Viral Video: ಮಂಗನಂತೆ ತೆಂಗಿನ ಮರದ ಏರಿ ಇಳಿದ ಮೇಕೆ: ನೆಟ್ಟಿಗರು ಫುಲ್ ಶಾಕ್ ಮಾರಾಯ್ರೆ

ವನ್ಯ ಜೀವಿಗಳು ಕೆಲವೊಮ್ಮೆ ಜನರನ್ನು ಅಚ್ಚರಿ ಮೂಡಿಸುತ್ತವೆ. ಅದರಂತೆ ಮೇಕೆಯೊಂದು ಮಂಗನಂತೆ ಮರ ಏರಿ ಇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

Viral Video: ಮಂಗನಂತೆ ತೆಂಗಿನ ಮರದ ಏರಿ ಇಳಿದ ಮೇಕೆ: ನೆಟ್ಟಿಗರು ಫುಲ್ ಶಾಕ್ ಮಾರಾಯ್ರೆ
ಮರ ಹತ್ತುತ್ತಿರುವ ಮೇಕೆ
Follow us
TV9 Web
| Updated By: Rakesh Nayak Manchi

Updated on:Feb 01, 2023 | 9:30 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಒಂದಲ್ಲಾ ಒಂದು ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ಮನರಂಜಿಸಿದರೆ ಇನ್ನು ಕೆಲವು ಅಚ್ಚರಿಗೊಳಪಡಿಸುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral Video) ಆಗುತ್ತಿರುವ ಮೇಕೆಯ ವಿಡಿಯೋವೊಂದು ನೆಟ್ಟಿರು ಬೆರಳನ್ನು ಮೂಗಿನ ಮೇಲಿಡುವಂತಾಗಿದೆ. ಹೌದು, ಸಾಮಾನ್ಯವಾಗಿ ಮೇಕೆಗಳು ಮರ ಏರುವುದು ಕಡಿಮೆ, ಅದರಲ್ಲೂ ತೆಂಗಿನ ಮರದಂತಹ ಮರಗಳಿಗೆ ಏರುವುದನ್ನು ಕಾಣಸು ಸಾಧ್ಯವಿಲ್ಲ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೇಕೆಯೊಂದು ತೆಂಗಿನ ಮರದಂತೆ ಕಾಣುವ ನೇರವಾಗಿರುವ ಮರಕ್ಕೆ ಮೇಕೆಯೊಂದು ಹತ್ತುವುದನ್ನು (Goat climbs on tree) ಕಾಣಬಹುದು.

ವೈರಲ್ ವಿಡಿಯೋವನ್ನು ನೋಡಿದಾಗ, ಪಕ್ಕನೆ ಯಾರು ಕೂಡ ನಂಬಲು ಸಾಧ್ಯವಿಲ್ಲ, ಮೇಕೆ ಇಂತಹ ಮರಕ್ಕೂ ಹತ್ತುತ್ತದೆಯೇ ಎಂದು ಆಶ್ವರ್ಯವಾಗಬಹುದು. ಆದರೆ ಇದು ನಿಜವೆಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮೇಕೆ ಮಂಗನಂತೆ ಮರಕ್ಕೆ ಹತ್ತುವುದು ಮತ್ತು ಇಳಿಯುವುದನ್ನು ಕಾಣಬಹುದು. ಈ ವೀಡಿಯೊವನ್ನು ಬಹಳಷ್ಟು ನೆಟ್ಟಿಗರು ಇಷ್ಟಪಟ್ಟಿದ್ದು, ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral Video: ಎದೆ ನಡುಕ ಹುಟ್ಟಿಸುವ ಭಯಾನಕ ಬಂಗೀ ಜಂಪಿಂಗ್‌ ವಿಡಿಯೋವೊಂದು ಇಲ್ಲಿದೆ

ಆಡುಗಳು ಸಾಮಾನ್ಯವಾಗಿ ಈ ರೀತಿ ಮರಗಳನ್ನು ಹತ್ತುವುದು ಕಂಡುಬರುವುದಿಲ್ಲ. ಹೆಚ್ಚಿನವರು ಈ ವಿಡಿಯೋವನ್ನು ಮೊದಲ ಬಾರಿ ನೋಡಿದ್ದಾರೆ. ಸದ್ಯ ಈ ವಿಡಿಯೋವನ್ನು gang_of_billa ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ 10ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 2.63 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿರುವುದಂತು ಸತ್ಯ.

ಮತ್ತಷ್ಟು ವೈರಲ್ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Wed, 1 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್