Viral Video: 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯ ರಕ್ಷಣೆ, ವಿಡಿಯೋ ಇಲ್ಲಿದೆ ನೋಡಿ
ಥೈಲ್ಯಾಂಡ್‌ನ ಪಶುವೈದ್ಯರ ತಂಡದ ಸುದೀರ್ಘ 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯನ್ನು ರಕ್ಷಿಸಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಥೈಲ್ಯಾಂಡ್‌ನ ಪಶುವೈದ್ಯರ ತಂಡದ ಸುದೀರ್ಘ 3 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ತಾಯಿ ಮತ್ತು ಮರಿ ಆನೆಯನ್ನು ರಕ್ಷಿಸಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಥಾಯ್ಲೆಂಡ್‌ನ ನಖೋನ್ ನಯೋಕ್ ಪ್ರಾಂತ್ಯದಲ್ಲಿ, ಚಂಡಮಾರುತದ ಸಮಯದಲ್ಲಿ 7 ಅಡಿ ಆಳದ ಗುಂಡಿಯೊಂದು ಸಂಪೂರ್ಣವಾಗಿ ಹುಲ್ಲು ಬೆಳೆದು ಮುಚ್ಚಿ ಹೋಗಿತ್ತು. ಆದರೆ ಅಲ್ಲೊಂದು ಗುಂಡಿ ಇರುವುದನ್ನು ಅರಿಯದೇ ಪುಟ್ಟ ಮರಿ ಆನೆ ಹಾಗೂ ಅದನ್ನು ರಕ್ಷಿಸಲು ಹೋದ ತಾಯಿ ಆನೆ ಚರಂಡಿಯ ಒಳಗೆ ಸಿಕ್ಕಿ ಹಾಕಿಕೊಂಡಿದೆ. ಆದಾಗಗಲೇ ವಿಷಯ ತಿಳಿದ ಪಶುವೈದ್ಯರು ತಂಡ ಸುಮಾರು 3 ಗಂಟೆಗಳ ನಂತರ ಭಾರೀ ಮಳೆಯ ಮಧ್ಯೆಯೂ ಕೂಡ ತಾಯಿ ಹಾಗೂ ಮರಿಯಾನೆಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ತಾಯಿ ಆನೆ ಪ್ರಜ್ಞೆ ತಪ್ಪಿದ್ದರಿಂದ ಕೆಲಹೊತ್ತಿನ ವರೆಗೆ ಸಿಪಿಆರ್ ನೀಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಂತಿಮವಾಗಿ ತಾಯಿ ಮತ್ತು ಮರಿ ರಸ್ತೆ ದಾಟಿ ಅರಣ್ಯಕ್ಕೆ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇಲ್ಲಿದೆ ನೋಡಿ ವಿಡಿಯೋ:
They rescued the mother elephant and her baby, and performed CPR on the mother elephant. They are amazing people. God bless them! ?❤️pic.twitter.com/JKxCpk4p9i
— The Figen (@TheFigen_) March 21, 2023
ಇದನ್ನೂ ಓದಿ: ಚಿರತೆ ಸೂರ್ಯ ನಮಸ್ಕಾರ ಹೇಗೆ ಮಾಡುತ್ತಿದೆ ನೋಡಿ: ವಿಡಿಯೋ ವೈರಲ್
@TheFigen ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಾಯಿ ಮತ್ತು ಮರಿಯಾನೆಯನ್ನು ರಕ್ಷಿಸಿದ ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗೆ ದೇವರು ಸದಾ ಆಶೀರ್ವದಿಸಲಿ ಎಂದು ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ. ಇದೀಗಾ ಈ ವಿಡಿಯೋ ಟ್ವಿಟರ್ನಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಈ ವೈರಲ್ ವಿಡಿಯೋ ಇದೀಗಾಗಲೇ 8.796 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 4 ಸಾವಿರಕ್ಕಿಂತಲೂ ಹೆಚ್ಚು ರಿಟ್ವೀಟ್‌ಗಳು, 20 ಸಾವಿರ ಲೈಕ್ಗಳು ಮತ್ತು 426 ಬುಕ್‌ಮಾರ್ಕ್‌ಗಳನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:30 pm, Tue, 28 March 23