ರಚಿತಾ ರಾಮ್ ಕೂದಲಿಗೆ ಕೈ ಹಾಕಿ ಡೈಲಾಗ್ ಹೇಳಿದ ಧ್ರುವ; ‘ಕ್ರಿಮಿನಲ್’ ಮೊದಲ ಶಾಟ್
ರಚಿತಾ ರಾಮ್ ಅವರು ಧ್ರುವ ಜೊತೆ ‘ಕ್ರಿಮಿನಲ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರದ ಮೊದಲ ಶಾಟ್ ನ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಆ ಶಾಟ್ ಹೇಗಿತ್ತು? ಎಂಬ ವಿಡಿಯೋ ಇಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಚಿತಾ ರಾಮ್ ಅವರು ಧ್ರುವ ಅವರ ಜೊತೆ ‘ಕ್ರಿಮಿನಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಭರ್ಜರಿ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ನವೆಂಬರ್ 18ರಂದು ಚಿತ್ರದ ಮೊದಲ ಶಾಟ್ ತೆಗೆಯಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಪರಿಷೆ ನಡೆಯುತ್ತಿರುವ ಬುಲ್ ಟೆಂಪಲ್ ಎದುರಿನ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಇದನ್ನು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಚಿತಾ ಅವರ ಕೂದಲು ಹಿಡಿದು ಧ್ರುವ ಡೈಲಾಗ್ ಹೇಳಿದರು. ಇದು ಮೊದಲ ಶಾಟ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
