Middleclass Hashtag Trending : ಅಂತೂಇಂತೂ ಮಧ್ಯಮವರ್ಗಕ್ಕೆ ಸುಖವಿಲ್ಲ: ಈಡೇರದ ತೆರಿಗೆ ರಿಯಾಯ್ತಿ ನಿರೀಕ್ಷೆ, ಟ್ವಿಟರ್‌ನಲ್ಲಿ ಟ್ರೋಲ್ಗಳ ಸುರಿಮಳೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ (ಫೆ 1) ಮಂಡಿಸಿದ ಬಜೆಟ್ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ₹ 7 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದು ದೊಡ್ಡ ಸುದ್ದಿಯಾಗಿದೆ. ಆದರೆ ಇದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚೇನೂ ಪ್ರಯೋಜನವಾಗಿಲ್ಲ ಎಂದು ಬಹುಕಾಲದಿಂದ ಬಿಜೆಪಿಯನ್ನು ಬೆಂಬಲಿಸುತ್ತಿರುವ ಮಧ್ಯಮವರ್ಗಕ್ಕೆ ಸೇರಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ (ಫೆ 1) ಮಂಡಿಸಿದ ಬಜೆಟ್ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ₹ 7 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದು ದೊಡ್ಡ ಸುದ್ದಿಯಾಗಿದೆ. ಆದರೆ ಇದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚೇನೂ ಪ್ರಯೋಜನವಾಗಿಲ್ಲ ಎಂದು ಬಹುಕಾಲದಿಂದ ಬಿಜೆಪಿಯನ್ನು ಬೆಂಬಲಿಸುತ್ತಿರುವ ಮಧ್ಯಮವರ್ಗಕ್ಕೆ ಸೇರಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯನ್ನು ಡಿಫಾಲ್ಟ್ (ತನ್ನಿಂತಾನೆ ಲಾಗು) ಎಂದು ಘೋಷಿಸಿರುವುದು ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ವಿನಾಯ್ತಿ ಘೋಷಿಸದಿರುವುದು ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಆಕ್ರೋಶದ ಅಭಿವ್ಯಕ್ತಿಗೆ ಬಳಸುತ್ತಿರುವ ಚಿತ್ರಗಳು ಮಾತ್ರ ನಗೆಯುಕ್ಕಿಸುವಂತಿವೆ.
ನಿಸರ್ಗ ಪಟೇಲ್ ಎನ್ನುವವರು ಈ ಕುರಿತು ಲೆಕ್ಕಾಚಾರ ಒಂದನ್ನು ಮುಂದಿಟ್ಟಿದ್ದಾರೆ. ಸದ್ಯಕ್ಕೆ ಆನ್ಲೈನ್ ಜಗತ್ತಿನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಲೆಕ್ಕಾಚಾರ ಇದು. ‘ಹೊಸ ತೆರಿಗೆ ಪದ್ಧತಿಯಲ್ಲಿ ₹ 7 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. ಹಳೆಯ ತೆರಿಗೆ ಪದ್ಧತಿಯಲ್ಲಿ 80 ಸಿ ರಿಯಾಯ್ತಿಯೊಂದಿಗೆ ಎನ್ಪಿಎಸ್, ಎಚ್ಆರ್ಎ ತೆಗೆದುಕೊಂಡರೆ ಅಷ್ಟೇ ಆಗುತ್ತದೆ. ಅಂತೂಇಂತೂ ಮಧ್ಯಮವರ್ಗಕ್ಕೆ ಸುಖವಿಲ್ಲ’ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಮೀಮ್ ಟ್ರೆಂಡ್ ಆಗುತ್ತಿದೆ. ಪರಿಷ್ಕೃತ ತೆರಿಗೆ ಪದ್ಧತಿಯ ಘೋಷಣೆಯ ನಂತರ ಈ ಮಿಶ್ರ ಪ್ರತಿಕ್ರಿಯೆಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. 2022ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಕಡಿದಾದ ಏರಿಕೆ ಮತ್ತು ಸಂಭವನೀಯ ಜಿಡಿಪಿ ಬೆಳವಣಿಗೆಯ ಕುಸಿತದಂತಹ ಜಾಗತಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಜೆಟ್ ಅನ್ನು ಮಂಡಿಸಲಾಗಿದೆ.
#middleclass right now?#Budget2023 pic.twitter.com/IwU2JdWpbA
— Vikalp Sharma (@vikalprs) February 1, 2023
ಇತರ ವರ್ಷಗಳಂತೆಯೇ, ಮಧ್ಯಮ ವರ್ಗದ ತೆರಿಗೆದಾರರು ಬಜೆಟ್‌ನ ಯಾವ ರೀತಿಯ ವಿಶೇಷತೆ ಇದೆ ಎಂದು ಕಾಯುತ್ತಿದ್ದರು. ಕೆಲವು ವಸ್ತುಗಳಿಗೆ ಬೆಲೆ ಕಡಿಮೆಯಾಗಿದೆ. ಇನ್ನೂ ಕೆಲವು ಯೋಜನೆಗಳನ್ನು ಮಧ್ಯಮ ವರ್ಗಕ್ಕೆ ನೀಡಿದ್ದಾರೆ, 5ರಿಂದ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಆದರೆ ತೆರಿಗೆದಾರರ ಒಂದು ವರ್ಗವು ಹೊಸ ಮತ್ತು ಪರಿಷ್ಕೃತ ತೆರಿಗೆ ಪದ್ಧತಿಯನ್ನು ಗೊಂದಲ ಸೃಷ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ:Nirmala Sitharaman Pressmeet: 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಾವು ಸಾಗುತ್ತಿದ್ದೇವೆ: ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿಯನ್ನು ಪ್ರಸ್ತಾಪಿಸಿದ್ದು, ಅದರ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಾನು 2020 ರಲ್ಲಿ, 2.5 ಲಕ್ಷದಿಂದ ಪ್ರಾರಂಭವಾಗುವ 6 ಆದಾಯದ ಸ್ಲ್ಯಾಬ್‌ಗಳೊಂದಿಗೆ ಹೊಸ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದೆ. ಸ್ಲ್ಯಾಬ್‌ಗಳ ಸಂಖ್ಯೆಯನ್ನು 5 ಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಆಡಳಿತದಲ್ಲಿ ತೆರಿಗೆ ರಚನೆಯನ್ನು ಬದಲಾಯಿಸಲು ನಾನು ಪ್ರಸ್ತಾಪಿಸುತ್ತೇನೆ, ಎಂದು ಅವರು ಹೇಳಿದರು.
Middle-class to the Finance Minister after #Budget2023: pic.twitter.com/y3gqEVOcMP
— Tickertape (@TickertapeIN) February 1, 2023
ಈ ಬಗ್ಗೆ ಟ್ವಿಟರ್‌ನಲ್ಲಿ middleclass ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದ್ದರೂ, ಸ್ಲ್ಯಾಬ್ ರಚನೆಯ ಅರ್ಥವೇನು ಎಂಬುದರ ಬಗ್ಗೆ ಹಲವರು ಗೊಂದಲಕ್ಕೊಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೊಸ ಮಾದರಿಯ ತೆರಿಗೆ ಬಗ್ಗೆ ಸಂತಸದಿಂದ, ಪ್ರಕಟಣೆಯ ಬಗ್ಗೆ ಅನುಮಾನದಿಂದ, ಭಾವನೆಗಳಂತೆಯೇ ಪ್ರತಿಕ್ರಿಯೆಗಳು ಮಿಶ್ರವಾಗಿವೆ.
No Tax upto 7 lacks #middleclass #Budget2023 #NirmalaSitharaman pic.twitter.com/MuhJH6fisB
— Shivraj Patil (@meShivrajPatil) February 1, 2023
ಈ ಬಜೆಟ್ ಅಂತರ್ಗತ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಹೂಡಿಕೆ, ಕೃಷಿ ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯದಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಸೆನ್ಸೆಕ್ಸ್ 1076.55 ಅಂಕಗಳ ಏರಿಕೆಯೊಂದಿಗೆ 60,626.45 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. 2023-24ರ ಕೇಂದ್ರ ಬಜೆಟ್‌ನ ಘೋಷಣೆಯ ನಂತರ ನಿಫ್ಟಿ 264.25 ಪಾಯಿಂಟ್‌ಗಳ ಏರಿಕೆ ಮತ್ತು 17,926.40 ನಲ್ಲಿ ವಹಿವಾಟು ನಡೆಸುತ್ತಿದೆ.
ಬಜೆಟ್ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Wed, 1 February 23