‘ನೀನು ಯಾರು ಅಂತ ಅಣ್ಣಾವ್ರು ಬಂದು ಮಾತನಾಡಿಸಬೇಕಿತ್ತಯ್ಯ?’; ಅಂಬಿಗೆ ಬಂದಿತ್ತು ಖಾರದ ಮಾತು

‘ರಾಜ್​ಕುಮಾರ್ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ ಅವರು ಹೃದಯದಲ್ಲಿದ್ದಾರೆ. ಅದನ್ನು ಯಾರಿಂದಲೂ ತೆಗೆಯೋಕೆ ಸಾಧ್ಯ ಇಲ್ಲ. ಅವರ ಪ್ರತಿಭೆ ಬಗ್ಗೆ ಮಾತನಾಡೋವಷ್ಟು ದೊಡ್ಡವರು ನಾನಲ್ಲ’ ಎಂದು ವೇದಿಕೆ ಮೇಲೆ ನಿಂತು ಮಾತು ಆರಂಭಿಸಿದ್ದರು ಅಂಬರೀಷ್.

‘ನೀನು ಯಾರು ಅಂತ ಅಣ್ಣಾವ್ರು ಬಂದು ಮಾತನಾಡಿಸಬೇಕಿತ್ತಯ್ಯ?’; ಅಂಬಿಗೆ ಬಂದಿತ್ತು ಖಾರದ ಮಾತು
ರಾಜ್​ಕುಮಾರ್-ಅಂಬರೀಷ್
Follow us
ರಾಜೇಶ್ ದುಗ್ಗುಮನೆ
|

Updated on:May 29, 2024 | 12:01 PM

ರಾಜ್​ಕುಮಾರ್ ಹಾಗೂ ಅಂಬರೀಷ್ (Ambareesh) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ‘ಒಡ ಹುಟ್ಟಿದವರು’ ಸಿನಿಮಾದಲ್ಲಿ ಅಣ್ಣಾವ್ರು ಹಾಗೂ ಅಂಬಿ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಲು ಇದೂ ಕೂಡ ಕಾರಣ ಆಗಿತ್ತು. ಅಂಬರೀಷ್ ಅವರು ಕಾರ್ಯಕ್ರಮ ಒಂದರಲ್ಲಿ ಹಳೆಯ ಘಟನೆಯ ಬಗ್ಗೆ ಹೇಳಿಕೊಂಡಿದ್ದರು. ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆಗಲೇ ರಾಜ್​ಕುಮಾರ್ ದೊಡ್ಡ ಸ್ಟಾರ್. ಅಂಬಿಯನ್ನು ರಾಜ್​ಕುಮಾರ್ ಅವರೇ ಬಂದು ಮಾತನಾಡಿಸಿದ್ದರಂತೆ. ಇದರಿಂದಾಗಿ ಅವರು ತಾಯಿ ಬಳಿ ಬೈಸಿಕೊಳ್ಳಬೇಕಾಯಿತು. ಈ ಬಗ್ಗೆ ಅಂಬರೀಷ್ ಮಾತನಾಡಿದ್ದರು.

‘ರಾಜ್​ಕುಮಾರ್ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ ಅವರು ಹೃದಯದಲ್ಲಿದ್ದಾರೆ. ಅದನ್ನು ಯಾರಿಂದಲೂ ತೆಗೆಯೋಕೆ ಸಾಧ್ಯ ಇಲ್ಲ. ಅವರ ಪ್ರತಿಭೆ ಬಗ್ಗೆ ಮಾತನಾಡೋವಷ್ಟು ದೊಡ್ಡವರು ನಾನಲ್ಲ’ ಎಂದು ವೇದಿಕೆ ಮೇಲೆ ನಿಂತು ಮಾತು ಆರಂಭಿಸಿದ್ದರು ಅಂಬರೀಷ್.

‘ನನಗೆ ಅವಾರ್ಡ್ ಬಂದಿತ್ತು. ಅದು ನನ್ನ ಮೊದಲ ಅವಾರ್ಡ್. ಅವಾರ್ಡ್ ಕಾರ್ಯಕ್ರಮಕ್ಕೆ ನನ್ನ ತಾಯಿಯನ್ನೂ ಕರೆದುಕೊಂಡು ಹೋದೆ. ಆ ಕಾರ್ಯಕ್ರಮಕ್ಕೆ ರಾಜ್​ಕುಮಾರ್ ಬಂದಿದ್ದರು. ನನ್ನ ತಾಯಿಗೆ ರಾಜ್​ಕುಮಾರ್ ದೇವರಿದ್ದಂತೆ. ಹೋಗಿ ನಮಸ್ಕಾರ ಮಾಡು ಎಂದರು. ನಾವು ಕತ್ತಲೆಯಲ್ಲಿ ಕೂತಿದ್ದೇವೆ, ನಮಸ್ಕಾರ ಮಾಡಿದರೆ ಅವರಿಗೆ ಕಾಣಲ್ಲ ಎಂದೆ’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದರು ಅಂಬಿ.

‘ರಾಜಣ್ಣ ಅವರು ನನ್ನನ್ನು ನೋಡಿದರು. ನನ್ನ ಬಳಿ ಬಂದು ಹೇಗಿದ್ದೀರಾ ಅಂಬರೀಷ್ ಎಂದರು. ನೀನು ಯಾರು ಅಂತ ಅವರು ಬಂದು ಮಾತನಾಡಿಸಬೇಕಿತ್ತಯ? ನಿನಗೆ ಹೋಗಿ ಮತನಾಡಿಸೋಕೆ ಆಗುತ್ತಿರಲಿಲ್ಲವಾ? ಎಂದು ಕೇಳುತ್ತಲೇ ಇದ್ದರು. ಅಮ್ಮ ಮೈಸೂರಿನವರಿಗೂ ನನ್ನನ್ನು ಬಿಟ್ಟಿಲ್ಲ. ದೊಡ್ಡವರು ಬಂದು ಚಿಕ್ಕವರನ್ನು ಮಾತನಾಡಿಸಿದ್ರೆ ಅವರ ಮೇಲಿನ ಗೌರವ ಹೆಚ್ಚುತ್ತದೆ ಎಂದು ಅಮ್ಮನಿಗೆ ಹೇಳಿದ್ದೆ’ ಎಂದಿದ್ದರು ಅಂಬರೀಷ್.

ಇದನ್ನೂ ಓದಿ: ಅಂಬರೀಷ್​ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟವರು ಯಾರು ಗೊತ್ತಾ? 

ಯಾವುದೇ ವಿಷಯ ಬಂದರೂ ರಾಜ್​ಕುಮಾರ್ ಅವರು ಅಂಬರೀಷ್ ಪರ ನಿಲ್ಲುತ್ತಿದ್ದರಂತೆ. ‘ಒಡಹುಟ್ಟಿದವರು ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರಾದ ದೊರೈ-ಭಗವಾನ್ ಬೇಗ ಬರುವಂತೆ ನನಗೆ ಹೇಳುತ್ತಿದ್ದರು. ರಾಜ್​ಕುಮಾರ್ ಸಿನಿಮಾ ಅವರ ಶೂಟಿಂಗ್ ಮೊದಲು ಮಾಡಬೇಕಲ್ಲವೇ ಎಂದು ಕೇಳುತ್ತಿದ್ದೆ. ರಾಜ್​ಕುಮಾರ್ ಅವರ ಬಳಿ ಯಾವಾಗ ಬರಲಿ ಎಂದು ಕೇಳಿದರೆ ಯಾವಾಗ ಬೇಕಿದ್ದರೂ ಬನ್ನಿ ಎನ್ನುತ್ತಿದ್ದರು’ ಎಂದಿದ್ದಾರೆ ಅಂಬಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Wed, 29 May 24

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ