‘ಐಎಂಡಿಬಿ ಟಾಪ್ 100’ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್​; ಎಷ್ಟನೇ ಸ್ಥಾನ?

ನಟ ಯಶ್​ ಅವರು ‘ಟಾಕ್ಸಿಕ್​’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಇದೆ. ಐಎಂಡಿಬಿ ಪ್ರಕಟಿಸಿದ ಟಾಪ್​ 100 ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಶ್​ ಕೂಡ ಇದ್ದಾರೆ. ಇದರಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ನಟ ಅವರು. ಬೇರೆ ಭಾಷೆಯ ಯಾವೆಲ್ಲ ನಟರು ಈ ಪಟ್ಟಿಯಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

‘ಐಎಂಡಿಬಿ ಟಾಪ್ 100’ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್​; ಎಷ್ಟನೇ ಸ್ಥಾನ?
ಯಶ್​
Follow us
ಮದನ್​ ಕುಮಾರ್​
|

Updated on: May 29, 2024 | 5:22 PM

‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅದಕ್ಕೆ ಕಾರಣ ಆಗಿದ್ದು ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳ ಯಶಸ್ಸು. ಭಾರತದ ಅನೇಕ ಸೆಲೆಬ್ರಿಟಿಗಳಿಗೆ ಯಶ್​ ಪೈಪೋಟಿ ನೀಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಪಟ್ಟಿ ಬಿಡುಗಡೆ ಆಗಿದೆ. ಐಎಂಡಿಬಿ (IMDb) ವೆಬ್​ಸೈಟ್​ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಭಾರತದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಶ್​ ಕೂಡ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡಿಗ ಅವರು ಎಂಬುದು ಹೆಮ್ಮೆಯ ವಿಚಾರ. ಟಾಪ್​ 10 ಸೆಲೆಬ್ರಿಟಿಗಳಲ್ಲಿ (IMDb Top 100 Indian celebrities) ಯಶ್​ ಅವರಿಗೆ 89ನೇ ಸ್ಥಾನ ಸಿಕ್ಕಿದೆ.

ಕಳೆದ 10 ವರ್ಷಗಳಲ್ಲಿ, ಅಂದರೆ 2014ರ ಏಪ್ರಿಲ್​ ತಿಂಗಳಿಂದ 2024ರ ಏಪ್ರಿಲ್​ವರೆಗೆ ಐಎಂಡಿಬಿ ವೆಬ್​ಸೈಟ್​ನಲ್ಲಿ ಸೆಲೆಬ್ರಿಟಿಗಳ ಪ್ರೊಫೈಲ್​ ಪುಟಕ್ಕೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂಬುದರ ಆಧಾರದ ಮೇಲೆ ಈ ಪಟ್ಟಿ ಸಿದ್ಧವಾಗಿದೆ. ನಟಿ ದೀಪಿಕಾ ಪಡುಕೋಣೆ ಅವರ ಪುಟಯನ್ನು ಅತಿ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಹಾಗಾಗಿ ಅವರಿಗೆ ನಂಬರ್​ ಸ್ಥಾನ ಸಿಕ್ಕಿದೆ. 89ನೇ ಸ್ಥಾನದಲ್ಲಿ ಯಶ್​ ಇದ್ದಾರೆ.

ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾ ನಾಯಕಿ ಯಾರು? ಗೊಂದಲ ಸೃಷ್ಟಿಸಿದೆ ಹೆಸರುಗಳು

ಯಶ್​ ಅವರನ್ನು ಹೊರತುಪಡಿಸಿ ಕನ್ನಡದ ಬೇರೆ ಯಾವುದೇ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಅಕ್ಕಪಕ್ಕದ ರಾಜ್ಯದ ಸೆಲೆಬ್ರಿಟಿಗಳು ಈ ಪಟ್ಟಿಯಲ್ಲಿ ಇದ್ದಾರೆ. ಹೆಚ್ಚಿನ ಸ್ಥಾನವನ್ನು ಬಾಲಿವುಡ್ ಮಂದಿ ಆಕ್ರಮಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪೈಕಿ ಕೆಲವರು ಇದರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 13ನೇ ಸ್ಥಾನದಲ್ಲಿ ಸಮಂತಾ ರುತ್​ ಪ್ರಭು ಇದ್ದಾರೆ.

16ನೇ ಸ್ಥಾನದಲ್ಲಿ ತಮನ್ನಾ ಭಾಟಿಯಾ, 18ನೇ ಸ್ಥಾನದಲ್ಲಿ ನಯನತಾರಾ, 29ನೇ ಸ್ಥಾನದಲ್ಲಿ ಪ್ರಭಾಸ್​, 30ನೇ ಸ್ಥಾನದಲ್ಲಿ ಧನುಷ್​, 31ನೇ ಸ್ಥಾನದಲ್ಲಿ ರಾಮ್​ ಚರಣ್​, 35ನೇ ಸ್ಥಾನದಲ್ಲಿ ದಳಪತಿ ವಿಜಯ್​, 42ನೇ ಸ್ಥಾನದಲ್ಲಿ ರಜನಿಕಾಂತ್​, 43ನೇ ಸ್ಥಾನದಲ್ಲಿ ವಿಜಯ್​ ಸೇತುಪತಿ, 47ನೇ ಸ್ಥಾನದಲ್ಲಿ ಅಲ್ಲು ಅರ್ಜುನ್​, 48ನೇ ಸ್ಥಾನದಲ್ಲಿ ಮೋಹನ್​ಲಾಲ್​, 50ನೇ ಸ್ಥಾನದಲ್ಲಿ ಆರ್​. ಮಾಧವನ್​ ಇದ್ದಾರೆ.

ಶ್ರಿಯಾ ಶರಣ್​ ಅವರಿಗೆ 53ನೇ ಸ್ಥಾನ, ಕಮಲ್​ ಹಾಸನ್​ಗೆ 54ನೇ ಸ್ಥಾನ, ಶ್ರುತಿ ಹಾಸನ್​ಗೆ 58ನೇ ಸ್ಥಾನ, ಸೂರ್ಯ ಅವರಿಗೆ 62ನೇ ಸ್ಥಾನ, ಮಮ್ಮುಟ್ಟಿ ಅವರಿಗೆ 63ನೇ ಸ್ಥಾನ ಸಿಕ್ಕಿದೆ. ಪೂಜಾ ಹೆಗ್ಡೆ ಅವರು 66ನೇ ಸ್ಥಾನದಲ್ಲಿ ಇದ್ದಾರೆ. 67ನೇ ಸ್ಥಾನದಲ್ಲಿ ಜೂನಿಯರ್​ ಎನ್​ಟಿಆರ್​, 72ನೇ ಸ್ಥಾನದಲ್ಲಿ ಮಹೇಶ್​ ಬಾಬು, 78ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ, 81ನೇ ಸ್ಥಾನದಲ್ಲಿ ಫಹಾದ್​ ಫಾಸಿಲ್​, 82ನೇ ಸ್ಥಾನದಲ್ಲಿ ರಕುಲ್​ ಪ್ರೀತ್​ ಸಿಂಗ್​, 84ನೇ ಸ್ಥಾನದಲ್ಲಿ ತ್ರಿಶಾ ಕೃಷ್ಣನ್​, 86ನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ ಇದ್ದಾರೆ. ವಿಕ್ರಮ್​ ಅವರು 92ನೇ ಸ್ಥಾನ ಪಡೆದಿದ್ದಾರೆ. 97ನೇ ಸ್ಥಾನದಲ್ಲಿ ಪ್ರಿಯಾಮಣಿ ಇದ್ದಾರೆ. 98ನೇ ಸ್ಥಾನ ಅಜಿತ್​ಗೆ ಸಿಕ್ಕಿದೆ. 100ನೇ ಸ್ಥಾನದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು