ಫ್ಯಾಮಿಲಿ ಪ್ರೇಕ್ಷಕರಿಗಾಗಿ ಕುಟುಂಬದವರೆಲ್ಲ ಸೇರಿ ಮಾಡಿದ ಸಿನಿಮಾ ‘ಜನಕ’; ಏನಿದರ ಕಥೆ?

‘ಜನಕ’ ಚಿತ್ರದಲ್ಲಿ ಹೀರೋ ಆಗಿ ಮನು ನಟಿಸಿದ್ದಾರೆ. ಅವರ ಜೊತೆ ನಾಯಕಿಯರಾಗಿ ರಕ್ಷಾ ಹಾಗೂ ಶಾಲಿನಿ ಅಭಿನಯಿಸಿದ್ದಾರೆ. ಸುರೇಶ್​ ಬಾಬು, ರಾಜಲಕ್ಷ್ಮಿ, ಆನಂದ್​ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಈ ಸಿನಿಮಾದ ಸುದ್ದಿಗೋಷ್ಠಿಗೆ ಬಂದು ಶುಭ ಹಾರೈಸಿದ್ದಾರೆ.

ಫ್ಯಾಮಿಲಿ ಪ್ರೇಕ್ಷಕರಿಗಾಗಿ ಕುಟುಂಬದವರೆಲ್ಲ ಸೇರಿ ಮಾಡಿದ ಸಿನಿಮಾ ‘ಜನಕ’; ಏನಿದರ ಕಥೆ?
‘ಜನಕ’ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ
Follow us
ಮದನ್​ ಕುಮಾರ್​
|

Updated on: May 29, 2024 | 9:34 PM

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸಬರಿಗೆ ಕೆಲವೊಮ್ಮೆ ಕುಟುಂಬದವರಿಂದ ಬೆಂಬಲ ಸಿಗುವುದಿಲ್ಲ. ಆದರೆ ಕೆಲವೊಮ್ಮೆ ಇಡೀ ಕುಟುಂಬದವರು ಸೇರಿಕೊಂಡು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ. ಕನ್ನಡದ ‘ಜನಕ’ ಸಿನಿಮಾ (Janaka Kannada Movie) ತಂಡ ಈ ಮಾತಿಗೆ ಲೇಟೆಸ್ಟ್​ ಉದಾಹರಣೆ. ಈ ಸಿನಿಮಾಗಾಗಿ ನಾಯಕ ನಟ ಮನು (Manu) ಮತ್ತು ಅವರ ಇಡೀ ಕುಟುಂಬದವರು ಶ್ರಮಿಸಿದ್ದಾರೆ. ಮನು ಅವರ ತಾಯಿ ಪ್ರೇಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಕೌಟುಂಬಿಕ ಕಥಾಹಂದರ ಇರಲಿದೆ. ತಂದೆ-ಮಗನ ಸೆಂಟಿಮೆಂಟ್​ ಇರುವ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರಲು ‘ಜನಕ’ ಸಿನಿಮಾ (Janaka Movie) ತಂಡ ಸಜ್ಜಾಗಿದೆ.

ಇತ್ತೀಚೆಗೆ ‘ಜನಕ’ ಸಿನಿಮಾದ ಹಾಡು ಮತ್ತು ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್​ ಅವರು ಆಗಮಿಸಿದ್ದರು. ಟ್ರೇಲರ್​ ಬಿಡುಗಡೆ ಮಾಡಿ ಅವರು ಶುಭ ಹಾರೈಸಿದರು. ‘ಕುಟುಂಬದವರೆಲ್ಲ ಸೇರಿ ಮಾಡಿದ ಫ್ಯಾಮಿಲಿ ಕಥೆ ಇರುವ ಸಿನಿಮಾ ಇದು. ತಾಯಿ, ಮಕ್ಕಳು, ಸೊಸೆ ಎಲ್ಲರೂ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಯಶಸ್ವಿ ಆಗಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಓಂ ಸಾಯಿ ಪ್ರಕಾಶ್​ ಹೇಳಿದರು.

ಮನು ಅವರು ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ‘ಇದು ಹಳ್ಳಿ ಪರಿಸರದ ಕಥೆ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಒಬ್ಬಳು ಹಳ್ಳಿಯಲ್ಲಿ ಇರುವವಳು, ಇನ್ನೊಬ್ಬಳು ಆಚೆಯಿಂದ ಬರುವವಳು. ಕೌಟುಂಬಿಕ ಪ್ರೇಕ್ಷಕರಿಗೆ ಇದು ಉತ್ತಮ ಮನರಂಜನೆ ನೀಡುತ್ತದೆ. ಇದು ನನ್ನ ಮೊದಲ ಹೆಜ್ಜೆ. ಜನರ ಆಶೀರ್ವಾದ ಬೇಕು. ನಾನು, ನಮ್ಮ ತಾಯಿ ಹಾಗೂ ತಮ್ಮ ಅಣ್ಣ ಬಹಳ ಕಷ್ಟಪಟ್ಟು ಈತನಕ ಬಂದಿದ್ದೇವೆ. ಸಿನಿಮಾ ನಿರ್ಮಾಣ ಮಾಡಿರುವ ತಮ್ಮ ತಾಯಿಗೆ ಇದು ದೊಡ್ಡ ಯಶಸ್ಸು’ ಎಂದು ಮನು ಹೇಳಿದ್ದಾರೆ.

‘ಜನಕ’ ಸಿನಿಮಾದಲ್ಲಿ ಮನು ಜೊತೆ ರಕ್ಷಾ, ಶಾಲಿನಿ, ಸುರೇಶ್​ ಬಾಬು, ರಾಜಲಕ್ಷ್ಮಿ, ಎಂಜಿಆರ್​ಕೆ ಪಲ್ಲವಿ, ಆನಂದ್​ ಮುಂತಾದವರು ನಟಿಸಿದ್ದಾರೆ. ಸುರೇಶ್​ ಬಾಬು ಅವರಿಗೆ ಈ ಸಿನಿಮಾದಲ್ಲಿ ತಂದೆಯ ಪಾತ್ರ ನೀಡಲಾಗಿದೆ. ಕಥಾನಾಯಕನ ತಾಯಿಯಾಗಿ ರಾಜಲಕ್ಷ್ಮಿ ನಟಿಸಿದ್ದಾರೆ. ಆನಂದ್​ ಅವರು ಖಳನಾಯಕನ ಪಾತ್ರ ಮಾಡಿದ್ದಾರೆ. ಕೌರವ ವೆಂಕಟೇಶ್​ ಅವರು ‘ಜನಕ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ರಣಧೀರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಡುಗಳಿಗೆ ರಾಘವ ಸುಭಾಷ್​ ಅವರ ಸಂಗೀತ ನಿರ್ದೇಶನವಿದೆ. ಸಲಾಂ ವೀರೋಲಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗದಲ್ಲಿ ಸ್ಟಾರ್​ ಯಾರೂ ಇಲ್ಲ’: ನೇರವಾಗಿ ಹೇಳಿದ ನಟ ಧ್ರುವ ಸರ್ಜಾ

‘ಈ ಸಿನಿಮಾ ನಿಂತುಹೋಗುತ್ತೆ ಎಂದು ಅನೇಕರು ಹೆದರಿಸಿದ್ದರು. ಆದರೆ ಕಷ್ಟಪಟ್ಟು ನಾವು ಈ ಸಿನಿಮಾದ ಕೆಲಸ ಮುಗಿಸಿದ್ದೇವೆ. ನನ್ನ ದೊಡ್ಡ ಮಗ, ಸೊಸೆ, ಚಿಕ್ಕ ಮಗ ಎಲ್ಲ ಸೇರಿ ನನ್ನ ಜೊತೆ ನಿಂತರು. ಹೀರೋಯಿನ್​ ಪಾತ್ರಕ್ಕೆ ನನ್ನ ಸೊಸೆ ಧ್ವನಿ ನೀಡಿದ್ದಾಳೆ. ಎರಡನೇ ಹೀರೋಯಿನ್​ಗೆ ಚಿಕ್ಕ ಮಗನ ಪ್ರೇಯಸಿ ವಾಯ್ಸ್​ ಕೊಟ್ಟಿದ್ದಾಳೆ’ ಎಂದಿದ್ದಾರೆ ನಿರ್ಮಾಪಕಿ ಪ್ರೇಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ