ಬಿಗ್ ಬಾಸ್ ಮನೆಗೆ ತೆರಳಿ ಅತಿಯಾಗಿ ತೂಕ ಕಳೆದುಕೊಂಡ ಅಭಿಷೇಕ್
ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಅಭಿಷೇಕ್ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ದೇಹದ ತೂಕ ಕಳೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾದರೆ ಅವರು ಎಷ್ಟು ದೇಹದ ತೂಕ ಕಳೆದುಕೊಂಡಿದ್ದಾರೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅವರಿಗೆ ಇದು ಶಾಕಿಂಗ್.
ಬಿಗ್ ಬಾಸ್ ಮನೆ ಹೊರಗಿನ ಪ್ರಪಂಚಕ್ಕಿಂತ ಭಿನ್ನ. ಅಲ್ಲಿ ಹೋಗೋದು ಸೆಲೆಬ್ರಿಟಿಗಳೇ ಆದರೂ ಅವರು ಊಟಕ್ಕೆ ಸಾಕಷ್ಟು ಕಷ್ಟಪಡಬೇಕು. ಪ್ರತಿ ವಾರ ಅಂದುಕೊಂಡಷ್ಟು ದಿನಸಿ ಸಿಗೋದಿಲ್ಲ. ಹೀಗಾಗಿ ಕೆಲವರು ದೇಹದ ತೂಕ ಕಳೆದುಕೊಂಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಯಲ್ಲಿ 11 ಕೆಜೆ ದೇಹದ ತೂಕ ಕಳೆದುಕೊಂಡೆ. ಸ್ಟ್ರೆಸ್ನಿಂದ ದೇಹದ ತೂಕ ಕಡಿಮೆ ಆಗಿರಬಹುದು. ಬಟ್ಟೆಗಳು ದೊಡ್ಡ ಆಗುತ್ತಿರುವಾಗ ಸಾಕಷ್ಟು ಟೆನ್ಶನ್ ಆಗಿತ್ತು’ ಎಂದಿದ್ದಾರೆ ಅಭಿಷೇಕ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

