AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನಾ ಉತ್ತರ ಕ್ರಿಯೆಗೆ ಮಗನನ್ನು ಕರೆದುಕೊಂಡು ಬಂದ ವಿಜಯ್​ ರಾಘವೇಂದ್ರ

ಸ್ಪಂದನಾ ಉತ್ತರ ಕ್ರಿಯೆಗೆ ಮಗನನ್ನು ಕರೆದುಕೊಂಡು ಬಂದ ವಿಜಯ್​ ರಾಘವೇಂದ್ರ

ಮದನ್​ ಕುಮಾರ್​
|

Updated on: Aug 16, 2023 | 12:04 PM

Share

ಸ್ಪಂದನಾ ವಿಜಯ್​ ರಾಘವೇಂದ್ರ ಅವರ ತಂದೆ ಬಿ.ಕೆ. ಶಿವರಾಂ ನಿವಾಸದಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್​ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು ವಿಜಯ್​ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ.

ಸ್ಪಂದನಾ ಅವರ ನಿಧನದಿಂದ ವಿಜಯ್​ ರಾಘವೇಂದ್ರ (Vijay Raghavendra) ಕುಟುಂಬದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಇಂದು (ಆಗಸ್ಟ್ 16) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಬಡ್ಡಿ ಕ್ಲಬ್​ ಮೈದಾನದಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ (Spandana Vijay Raghavendra) ಅವರ ಉತ್ತರ ಕ್ರಿಯೆ ನಡೆಯುತ್ತಿದೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್​ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು (Vijay Raghavendra Son Shaurya) ವಿಜಯ್​ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ. ಅಂದಾಜು 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More