Freddie-Siyaya Love Story: ಕುನೋ ನ್ಯಾಶನಲ್ ಪಾರ್ಕ್​ನಲ್ಲಿ ಹೆಣ್ಣು ಚೀತಾ ಜನ್ಮನೀಡಿದ ಮರಿಗಳಿಗೆ ತಂದೆ ಯಾರು ಅಂತ ವನ್ಯಜೀವಿ ತಜ್ಞರು ಖಚಿತಪಡಿಸಿದ್ದಾರೆ!

|

Updated on: Mar 31, 2023 | 7:59 AM

ವನ್ಯಜೀವಿ ಪರಿಣಿತರ ಪ್ರಕಾರ ನಾಲ್ಕು ನವಜಾತ ಮರಿಗಳನ್ನು ಯಾವುದೇ ಸಂದೇಹವಿಲ್ಲದೆ ಭಾರತೀಯ ಚೀತಾಗಳೆಂದು ಕರೆಯಬಹುದು.

ಬಿಜೈಪುರ (ಮಧ್ಯಪ್ರದೇಶ): ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರುವ ವನ್ಯಜೀವಿ ಪರಿಣಿತರ ಪ್ರಕಾರ ಕುನೋ ನ್ಯಾಶನಲ್ ಪಾರ್ಕ್ ನಲ್ಲಿ (Kuno National Park) ಮಾರ್ಚ್ 24ರಂದು ಸಿಯಾಯ (Siyaya) ಹೆಸರಿನ ಚೀತಾ ಜನ್ಮ ನೀಡಿದ ಮರಿಗಳಿಗೆ ಫ್ರೆಡ್ಡಿ (Freddie) ಹೆಸರಿನ ಗಂಡು ಚೀತಾವೇ ತಂದೆ ಅನ್ನೋದು ಹೆಚ್ಚು ಕಡಿಮೆ ಖಚಿತವಾಗಿದೆ. ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನ ಅಂತರರಾಷ್ಟ್ರೀಯ ಸಲಹೆಗಾರರಾಗಿರುವ ಕೆರೋಲಿನಾ ಟೊರೆಸ್ ಅವರು ಡಿಸೆಂಬರ್ 26 ರಂದು ಸೆರೆಹಿಡಿದಿರುವ ವಿಡಿಯೋಗಳ ಆಧಾರದ ಮೂಲಕ ಫ್ರೆಡ್ಡಿ ಸಿಯಾಯ ಮರಿಗಳ ತಂದೆಯಾಗಿರುವ ನಂಬಿಕೆ ಬಲಗೊಳ್ಳುತ್ತಿದೆ.

ಅದೇ ಅವಧಿಯಲ್ಲಿ ಫ್ರೆಡ್ಡಿ ಮತ್ತು ಸಿಯಾಯ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿರುವ ಸಾಧ್ಯತೆ ಇದೆ.
‘ಚೀತಾಗಳ ಚಟುವಟಿಕೆಗಳನ್ನು ಗಮನಿಸುತ್ತಿದ್ದರೆ, ಸಿಯಾಯ ಮತ್ತು ಅದರ ಮರಿಗಳು ಆರೋಗ್ಯವಾಗಿವೆ. ಉತ್ತಮವಾಗಿ ಆರೋಗ್ಯ ಕಾಯ್ದುಕೊಂಡಿರುವ ಮತ್ತು ಸಕ್ರಿಯವಾಗಿರುವ ಸಿಯಾಯ ಹೆರಿಗೆಯ ನಂತರ ತನ್ನ ಮರಿಗಳ ಆಹಾರಕ್ಕಾಗಿ ಎರಡು ಬಾರಿ ಬೇಟೆಯಾಡಿದೆ. ಇದು ನಮಗೆ ನಿಜಕ್ಕೂ ಬಹಳ ಸಂತಸದ ಸಂಗತಿ,’ ಎಂದು ಮಧ್ಯಪ್ರದೇಶ ವನ್ಯಜೀವಿ ಸಂರಕ್ಷಣೆಯ ಪಿಸಿಸಿಎಫ್ ಜೆಎಸ್ ಚೌಹಾನ್ ಹೇಳುತ್ತಾರೆ.

ಇದನ್ನೂ ಓದಿ: ಚಿರತೆ ಸೂರ್ಯ ನಮಸ್ಕಾರ ಹೇಗೆ ಮಾಡುತ್ತಿದೆ ನೋಡಿ: ವಿಡಿಯೋ ವೈರಲ್​​

ವನ್ಯಜೀವಿ ಪರಿಣಿತರ ಪ್ರಕಾರ ನಾಲ್ಕು ನವಜಾತ ಮರಿಗಳನ್ನು ಯಾವುದೇ ಸಂದೇಹವಿಲ್ಲದೆ ಭಾರತೀಯ ಚೀತಾಗಳೆಂದು ಕರೆಯಬಹುದು.

‘ಸೆಪ್ಟೆಂಬರ್ 17ರಂದು ಚೀತಾಗಳನ್ನು ಸ್ಥಳಾಂತರಿಸಿದ ಬಳಿಕ ಭಾರತೀಯ ಚೀತಾ ಮರಿಗಳು ಭಾರತದ ನೆಲದ ಮೇಲೆ ಜನ್ಮತಳೆದಿವೆ. ಭಾರತೀಯ ಮೂಲದ ಕೊನೆಯ ಚೀತಾವನ್ನು 1947ರಲ್ಲಿ ಕೊಲ್ಲಲಾಗಿತ್ತು. ಆ ನೋವುಭರಿತ 75 ಸಂವತ್ಸರಗಳ ಬಳಿಕ ಭಾರತೀಯ ನೆಲೆದ ಮೇಲೆ ಚೀತಾ ಮರಿಗಳು ಜನ್ಮ ತಳೆದ ಸಂತೋಷದ ಘಳಿಗೆ ನಮಗೆ ಸಿಕ್ಕಿದೆ. ಚೀತಾಗಳ ಬಗ್ಗೆ ಅತೀವ ಕಾಳಜಿವಹಿಸಿ ಸಂರಕ್ಷಿಸುತ್ತಿರುವ ವನ್ಯಜೀವಿ ನಿರ್ವಹಣೆ ಸಂಸ್ಥೆಗೆ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ,’ ಎಂದು ವನ್ಯಜೀವಿ ತಜ್ಞ ಅಜಯ್ ದುಬೇ ಹೇಳುತ್ತಾರೆ.

ಇದನ್ನೂ ಓದಿ: Viral Video: 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯ ರಕ್ಷಣೆ, ವಿಡಿಯೋ ಇಲ್ಲಿದೆ ನೋಡಿ

ಅದರೆ ದುಬೆ ಮತ್ತೊಂದು ಮಾತನ್ನೂ ಹೇಳಿದರು. ಸಾಶಾ ಹೆಸರಿನ ಇನ್ನೊಂದು ಹೆಣ್ಣು ಚೀತಾ ಇತ್ತೀಚಿಗೆ ಮರಣಹೊಂದಿದ್ದು ಚೀತಾಗಳ ಸಂರಕ್ಷಣೆಯಲ್ಲಿ ಯಾವುದೇ ಏರುಪೇರಾಗಬಾರದು ಅನ್ನೋದಕ್ಕೆ ಸಾಕ್ಷಿಯಾಗಿದೆ. ಅವುಗಳ ಸಂರಕ್ಷಣೆಯಲ್ಲಿ ಸಂಪೂರ್ಣ ಜಾಗ್ರತೆವಹಿಸಿದಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ಚೀತಾಗಳ ಸಂಖ್ಯೆ ಹೆಚ್ಚುತ್ತದೆ ಎಂದು ದುಬೇ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ