‘ಸ್ವರ್ಗದಲ್ಲಿರೋ ಅಂಬರೀಷ್ಗೆ ಜನ್ಮದಿನದ ಶುಭಾಶಯ’; ಪ್ರೀತಿಯಿಂದ ಕವಿತೆ ಬರೆದ ಸುಮಲತಾ
ಅಂಬರೀಷ್ ಅವರ ಬಾಲ್ಯದ ಫೋಟೋ, ಯಂಗ್ ಆಗಿದ್ದಾಗಿನ ಫೋಟೋ ಹಾಗೂ ವಯಸ್ಸಾದ ಮೇಲಿನ ಫೋಟೋಗಳನ್ನು ಸುಮಲತಾ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಪ್ರೀತಿಯಿಂದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕವನ ರೂಪದಲ್ಲಿ ಈ ಸಾಲುಗಳು ಇವೆ.
ಸುಮಲತಾ (Sumalatha) ಅಂಬರೀಷ್ ಹಾಗೂ ಅಂಬರೀಷ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ, ಈಗ ಅಂಬಿ ನಮ್ಮ ಜೊತೆ ಇಲ್ಲ. ಅವರಿಲ್ಲದೆ ಆರು ವರ್ಷ ಕಳೆಯುತ್ತಾ ಬಂದಿದೆ. ಈಗ ಅಂಬಿ ಜನ್ಮದಿನಕ್ಕೆ ಸುಮಲತಾ ಬರ್ತ್ಡೇ ವಿಶ್ ತಿಳಿಸಿದ್ದಾರೆ. ‘ಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳು’ ಎಂದು ಸುಮಲತಾ ಹೇಳಿದ್ದಾರೆ.
ಅಂಬರೀಷ್ ಅವರ ಬಾಲ್ಯದ ಫೋಟೋ, ಯಂಗ್ ಆಗಿದ್ದಾಗಿನ ಫೋಟೋ ಹಾಗೂ ವಯಸ್ಸಾದ ಮೇಲಿನ ಫೋಟೋಗಳನ್ನು ಸುಮಲತಾ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಪ್ರೀತಿಯಿಂದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕವನ ರೂಪದಲ್ಲಿ ಈ ಸಾಲುಗಳು ಇವೆ.
‘ನಿಮ್ಮ ನೆನಪಾಗುತ್ತಿದೆ..
ಯಾವಾಗಲೂ ನಗು ತರುತ್ತದೆ..
ನಿನ್ನನ್ನು ಮಿಸ್ ಮಾಡಿಕೊಳ್ಳೋದು ಯಾವಾಗಲೂ ಉಳಿಯುವ ನೋವು..
ನೀವು ನಮ್ಮ ಜೀವನದ ಒಂದು ಭಾಗ
ಅದು ಪ್ರತಿ ದಿನ, ಪ್ರತಿ ಕ್ಷಣ ಮತ್ತು ಎಂದೆಂದಿಗೂ…
ನೀವು ಬದುಕನ್ನು ಮೀರಿದವರು
ನೀವೇ ಜೀವನ
ಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳು
ಎಂದು ಸಾಲುಗಳನ್ನು ಬರೆದುಕೊಂಡಿದ್ದಾರೆ ಅವರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಡಾ.ಅಂಬರೀಷ್ ಫೌಂಡೇಶನ್ ಹಾಗೂ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಧಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಂಡ್ಯದ ರೈತ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
View this post on Instagram
ಇದನ್ನೂ ಓದಿ: ಅಂಬರೀಷ್ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟವರು ಯಾರು ಗೊತ್ತಾ?
ಸುಮಲತಾ ಮಾತು
ಅಂಬರೀಷ್ ಅವರ ಸಮಾಧಿಗೆ ತೆರಳಿ ಸುಮಲತಾ ಪೂಜೆ ಸಲ್ಲಿಸಿದರು. ‘ಅಂಬಿ ಅವರು ನಮ್ಮ ಮನಸ್ಸಲ್ಲಿ ಅಷ್ಟೇ ಅಲ್ಲ ಅಭಿಮಾನಿಗಳ ಮನಸ್ಸಲ್ಲಿ ಇದ್ದಾರೆ. ಆರು ವರ್ಷವಾದರೂ ಅಭಿಮಾನಿಗಳು ಈ ರೀತಿ ಸೆಲೆಬ್ರೇಷನ್ ಮಾಡುತ್ತಾರೆ. ಅವರು ಮಾಡಿದ ಒಳ್ಳೆ ಕೆಲಸಗಳಿಂದ ಜನ ಶಾಶ್ವತವಾಗಿ ಅವರನ್ನು ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಆ ಪ್ರೀತಿಯನ್ನೇ ನೋಡ್ಕೊಂಡು ನಾವು ತೃಪ್ತಿ ಪಡುತ್ತಿದ್ದೇವೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Wed, 29 May 24