ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ, ಅದರ ಅರ್ಥವೇನು?
ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹೊಸ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಸಾನ್ವಿ ಬರೆಸಿಕೊಂಡಿದ್ದಾರೆ. ಟ್ಯಾಟೂವಿನ ಅರ್ಥವನ್ನು ಸಹ ಅವರೇ ಹೇಳಿದ್ದಾರೆ.
ಸುದೀಪ್ (Sudeep) ಪುತ್ರಿ ಸಾನ್ವಿ ಸುದೀಪ್ ನಿಧಾನಕ್ಕೆ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿರುವಂತಿದೆ. ಸಂಗೀತದ ಬಗ್ಗೆ ಆಸಕ್ತಿ ಹೊಂದಿರುವ ಸಾನ್ವಿ ಹಾಡು ಬರೆಯುವ, ಹಾಡುವ ಹವ್ಯಾಸ ಹೊಂದಿದ್ದಾರೆ. ಈಗಾಗಲೇ ಸುದೀಪ್ರ ಸೋದರಳಿಯ ಸಂಚಿತ್ರ ‘ಜಿಮ್ಮಿ’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಅಪ್ಪ-ಅಮ್ಮನ ಮುದ್ದಿನ ಮಗಳಾದ ಸಾನ್ವಿ, ಪೋಷಕರು ಖುಷಿ ಪಡುವ ಕಾರ್ಯಗಳನ್ನು ಆಗಿದ್ದಾಂಗೆ ಮಾಡುತ್ತಿರುತ್ತಾರೆ. ಇದೀಗ ಸಾನ್ವಿ ಪುಟ್ಟ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳಲು ಕಾರಣವೂ ಇದೆ.
ಸಾನ್ವಿ ಸುದೀಪ್, ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಲ್ಲ. ಪೀಕು, ಸಾನ್ವಿಯ ತಾಯಿ ಪ್ರಿಯಾ ಸುದೀಪ್ರ ಅಡ್ಡ ಹೆಸರು. ಪ್ರಿಯಾ ಸುದೀಪ್ರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ. ಹಾಗಾಗಿ ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಮಾದರಿಯಲ್ಲಿ ಸಾನ್ವಿ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ ಹಲವಾರು ಲೈಕ್, ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ:Sanvi Sudeep: ‘ಮತ್ತಷ್ಟು ಬರೋದಿದೆ’; ಕುತೂಹಲ ಮೂಡಿಸಿದ ಸಾನ್ವಿ ಸುದೀಪ್ ಫೋಟೋಶೂಟ್
‘ನೀವೆಲ್ಲ ಏನಾದರೂ ಅಂದುಕೊಳ್ಳುವ ಮೊದಲು ನಾನೇ ಹೇಳುಬಿಡುತ್ತೇನೆ. ‘ಪೀಕು’ ಎಂಬುದು ಅಡ್ಡ ಹೆಸರು. ನನ್ನ ತಾಯಿಯನ್ನು ಅವರ ತಾತ ಪೀಕು ಎಂದೇ ಕರೆಯುತ್ತಿದ್ದರು’ ಎಂದು ಸ್ಟೋರಿ ಹಾಕಿಕೊಂಡಿದ್ದಾರೆ ಸಾನ್ವಿ ಸುದೀಪ್. ಸಾನ್ವಿನ ತಾಯಿ ಪ್ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸಾನ್ವಿ ಸುದೀಪ್ ಅವರದ್ದು ಬಹುಮುಖ ಪ್ರತಿಭೆ. ಹಾಡು ಹಾಡುವುದು, ಬರೆಯುವುದು, ಚಿತ್ರ ಬಿಡಿಸುವುದು ಇನ್ನೂ ಕೆಲವು ಕಲಾ ಪ್ರಕಾರಗಳಲ್ಲಿ ಸಾನ್ವಿ ಆಸಕ್ತಿವಹಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್ರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸುದೀಪ್ರ ಮ್ಯಾಕ್ಸ್ ಸಿನಿಮಾದಲ್ಲಿ ಸಹ ಸಾನ್ವಿ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸಾನ್ವಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಸಾನ್ವಿ, ಚಿತ್ರರಂಗದಲ್ಲಿ ಇನ್ನಷ್ಟು ಸಕ್ರಿಯರಾಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ