ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೊಕ್ಕಿರುವ ಹೆಚ್ ಡಿ ರೇವಣ್ಣ ಮಂದಿರದ ಬಳಿ ಟಿವಿ9 ವರದಿಗಾರನಿಗೆ ಏನೂ ಕೇಳಬೇಡಿ ಅಂದರು

. ಭವಾನಿ ಅವರನ್ನೂ ಮತ್ತೊಂದು ಪ್ರಕರಣದಲ್ಲಿ ಬಂಧನದ ಭೀತಿ ಕಾಡುತ್ತಿದೆ. ತಮ್ಮ ಮೇಲಿದ್ದ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ರೇವಣ್ಣ ಅವರಿಗೆ ಒಂದರ ನಂತರ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಜ್ವಲ್ ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ರೇವಣ್ಣ ದಂಪತಿ ಸಹ ನಗರದಲ್ಲಿದ್ದಾರೆ.

ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೊಕ್ಕಿರುವ ಹೆಚ್ ಡಿ ರೇವಣ್ಣ ಮಂದಿರದ ಬಳಿ ಟಿವಿ9 ವರದಿಗಾರನಿಗೆ ಏನೂ ಕೇಳಬೇಡಿ ಅಂದರು
|

Updated on: May 31, 2024 | 10:44 AM

ಬೆಂಗಳೂರು: ನಿರೀಕ್ಷೆಯಂತೆ ಲೈಂಗಿಕ ಅಪರಾಧಗಳ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಭಾರತಕ್ಕೆ ಮರಳಿದ್ದಾರೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು (SIT officials) ಅವರನ್ನು ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಮಗ ವಿದೇಶಕ್ಕೆ ಪರಾರಿಯಾದಾಗಿನಿಂದ ಕಳವಳಕ್ಕೊಳಗಾಗಿದ್ದ ಶಾಸಕ ಹೆಚ್ ಡಿ ರೇವಣ್ಣ (HD Revanna) ಸಂಕಷ್ಟ ಪರಿಹಾರಕ್ಕಾಗಿ ತಮ್ಮ ಪತ್ನಿ ಭವಾನಿ ರೇವಣ್ಣರೊಂದಿಗೆ ದೇವಸ್ಥಾನಗಳಿಗೆ ತೆರಳಿ ಭಗವಂತನ ಮೊರೆ ಹೋಗುತ್ತಿದ್ದಾರೆ. ಭವಾನಿ ಅವರನ್ನೂ ಮತ್ತೊಂದು ಪ್ರಕರಣದಲ್ಲಿ ಬಂಧನದ ಭೀತಿ ಕಾಡುತ್ತಿದೆ. ತಮ್ಮ ಮೇಲಿದ್ದ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ರೇವಣ್ಣ ಅವರಿಗೆ ಒಂದರ ನಂತರ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಜ್ವಲ್ ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ರೇವಣ್ಣ ದಂಪತಿ ಸಹ ನಗರದಲ್ಲಿದ್ದಾರೆ. ಇಂದು ಬೆಳಗ್ಗೆ ಅವರು, ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಟಿವಿ9 ಬೆಂಗಳೂರು ವರದಿಗಾರ ಮಾತಾಡಿಸುವ ಪ್ರಯತ್ನ ಮಾಡಿದರು. ಅದರೆ ಕೈ ಮುಗೀತೀನ್ರಣ್ಣ, ದಯವಿಟ್ಟು ಏನನ್ನೂ ಕೇಳಬೇಡಿ ಎನ್ನುತ್ತಾ ಕಾರು ಹತ್ತಿ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿಂದ ಹೊರಬಂದು ನಿರಾಳರಾಗಿರುವ ಹೆಚ್ ಡಿ ರೇವಣ್ಣರಿಂದ ಬೆಂಗಳೂರಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ

Follow us