‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು.

‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
‘ತಂದೆ ಎಂದಿಗೂ ಗತ್ತು ಬಿಟ್ಟುಕೊಟ್ಟಿಲ್ಲ’; ರವಿಚಂದ್ರನ್ ಬಗ್ಗೆ ಪುತ್ರ ಮನೋರಂಜನ್ ಮಾತು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 29, 2024 | 12:56 PM

ಮೇ 30 ನಟ ರವಿಚಂದ್ರನ್ (Ravichandran) ಅವರ ಜನ್ಮದಿನ. ಅವರಿಗೆ ಎಲ್ಲರೂ ಮುಂಚಿತವಾಗಿ ಶುಭಾಶಯ ಕೋರುತ್ತಿದ್ದಾರೆ. ರವಿಚಂದ್ರನ್ ಕ್ರೇಜಿಸ್ಟಾರ್, ನಟ-ನಿರ್ದೇಶಕ-ನಿರ್ಮಾಪಕ ಅನ್ನೋದು ಎಲ್ಲರಿಗೂ ಗೊತ್ತು. ಅವರು ನಿಜ ಜೀವನದಲ್ಲಿ ಹೇಗಿರುತ್ತಾರೆ? ಕುಟುಂಬದ ಮೇಲೆ ಅವರಿಗೆ ಇರೋ ಪ್ರೀತಿ ಎಂಥದ್ದು ಎಂಬುದನ್ನು ಅವರ ಪುತ್ರ ಮನೋರಂಜನ್ ಅವರು ರವಿಚಂದ್ರನ್ ಬರ್ತ್​ಡೇ ಸಂದರ್ಭದಲ್ಲಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ನನಗೆ ನನ್ನ ತಂದೆ ಯಾವಾಗಲೂ ಸ್ಟಾರ್ ಆಗಿಯೇ ಕಾಣೋದು. ತೆರೆಮೇಲೆ ಯಾವ ರೀತಿ ಇರುತ್ತಾರೋ ನಿಜ ಜೀವನದಲ್ಲೂ ಹಾಗೆಯೇ ಇರುತ್ತಾರೆ. ಅವರು ಗತ್ತನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ’ ಎಂದಿದ್ದಾರೆ ಮನೋರಂಜನ್. ಸಿನಿಮಾ ರಂಗವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಸೆಲೆಬ್ರಿಟಿಗಳು ಮಕ್ಕಳಿಗೆ ಫೋರ್ಸ್ ಮಾಡುತ್ತಾರೆ. ಆದರೆ, ರವಿಚಂದ್ರನ್ ಈ ವಿಚಾರದಲ್ಲಿ ಆ ರೀತಿ ಇಲ್ಲ. ‘ನಟನೆ ನನ್ನ ಆಯ್ಕೆ. ಅವರು ಫೋರ್ಸ್ ಮಾಡಿಲ್ಲ. ನಾನು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದು ಅವರಿಗೆ ಶಾಕ್ ಎನಿಸಿತು. ಹಾಬಿ ರೀತಿ ಇರಲಿ ಎಂದು ಸಣ್ಣ ವಯಸ್ಸಿನಲ್ಲೇ ನನ್ನನ್ನು ಮ್ಯೂಸಿಕ್ ಕ್ಲಾಸ್​ಗೆ ಸೇರಿಸಿದ್ರು. ಆಗಲೂ ನನ್ನ ಗಮನ ನಟನೆ ಬಗ್ಗೆ ಇತ್ತು’ ಎಂದಿದ್ದಾರೆ ಅವರು.

ಸ್ಟಾರ್ ಮಕ್ಕಳು ಎಂದಾಗ ಸ್ಕೂಲ್​ನಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇರುತ್ತದೆ. ವಿಶೇಷ ಎಂದರೆ ಶಿಕ್ಷಣ ಕಲಿಯುವಾಗ ಮನೋರಂಜನ್ ಆ ವಿಚಾರಗಳನ್ನು ಶಾಲಾ-ಕಾಲೇಜಿನಲ್ಲಿ ರಿವೀಲ್ ಮಾಡಿಯೇ ಇರಲಿಲ್ಲವಂತೆ. ಇದು ಮನೋರಂಜನ್​ಗೆ ತಂದೆ-ತಾಯಿ ಹೇಳಿಕೊಟ್ಟ ಪಾಠ. ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ ಅವರು. ‘ನಾನು ರವಿಚಂದ್ರನ್ ಮಗ ಎನ್ನುವ ವಿಚಾರವನ್ನು ಎಂದೂ ಆಚೆ ಹೇಳಿಲ್ಲ. ನಮ್ಮ ತಂದೆ ತಾಯಿ ನಮ್ಮನ್ನು ಬೆಳೆಸಿದ್ದು ಹಾಗೆ. ಒಂದೊಮ್ಮೆ ಗೊತ್ತಾದ್ರೆ ನಮಗೇನು ಎರಡು ಕೊಂಬು ಇದೆಯಾ ಅಂತ ಕೇಳು ಎಂದು ಅಮ್ಮ ಹೇಳಿದ್ರು. ಸಾಮಾನ್ಯರಂತೆ ಇರಬೇಕು ಅನ್ನೋದು ಅವರ ಉದ್ದೇಶ ಆಗಿತ್ತು’ ಎಂದಿದ್ದಾರೆ ಮನೋರಂಜನ್. ‘ನಮ್ಮ ತಂದೆ ತುಂಬಾನೇ ಡೆಡಿಕೇಟ್. ಅವರು ನಿತ್ಯ ಮುಂಜಾನೆ 4-5 ಗಂಟೆಗೆ ಏಳುತ್ತಾರೆ. ಆರು ಗಂಟೆ ಮೇಲೆ ಏಕೆ ಮಲಗುತ್ತೀರಾ ಎಂದು ಕೇಳುತ್ತಾರೆ. ಅವರಿಂದ ಕಲಿತಿದ್ದು ತುಂಬಾ ವಿಷಯಗಳಿವೆ. ಅವರಿಂದ ಒಂದು ದಿನಕ್ಕೆಲ್ಲ ಕಲಿಯೋಕೆ ಆಗಲ್ಲ, ತುಂಬಾ ವರ್ಷಗಳೇ ಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? ಯಾರಿಗೆ ಸಿಕ್ತು ಗೋಲ್ಡನ್ ಚಾನ್ಸ್? 

‘ಪ್ರೇಮಲೋಕ 2’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಮನೋರಂಜನ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಇದಕ್ಕಾಗಿ ಅವರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ