‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? ಯಾರಿಗೆ ಸಿಕ್ತು ಗೋಲ್ಡನ್ ಚಾನ್ಸ್?
ಮೇ 30 ರವಿಚಂದ್ರನ್ ಅವರ ಬರ್ತ್ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ. ಈ ಚಿತ್ರಕ್ಕೆ ನಾಯಕಿ ಫೈನಲ್ ಆಗಿದೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ನಟ ರವಿಚಂದ್ರನ್ (Ravichandran) ಅವರು ನಿರ್ದೇಶಿಸಿದ ‘ಪ್ರೇಮಲೋಕ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. 1987ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಹಲವು ವರ್ಷಗಳ ಬಳಿಕ ಸೀಕ್ವೆಲ್ ಬರುತ್ತಿದೆ. ಸದ್ಯ ಸಿನಿಮಾಗೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ‘ಪ್ರೇಮಲೋಕ 2’ ಚಿತ್ರಕ್ಕೆ ಈಗ ನಾಯಕಿ ಫೈನಲ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ತಮಿಳಿನ ತೇಜು ಅಶ್ವಿನಿ ಅವರು ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಮೇ 30 ರವಿಚಂದ್ರನ್ ಅವರ ಬರ್ತ್ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ. ರವಿಚಂದ್ರನ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ 20-25 ಸಾಂಗ್ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ. ಈ ಬೆನ್ನಲ್ಲೇ ಸಿನಿಮಾ ಹೀರೋಯಿನ್ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ರವಿಚಂದ್ರನ್ ಅವರು ಹೀರೋಯಿನ್ಗಳ ಆಯ್ಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಅಳೆದು ತೂಗಿ ಅವರು ನಟಿಯರಿಗೆ ಅವಕಾಶ ನೀಡುತ್ತಾರೆ. ರವಿಚಂದ್ರನ್ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಅವರ ಅದೃಷ್ಟ ಬದಲಾಗುತ್ತದೆ ಅನ್ನೋ ಮಾತಿದೆ. ‘ಪ್ರೇಮಲೋಕ’ ಸಿನಿಮಾದಲ್ಲಿ ರವಿಚಂದ್ರನ್ಗೆ ಜೊತೆಯಾಗಿ ಜೂಹಿ ಚಾವ್ಲಾ ನಟಿಸಿದ್ದರು. ಇವರ ಕಾಂಬಿನೇಷನ್ ಗಮನ ಸೆಳೆದಿತ್ತು. ಈಗ ಪ್ರೇಮಲೋಕ 2 ಚಿತ್ರದಲ್ಲಿ ತೇಜುಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಅವರು ಡ್ಯಾನ್ಸರ್ ಹಾಗೂ ಕೋರಿಯೋಗ್ರಫರ್ ಎರಡೂ ಹೌದು. ಇದರ ಜೊತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಅವರು ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರು ‘ಪ್ರೇಮಲೋಕ 2’ ಚಿತ್ರದ ಭಾಗವಾಗುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: ರವಿಚಂದ್ರನ್ ನಟನೆಯ ‘ದಿ ಜಡ್ಜ್ಮೆಂಟ್’ ಚಿತ್ರಕ್ಕೆ ಸಿಕ್ತು ರಿಲಯನ್ಸ್ ಸಂಸ್ಥೆಯ ಬೆಂಬಲ
‘ಮೇ 30ಕ್ಕೆ ಪ್ರೇಮಲೋಕ 2 ಸಿನಿಮಾ ಶುರುವಾಗುತ್ತದೆ. ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಪ್ರೀತಿ ಮೆಲುಕು ಹಾಕುತ್ತಾ ಹೋಗುತ್ತೀರಾ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇಲ್ಲ. ಕೇವಲ ಪ್ರೀತಿ ವಿಚಾರ ಇರುತ್ತದೆ’ ಎಂದು ರವಿಚಂದ್ರನ್ ಈ ಮೊದಲು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:51 pm, Wed, 8 May 24