Bear selfies: 400 ರೀತಿಯಲ್ಲಿ ‘ಸೆಲ್ಫಿಗೆ’ ಪೋಸ್​ ಕೊಟ್ಟ ಕರಡಿಯನ್ನೊಮ್ಮೆ ನೀವೇ ನೋಡಿ

ಇಲ್ಲೊಂದು ಕರಡಿ ಬರೋಬ್ಬರಿ 400 ಸೆಲ್ಫಿಗೆ ಪೋಸ್​​ ಕೊಟ್ಟಿದೆ. ಇದೇನಾಪ್ಪ ಅಂಥಾ ಅನ್ಕೋತಾ ಇದ್ದೀರಾ? ಹೌದು ಅಮೇರಿಕಾದಲ್ಲಿ ಈ ಘಟನೆ ನಡೆದಿದೆ. ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್​​ ಆಗಿ ವೈರಲ್​​ ಆಗುತ್ತಿದೆ.

Bear selfies: 400 ರೀತಿಯಲ್ಲಿ 'ಸೆಲ್ಫಿಗೆ' ಪೋಸ್​ ಕೊಟ್ಟ ಕರಡಿಯನ್ನೊಮ್ಮೆ ನೀವೇ ನೋಡಿ
ಸೆಲ್ಫಿಗೆ ಪೋಸ್​ ಕೊಟ್ಟ ಕರಡಿImage Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:Feb 02, 2023 | 3:58 PM

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾಕಷ್ಟು ಪೋಸ್ಟ್​​, ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಅದರಲ್ಲಿ ಕೆಲವೊಂದು ಮಿಲಿಯನ್​​ ವೀಕ್ಷಣೆಯ ಮೂಲಕ ಅಷ್ಟೇ ಟ್ರೆಂಡ್​​ ಸೆಟ್​​ ಕ್ರಿಯೇಟ್​​ ಮಾಡುತ್ತಿರುತ್ತವೆ. ಈಗ ಕರಡಿಯೊಂದು 400 ಸೆಲ್ಫಿ ತೆಗೆಯುವ  ಮೂಲಕ ಸಾಕಷ್ಟು ಮಟ್ಟಿಗೆ ವೈರಲ್​ ಆಗಿದೆ. ಏನಪ್ಪಾ ಈ ಸ್ಟೋರಿ ನೀವೇ ನೋಡಿ.  ಸೆಲ್ಫಿ ಕ್ರೇಜ್​​ ಎಷ್ಟರ ಮಟ್ಟಿಗೆ ಇದೇ ಅಂದರೆ, ಇದರಿಂದಾಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸೆಲ್ಫಿ ಕ್ರೇಜ್ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಶುರುವಾಗಿದೆ. ಇಲ್ಲೋಂದು ಕರಡಿ ಬರೋಬ್ಬರಿ 400 ಸೆಲ್ಫಿಗೆ ಪೋಸ್​​ ಕೊಟ್ಟಿದೆ. ಇದೇನಾಪ್ಪ ಅಂಥಾ ಅನ್ಕೋತಾ ಇದ್ದೀರಾ? ಹೌದು ಅಮೇರಿಕಾದಲ್ಲಿ ಈ ಘಟನೆ ನಡೆದಿದೆ. ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್​​ ಆಗಿ ವೈರಲ್​​ ಆಗುತ್ತಿದೆ. ಅಮೇರಿಕಾದ ಕೊಲೊರಾಡೋದಲ್ಲಿ ವನ್ಯಜೀವಿ ಕ್ಯಾಮೆರಾದಲ್ಲಿ 400 ಸೆಲ್ಫಿಗಳನ್ನು ಸೆರೆಹಿಡಿದಿದೆ.

ಇದನ್ನೂ ಓದಿ: ಮಂಗನಂತೆ ತೆಂಗಿನ ಮರದ ಏರಿ ಇಳಿದ ಮೇಕೆ: ನೆಟ್ಟಿಗರು ಫುಲ್ ಶಾಕ್ ಮಾರಾಯ್ರೆ

ವನ್ಯಜೀವಿ ಛಾಯಾಗ್ರಾಹಕರೊಬ್ಬರು ರಾತ್ರಿ ವೇಳೆ ಅಳವಡಿಸಿದ್ದ ಕ್ಯಾಮರಾದಲ್ಲಿ ಕರಡಿಯ ಪೋಟೋ ಸೆರೆ ಸಿಕ್ಕಿದೆ. ಒಟ್ಟು 580 ಫೋಟೋಗಳಲ್ಲಿ 400 ಆ ಕರಡಿಯ ಸೆಲ್ಫಿಗಳನ್ನೇ ಕಾಣಬಹುದು. ಬೌಲ್ಡರ್ ಓಪನ್ ಸ್ಪೇಸ್ ಮತ್ತು ಮೌಂಟೇನ್ ಪಾರ್ಕ್ಸ್ ಖಾತೆಯಲ್ಲಿ ಜನವರಿ 24 ರಂದು ಕರಡಿ ತೆಗೆದ ಚಿತ್ರಗಳನ್ನು ಟ್ವೀಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್​​ ಈಗಾಗಲೇ 1ಮಿಲಿಯನ್​​ ವೀಕ್ಷಣೆ ಕಂಡಿದೆ. ಜೊತೆಗೆ 8ಸಾವಿರ ಲೈಕ್​​ ಹಾಗೂ 2ಸಾವಿರದಷ್ಟು ರಿಟ್ವಿಟ್​​ಗಳನ್ನು ಕಾಣಬಹುದು. ಸೆಲ್ಫಿ ಕ್ರೇಜ್ ಪ್ರಾಣಿಗೂ ಬಂದಲ್ಲಾ ಎಂದು ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 3:58 pm, Thu, 2 February 23