ ಬಗ್ಗೆ ಮುಂದಾಳತ್ವ ತೆಗೆದುಕೊಳ್ಳಬಹುದಿತ್ತು ಅನ್ನೋದು ಕೆಲವರ ಅಭಿಪ್ರಾಯ. ಈ ಬಗ್ಗೆ ರವಿಚಂದ್ರನ್ ಅವರು ಮೌನ ಮುರಿದಿದ್ದಾರೆ. ‘ನಾನು ಅದಕ್ಕೆ ಲಾಯಕ್ ಇಲ್ಲ. ನನ್ನ ಕೈಯಲ್ಲಿ ಅದು ಆಗಲ್ಲ. ನಾನು ಅದಕ್ಕೆ ಫಿಟ್ ಅಲ್ಲ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ರವಿಚಂದ್ರನ್ ಅವರು ಯಾವುದೇ ವಿಚಾರ ಇದ್ದರೂ ನೇರವಾಗಿ ಮಾತನಾಡೋಕೆ ಇಷ್ಟಪಡುತ್ತಾರೆ. ಈಗ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಮಾತನಾಡಿದ್ದು ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವರು ರವಿಚಂದ್ರನ್ ಅವರನ್ನು ಮೆಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.