ರವಿಚಂದ್ರನ್ ಮನೆ ಎದುರು ನೆರೆದ ಫ್ಯಾನ್ಸ್; ಕ್ರೇಜಿಸ್ಟಾರ್ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ
ರವಿಚಂದ್ರನ್ ಅವರು 63ನೇ ವರ್ಷದ ಹುಟ್ಟುಹಬ್ಬಆಚರಿಸಿಕೊಳ್ಳುತ್ತಿದ್ದಾರೆ. ಅವರು ಇಂದು ‘ಪ್ರೇಮಲೋಕ 2’ ಘೋಷಿಸೋ ಸಾಧ್ಯತೆ ಇದೆ. ಸದ್ಯ ಅಭಿಮಾನಿಗಳು ಹಾರ, ಕೇಕ್ ಜೊತೆ ರವಿಚಂದ್ರನ್ ಮನೆ ಎದುರು ನೆರೆದಿದ್ದಾರೆ. ಕೊವಿಡ್ ಕಾರಣದಿಂದ ಅವರು ಫ್ಯಾನ್ಸ್ ಜೊತೆ ಹುಟ್ಟುಹ್ಬ ಆಚರಿಸಿಕೊಳ್ಳೋಕೆ ಸಾಧ್ಯ ಆಗಿರಲಿಲ್ಲ.
ನಟ ರವಿಚಂದ್ರನ್ (Ravichandran) ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳು ಬರುತ್ತಿವೆ. ಅವರ ಮನೆಯ ಮುಂದೆ ಫ್ಯಾನ್ಸ್ ನೆರೆದಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ರವಿಚಂದ್ರನ್ ನಿವಾಸ ಇದೆ. ಅವರು ಮನೆಯ ಒಳಗೆ ಬರುತ್ತಿದ್ದಂತೆ ಫ್ಯಾನ್ಶ್ ಸಿಳ್ಳೆ, ಚಪ್ಪಾಳೆ ಹೊಡೆದು ಜೈಕಾರ ಕೂಗಿದ್ದಾರೆ. ರವಿಚಂದ್ರನ್ ಅವರು ಈಗ ಆಚರಿಸಿಕೊಳ್ಳುತ್ತಿರುವುದು 63ನೇ ವರ್ಷದ ಹುಟ್ಟುಹಬ್ಬ. ಅವರು ಇಂದು ‘ಪ್ರೇಮಲೋಕ 2’ ಘೋಷಿಸೋ ಸಾಧ್ಯತೆ ಇದೆ. ಸದ್ಯ ಅಭಿಮಾನಿಗಳು ಹಾರ, ಕೇಕ್ ಜೊತೆ ರವಿಚಂದ್ರನ್ ಮನೆ ಎದುರು ನೆರೆದಿದ್ದಾರೆ. ಕೊವಿಡ್ ಕಾರಣದಿಂದ ಅವರು ಫ್ಯಾನ್ಸ್ ಜೊತೆ ಹುಟ್ಟುಹ್ಬ ಆಚರಿಸಿಕೊಳ್ಳೋಕೆ ಸಾಧ್ಯ ಆಗಿರಲಿಲ್ಲ. ಈಗ ಅವರು ಗ್ರ್ಯಾಂಡ್ ಆಗಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos