Abhishek Ambareesh Reception: ಅಂಬಿ ಪುತ್ರನ ಅದ್ದೂರಿ ರಿಸೆಪ್ಷನ್; ಅಭಿಷೇಕ್-ಅವಿವಾ ಆರತಕ್ಷತೆ ಕಾರ್ಯಕ್ರಮದ ಲೈವ್ ವಿಡಿಯೋ ಇಲ್ಲಿದೆ..
Abhishek Ambareesh Aviva Bidapa Reception: ರಿಸೆಪ್ಷನ್ಗೆ ಆಗಮಿಸುವವರಿಗಾಗಿ 3 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿದೆ. ವಿವಿಧ ಕ್ಷೇತ್ರದ ಗಣ್ಯರು ಹಾಜರಿ ಹಾಕುತ್ತಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಇಂದು (ಜೂನ್ 7) ನಡೆಯುತ್ತಿದೆ. ಇದಕ್ಕಾಗಿ ಸುಂದರವಾದ ವೇದಿಕೆ ನಿರ್ಮಾಣ ಆಗಿದೆ. ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನವ ಜೋಡಿಯ ರಿಸೆಪ್ಷನ್ಗೆ (Abhishek Ambareesh Reception) ವಿವಿಧ ಕ್ಷೇತ್ರದ ಗಣ್ಯರು ಹಾಜರಿ ಹಾಕುತ್ತಿದ್ದಾರೆ. ಸಂಜೆ 7 ಗಂಟೆಯಿಂದ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ರಿಸೆಪ್ಷನ್ಗೆ ಆಗಮಿಸುವವರಿಗಾಗಿ 3 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿದೆ. ಅಭಿಷೇಕ್ ಅಂಬರೀಷ್-ಅವಿವಾ ಬಿಡಪ (Aviva Bidapa) ರಿಸೆಪ್ಷನ್ ಲೈವ್ ವಿಡಿಯೋ ಇಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos