‘ಎಲ್ಲವೂ ರೆಡಿ ಇದೆ, ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ’; ಬರ್ತ್​ಡೇ ದಿನ ರವಿಚಂದ್ರನ್ ಘೋಷಣೆ

‘ಪ್ರೇಮಲೋಕ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಬಗ್ಗೆ ಅನೌನ್ಸ್ ಮಾಡಿದ್ದರು. ಬರ್ತ್​ಡೇ ದಿನವೇ ಈ ಬಗ್ಗೆ ಘೋಷಣೆ ಮಾಡೋದಾಗಿ ಹೇಳಿದ್ದರು. ಆದರೆ, ‘ಪ್ರೇಮಲೋಕ 2’ ಚಿತ್ರವನ್ನು ರವಿಚಂದ್ರನ್ ಇಂದು ಅನೌನ್ಸ್ ಮಾಡುತ್ತಿಲ್ಲ.

‘ಎಲ್ಲವೂ ರೆಡಿ ಇದೆ, ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ’; ಬರ್ತ್​ಡೇ ದಿನ ರವಿಚಂದ್ರನ್ ಘೋಷಣೆ
ಪ್ರೇಮಲೋಕ
Follow us
Mangala RR
| Updated By: ರಾಜೇಶ್ ದುಗ್ಗುಮನೆ

Updated on: May 30, 2024 | 12:42 PM

ನಟ ರವಿಚಂದ್ರನ್ (Ravichandran) ಅವರಿಗೆ ಇಂದು (ಮೇ 30) 63ನೇ ವರ್ಷದ ಬರ್ತ್​​ಡೇ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಅವರ ಮನೆಯ ಎದುರು ಫ್ಯಾನ್ಸ್ ನೆರೆದಿದ್ದರು. ಕೇಕ್, ಹಾರಗಳನ್ನು ತೆಗೆದುಕೊಂಡು ಬಂದಿದ್ದರು. ಕ್ರೇಜಿಸ್ಟಾರ್ ಫ್ಯಾನ್ಸ್ ಜೊತೆ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿದ್ದಾರೆ. ಅವರು ತಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ‘ಪ್ರೇಮಲೋಕ 2’ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಪ್ರೇಮಲೋಕ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಬಗ್ಗೆ ಅನೌನ್ಸ್ ಮಾಡಿದ್ದರು. ಬರ್ತ್​ಡೇ ದಿನವೇ ಈ ಬಗ್ಗೆ ಘೋಷಣೆ ಮಾಡೋದಾಗಿ ಹೇಳಿದ್ದರು. ಆದರೆ, ‘ಪ್ರೇಮಲೋಕ 2’ ಚಿತ್ರವನ್ನು ರವಿಚಂದ್ರನ್ ಇಂದು ಅನೌನ್ಸ್ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ಪ್ರೇಮಲೋಕ ಸೀಕ್ವೆಲ್​ಗೆ ಟ್ರೇಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಅಂತ ಇಂದು ಲಾಂಚ್ ಮಾಡಲಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ಹಾಗೂ ನನ್ನ ಇಬ್ಬರು ಮಕ್ಕಳು ಈ ಚಿತ್ರದಲ್ಲಿ ಇರುತ್ತಾರೆ. ಪ್ರೇಮಲೋಕ ಸಿನಿಮಾನ ಅಂದು ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡುತ್ತಾರೆ’ ಎಂದಿದ್ದಾರೆ ರವಿಚಂದ್ರನ್.

ಇತ್ತೀಚೆಗೆ ಜನರು ಸಿನಿಮಾ ನೋಡೋಕೆ ಥಿಯೇಟರ್​ಗೆ ಬರಲ್ಲ ಎನ್ನುವ ಕೂಗು ಜೋರಾಗಿದೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. ‘ಒಳ್ಳೆಯ ಸಿನಿಮಾ ಮಾಡಿದರೆ ಜನ ಥಿಯೇಟರ್​ಗೆ ಬರುತ್ತಾರೆ. ಯಶ್ ತಿಂಗಳಿಗೊಂದು ಸಿನಿಮಾ ಮಾಡೋಕೆ ಆಗಲ್ಲ. ಕೆಜಿಎಫ್​ಗೆ ಫೈಟ್ ಕೊಡೋತರ ಸಿನಿಮಾ ಮಾಡಬೇಕು’ ಎಂದಿರುವ ಅವರು, ‘10 ಸಿನಿಮಾ ಮಾಡೋಕೆ ನಾನು ರೆಡಿ ಇದ್ದೇನೆ. ಆದರೆ, ನಮಗೆ ಮಾರುಕಟ್ಟೆ ಇಲ್ಲ. ಸಾವಿರ ಕೋಟಿ ಹಾಕೋರೇ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಆ ಸಿನಿಮಾಗೆ ಮಾಡಿದ ಸಾಲ ತೀರಿಸಲು ರವಿಚಂದ್ರನ್​ಗೆ ಬೇಕಾಯ್ತು 15 ವರ್ಷ

‘ಕೆಡಿ’ ಸಿನಿಮಾದಲ್ಲಿ ರವಿಚಂದ್ರನ್ ಅವರು ಸಂಜಯ್ ದತ್ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಬಗ್ಗೆಯೂ ರವಿಚಂದ್ರನ್ ಮಾತನಾಡಿದ್ದಾರೆ. ‘ಸಂಜಯ್ ದತ್ ಅವರ ತಂದೆ ಮತ್ತು ನಮ್ಮ ತಂದೆ ಸ್ನೇಹಿತರು. ನಾನು ದುಬೈನಲ್ಲಿ ಒಮ್ಮೆ ಸಿನಿಮಾ ಶೂಟ್ ಮಾಡುವಾಗ ಕರೆದು ತಮ್ಮ ಕ್ಯಾರವಾನ್ ಬಳಸುವಂತೆ ಸಂಜಯ್ ದತ್ ಹೇಳಿದ್ದರು. ಸಣ್ಣ ಪರಿಚಯ ಇತ್ತು. ಈಗ KD ಚಿತ್ರದಲ್ಲಿ ನಾನು ಸಂಜಯ್ ದತ್ ಒಟ್ಟಿಗೆ ನಟಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.