Loading video

ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ

Updated on: Jun 19, 2024 | 6:35 PM

ಜೂನ್ 19 ರಂದು ದೆಹಲಿಯಿಂದ ದರ್ಭಾಂಗಕ್ಕೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ಫ್ಲೈಟ್ SG 486 ನಲ್ಲಿದ್ದ ಎಸಿ ಕೈ ಕೊಟ್ಟ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ಪರದಾಡಿದ್ದಾರೆ. ಎಸಿ ಇಲ್ಲದೆ ಕೆಲ ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಬಿಸಿಲಿನ ಜಳಕ್ಕೆ ಕೈಗೆ ಸಿಕ್ಕ ಪತ್ರಿಕೆ, ಪುಸ್ತಕ ಮತ್ತು ನಿಯತಕಾಲಿಕೆಗಳಿಂದ ಗಾಳಿ ಬೀಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ದೆಹಲಿ, ಜೂನ್ 19: ದೆಹಲಿಯಿಂದ ದರ್ಭಾಂಗಕ್ಕೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ SG 486 ವಿಮಾನದಲ್ಲಿ ಎಸಿ (AC) ಸಮಸ್ಯೆ ಉಂಟಾಗಿತ್ತು. ಪರಿಣಾಮ ಸ್ಪೈಸ್‌ಜೆಟ್ ಪ್ರಯಾಣಿಕರು (passengers) ಎಸಿ ಇಲ್ಲದೆ ಪರದಾಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಬಿಸಿಗಾಳಿಯಿಂದ ಸಮಸ್ಯೆ ಉಂಟಾಗಿದ್ದು, ಎಸಿ ಇಲ್ಲದೆ ಕೆಲ ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ಬಿಸಿಲಿನ ಜಳಕ್ಕೆ ಕೈಗೆ ಸಿಕ್ಕ ಪತ್ರಿಕೆ, ಪುಸ್ತಕ ಮತ್ತು ನಿಯತಕಾಲಿಕೆಗಳಿಂದ ಗಾಳಿ ಬೀಸಿಕೊಳ್ಳುತ್ತಿರುವುನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ರೋಹನ್ ಕುಮಾರ್​ ಎಂಬ ಪ್ರಯಾಣಿಕ ಘಟನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.