ಸ್ಪಂದನಾ ವಿಜಯ್ 11ನೇ ದಿನದ ಕಾರ್ಯದಲ್ಲಿ ಸುಮಾರು 4 ಸಾವಿರ ಜನ ಭಾಗಿಯಾಗುವ ನಿರೀಕ್ಷೆ, 75 ಬಾಣಸಿಗರಿಂದ ಅಡುಗೆ ತಯಾರಿ

ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2023 | 11:42 AM

Spandana Vijay 11th day ritual: 75 ಬಾಣಸಿಗರಿಂದ ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಮೊದಲಾದ ಅಡುಗೆಗಳು ತಯಾರಾಗುತ್ತಿವೆ. ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12ಕ್ಕೆ ಊಟ ಶುರುವಾಗಲಿದೆ.

ಬೆಂಗಳೂರು: ಕುಟುಂಬದ ಕೆಲ ಸದಸ್ಯರೊಂದಿಗೆ ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra) ಆಗಸ್ಟ್ 6ರಂದು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿರುವ ಹೋಟೆಲೊಂದರಲ್ಲಿ ಲೋ ಬಿಪಿಯಿಂದ ಹೃದಯಾಘಾತಕ್ಕೊಳಗಾಗಿ ಕೇವಲ 41ನೇ ವಯಸ್ಸಿನಲ್ಲಿ ದಾರುಣ ಸಾವನ್ನಪ್ಪಿದರು. ಇಂದು ಅವರ 11 ನೇ ದಿನದ ಕಾರ್ಯವನ್ನು (11th day ritual) ನಗರದ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತವರುಮನೆಯಲ್ಲಿ (ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಮನೆ) ವ್ಯವಸ್ಥೆ ಮಾಡಲಾಗಿದೆ. ವಿಡಿಯೋದಲ್ಲಿ ಬಾಣಸಿಗರು ಅಡುಗೆ ತಯಾರಿ ನಡೆಸಿರುವುದನ್ನು ನೋಡಬಹುದು. ಸುಮಾರು 3ರಿಂದ 4 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. 75 ಬಾಣಸಿಗರಿಂದ (cooks) ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಮೊದಲಾದ ಅಡುಗೆಗಳು ತಯಾರಾಗುತ್ತಿವೆ. ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12ಕ್ಕೆ ಊಟ ಶುರುವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.