PM Modi Karnataka Visit | ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳಿಗೆ ನನಗೆ ಆಹ್ವಾನವಿರಲಿಲ್ಲ: ಬಿ ಶ್ರೀರಾಮುಲು, ಸಾರಿಗೆ ಸಚಿವ
ಮುಂದುವರಿದು ಮಾತಾಡಿದ ಶ್ರೀರಾಮುಲು ಬಳ್ಳಾರಿಯಲ್ಲಿ ಇತ್ತೀಚಿಗೆ ಅವರ ಆಪ್ತರ ಮನೆಗಳ ಮೇಲೆ ದಾಳಿಗಳಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರು.
ರಾಯಚೂರು: ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರನ್ನು ಬಿಜೆಪಿ ಕಡೆಗಣಿಸುತ್ತಿರುವುದು ದಿನಗಳೆದಂತೆ ಸ್ಪಷ್ಟವಾಗುತ್ತಿದೆ. ನೀವು ಕೂಡ ಗಮನಿಸಿರಬಹುದು. ವಾರದ ಎರಡು ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜ್ಯಕ್ಕೆ ಬಂದು ಹೋದರೂ ಯಾವುದೇ ವೇದಿಕೆಯ ಮೇಲೆ ಶ್ರೀರಾಮುಲು ಕಾಣಿಸಲಿಲ್ಲ. ರಾಯಚೂರಲ್ಲಿಂದು (Raichur) ಪತ್ರಕರ್ತರು ಅವರನ್ನು ಈ ಬಗ್ಗೆ ಕೇಳಿದಾಗ ಪ್ರಧಾನ ಮಂತ್ರಿಗಳ ಕಚೇರಿಯಿಂದ (PMO) ಬಿಡುಗಡೆಯಾದ ಪ್ರೊಟೊಕಾಲ್ ನಲ್ಲಿ ತಮಗೆ ಆಹ್ವಾನವಿರಲಿಲ್ಲ, ಹಾಗಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ ಎಂದು ಸಚಿವರು ಹೇಳಿದರು. ಮುಂದುವರಿದು ಮಾತಾಡಿದ ಅವರು ಬಳ್ಳಾರಿಯಲ್ಲಿ ಇತ್ತೀಚಿಗೆ ಅವರ ಆಪ್ತರ ಮನೆಗಳ ಮೇಲೆ ದಾಳಿಗಳಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Jan 20, 2023 03:21 PM
Latest Videos