ಸ್ಪಂದನಾ ಮೃತದೇಹ ಸ್ವದೇಶಕ್ಕೆ ತರಲು ನೆರವಾದ ರಕ್ಷಿತ್ ಶಿವರಾಂ ಸ್ನೇಹಿತ ಪ್ರವೀಣ್ ಫರ್ನಾಂಡೀಸ್; ಅಕೆ ತನಗೂ ತಂಗಿಯಾಗಿದ್ದರು ಎಂದರು!

ಸ್ಪಂದನಾ ಮೃತದೇಹ ಸ್ವದೇಶಕ್ಕೆ ತರಲು ನೆರವಾದ ರಕ್ಷಿತ್ ಶಿವರಾಂ ಸ್ನೇಹಿತ ಪ್ರವೀಣ್ ಫರ್ನಾಂಡೀಸ್; ಅಕೆ ತನಗೂ ತಂಗಿಯಾಗಿದ್ದರು ಎಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 16, 2023 | 10:55 AM

ಮೂರು ದಿನಗಳವರೆಗೆ ರಕ್ಷಿತ್ ಅನುಭವಿಸಿದ ನೋವು ಮತ್ತು ದುಃಖವನ್ನು ತಾನು ಬಲ್ಲೆ ಎಂದು ಹೇಳುವ ಫರ್ನಾಡೀಸ್, ಬಹಳ ಶಾಂತ ಸ್ವಭಾದವರಾಗಿರುವ ರಕ್ಷಿತ್ ತಂಗಿಯ ಸಾವಿನ ಸುದ್ದಿ ಕಿವಿಗೆ ಬಿದ್ದಾಗ ಮಾತ್ರ ಕಿರುಚಾಡಿದ್ದನ್ನು ನೋಡಿದ್ದು ಎಂದರು.

ಮಂಗಳೂರು: ಆಗಸ್ಟ್ 6 ರಂದು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ (Bangkok) ಅಕಾಲಿಕ ಮೃತ್ಯುಗೀಡಾದ ಸ್ಪಂದನ ವಿಜಯರಾಘವೇಂದ್ರ (Spandana Vijay Raghavendra) ಅವರ ಮರಣೋತ್ತರ ಪರೀಕ್ಷೆ ಮತ್ತು ದೇಹವನ್ನು ಸ್ವದೇಶಕ್ಕೆ ತೆಗೆದುಕೊಂಡು ಬರಲು ಬಿಕೆ ಶಿವರಾಂ ಅವರ ಮಗ ರಕ್ಷಿತ್ ಶಿವರಾಂ (Rakshit Shivaram) ಸ್ನೇಹಿತರಾದ ಬೆಳ್ತಂಗಡಿಯ ವಿನ್ಸೆಂಟ್ ಮತ್ತು ಪ್ರವೀಣ್ ಫರ್ನಾಂಡೀಸ್ (Parveen Fernandes) ನೆರವಾಗಿದ್ದರು. ಸ್ಪಂದನಾ ನಿಧನರಾದಾಗ ಅವರಿಬ್ಬರು ಬ್ಯಾಂಕಾಕ್ ನಲ್ಲಿದ್ದರು. ಟಿವಿ9 ಕನ್ನಡ ವಾಹಿನಿಯ ಮಂಗಳೂರು ವರದಿಗಾರನೊಂದಿಗೆ ನಡೆಸಿರುವ ಮಾತತುಕತೆಯಲ್ಲಿ ಫರ್ನಾಡೀಸ್, ಬೆಳ್ತಂಗಡಿಯ ಭವಿಷ್ಯದ ನಾಯಕರಾಗಿರುವ ರಕ್ಷಿತ್ ಬಗ್ಗೆ ತಮಗೆ ಅಪಾರ ಗೌರವ ಆದರಗಳಿವೆ, ತಮ್ಮ ಸ್ನೇಹಕ್ಕೆ ಧರ್ಮ ಯಾವತ್ತೂ ಅಡ್ಡಿಯಾಗಿಲ್ಲ, ಸ್ಪಂದನಾ ತನಗೂ ತಂಗಿಯಂತಿದ್ದರು ಎಂದು ಹೇಳಿದರು. ಮೂರು ದಿನಗಳವರೆಗೆ ರಕ್ಷಿತ್ ಅನುಭವಿಸಿದ ನೋವು ಮತ್ತು ದುಃಖವನ್ನು ತಾನು ಬಲ್ಲೆ ಎಂದು ಹೇಳುವ ಫರ್ನಾಡೀಸ್, ಬಹಳ ಶಾಂತ ಸ್ವಭಾದವರಾಗಿರುವ ರಕ್ಷಿತ್ ತಂಗಿಯ ಸಾವಿನ ಸುದ್ದಿ ಕಿವಿಗೆ ಬಿದ್ದಾಗ ಮಾತ್ರ ಕಿರುಚಾಡಿದ್ದನ್ನು ನೋಡಿದ್ದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ