ಟಿಮ್ ಡೇವಿಡ್ ಸಿಡಿಲಬ್ಬರ… ಆದರೂ ಸೋತ ಬುಲ್ಸ್ ಪಡೆ

Updated on: Nov 19, 2025 | 1:54 PM

Abu Dhabi T10: 142 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಎಇ ಬುಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 48 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಏಕಾಂಗಿ ಹೋರಾಟಕ್ಕೆ ಕೈ ಹಾಕಿದರು.

ಯುಎಇನ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಅಬುಧಾಬಿ ಟಿ10 ಲೀಗ್​ನ 2ನೇ ಪಂದ್ಯದಲ್ಲಿ ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಸಿಡಿಲಬ್ಬರದ ಹೊರತಾಗಿಯೂ ಈ ಪಂದ್ಯದಲ್ಲಿ ಯುಎಇ ಬುಲ್ಸ್ ತಂಡ ಸೋಲನುಭವಿಸಿದೆ. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ ಪರ ಇಂಗ್ಲೆಂಡ್​ನ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆರಂಭಿಕನಾಗಿ ಕಣಕ್ಕಿಳಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ 29 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 78 ರನ್ ಬಾರಿಸಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು 10 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತು.

142 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಎಇ ಬುಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 48 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಏಕಾಂಗಿ ಹೋರಾಟಕ್ಕೆ ಕೈ ಹಾಕಿದರು.

ತಾನೆದುರಿಸಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​​ಗೆ ಒತ್ತು ನೀಡಿದ ಟಿಮ್ ಡೇವಿಡ್ 29 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 59 ರನ್ ಸಿಡಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಡೇವಿಡ್​ಗೆ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಯುಎಇ ಬುಲ್ಸ್ ತಂಡವು 10 ಓವರ್​ಗಳಲ್ಲಿ 135 ರನ್​ಗಳಿಸಿ 6 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಡೆಕ್ಕನ್ ಗ್ಲಾಡಿಯೇಟರ್ಸ್​ ಪ್ಲೇಯಿಂಗ್ 11: ಟಾಮ್ ಕೊಹ್ಲರ್-ಕ್ಯಾಡ್ಮೋರ್ , ಮಾರ್ಕಸ್ ಸ್ಟೊಯಿನಿಸ್ , ನಿಕೋಲಸ್ ಪೂರನ್ (ನಾಯಕ) , ಆ್ಯಂಡ್ರೆ ರಸೆಲ್ , ಲಾರಿ ಇವಾನ್ಸ್ , ಲ್ಯೂಕ್ ವುಡ್ , ಡೇವಿಡ್ ವೀಝ, ಅಜಯ್ ಕುಮಾರ್ , ಅಕೇಲ್ ಹೊಸೈನ್ , ರಿಚರ್ಡ್ ಗ್ಲೀಸನ್ , ಇಬ್ರಾರ್ ಅಹ್ಮದ್ , ಲಹಿರು ಕುಮಾರ.

ಯುಎಇ ಬುಲ್ಸ್ ಪ್ಲೇಯಿಂಗ್ 11: ಫಿಲ್ ಸಾಲ್ಟ್ , ಸುನಿಲ್ ನರೈನ್ , ರೋವ್ಮನ್ ಪೊವೆಲ್ , ಕೀರನ್ ಪೊಲಾರ್ಡ್ (ನಾಯಕ) , ಟಿಮ್ ಡೇವಿಡ್ , ಇಫ್ತಿಕಾರ್ ಅಹ್ಮದ್ , ಸಲ್ಮಾನ್ ಇರ್ಷಾದ್ , ಮೀರ್ ಹಮ್ಜಾ , ಜುನೈದ್ ಸಿದ್ದೀಕ್ , ಫರ್ಹಾನ್ ಖಾನ್ , ಫಝಲ್ಹಕ್ ಫಾರೂಕಿ , ಜೇಮ್ಸ್ ವಿನ್ಸ್.

 

 

Published on: Nov 19, 2025 01:53 PM