Income Tax Slabs: ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ
Old vs new current income tax slabs; ಹಳೆಯ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ಹೊಸದರ ನಡುವಣ ವ್ಯತ್ಯಾಸವೇನು? ಇಲ್ಲಿದೆ ಪೂರ್ತಿ ವಿವರ.
ಹೊಸ ತೆರಿಗೆ ವಿಧಾನದ ಅಡಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ (Income Tax) ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ನಲ್ಲಿ (Budget 2023) ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಕಡಿಮೆ ಮಾಡಲಾಗಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆ ತೆರಿಗೆ ಸ್ಲ್ಯಾಬ್ಗಳನ್ನು ಐದಕ್ಕೆ ಇಳಿಕೆ ಮಾಡುತ್ತಿದ್ದು, 3 ಲಕ್ಷ ರೂ.ನಿಂದ ಆರಂಭವಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಮಧ್ಯಮ ವರ್ಗದ ವೇತನದಾರ ವರ್ಗಕ್ಕೆ ರಿಲೀಫ್ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಹಾಗಿದ್ದರೆ ಹಳೆಯ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ಹೊಸದರ ನಡುವಣ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ.
ಹೇಗಿರುತ್ತೆ ಆದಾಯ ತೆರಿಗೆ ಹೊಸ ಸ್ಲ್ಯಾಬ್?
- 3 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ.
- 3-6 ಲಕ್ಷ ರೂ. ವರೆಗಿನ ಆದಾಯಕ್ಕೆ ಶೇ 5ರ ತೆರಿಗೆ ಇರುತ್ತದೆ.
- 6-9 ಲಕ್ಷ ರೂ. ವರೆಗಿನ ಆದಾಯಕ್ಕೆ ಶೇ 10ರ ತೆರಿಗೆ ಪಾವತಿಸಬೇಕಾಗುತ್ತದೆ.
- 9-12 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 15ರ ತೆರಿಗೆ ಪಾವತಿಸಬೇಕಾಗುತ್ತದೆ.
- 12-15 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 20ರ ತೆರಿಗೆ ಪಾವತಿಸಬೇಕಾಗುತ್ತದೆ.
- 15 ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ಶೇ 30ರ ತೆರಿಗೆ ವಿಧಿಲಾಗುತ್ತದೆ.
ಇದನ್ನೂ ಓದಿ: ಸಿಹಿ ಸುದ್ದಿ; ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆ
ಹೇಗಿತ್ತು ಆದಾಯ ತೆರಿಗೆ ಹಳೆಯ ಸ್ಲ್ಯಾಬ್?
- 2.5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ.
- 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 5ರ ತೆರಿಗೆ ಪಾವತಿಸಬೇಕು.
- 5 ಲಕ್ಷ ರೂ.ನಿಂದ 7.5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 15ರ ತೆರಿಗೆ ಪಾವತಿಸಬೇಕು.
- 7.5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 20ರ ತೆರಿಗೆ ವಿಧಿಸಲಾಗುತ್ತದೆ.
- 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ 30ರ ವರೆಗೆ ತೆರಿಗೆ ವಿಧಿಸಲಾಗುತ್ತದೆ.
2014ರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಲಾಗಿತ್ತು. ಆ ನಂತರ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಬದಲಾವಣೆ ಮಾಡಿರಲಿಲ್ಲ. ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರಲಿದೆ. ಆದಾಗ್ಯೂ ಹೊಸ ತೆರಿಗೆ ವಿಧಾನವು ತೆರಿಗೆದಾರರ ಆಯ್ಕೆಗೆ ಬಿಟ್ಟಿದ್ದಾಗಿದ್ದು, ಹಳೆಯ ಪದ್ಧತಿಯನ್ನು ಆಯ್ದುಕೊಳ್ಳಲೂ ಅವರಿಗೆ ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ದೊರೆಯುವ ಹೊಸ ಪದ್ಧತಿ ಆಯ್ದುಕೊಂಡವರಿಗೆ ವಿನಾಯಿತಿ ಪಡೆಯಲು ಅವಕಾಶಗಳು ಕಡಿಮೆ ಇವೆ.
ಹೊಸ ತೆರಿಗೆ ಪದ್ಧತಿಯಲ್ಲಿ ಮೇಲ್ನೋಟಕ್ಕೆ ಹೆಚ್ಚು ಲಾಭವಿದೆ ಎಂದೆನಿಸಿದರೂ ವಿನಾಯಿತಿಗೆ ಒಳಪಡುವ ಉಳಿತಾಯದ ವ್ಯಾಪ್ತಿ ಕಡಿಮೆ ಇದೆ. ಗೃಹ ಸಾಲದ ಬಡ್ಡಿ, ಸೆಕ್ಷನ್ 80ಸಿ ವ್ಯಾಪ್ತಿಗೆ ಬರುವ ಪಿಪಿಎಫ್, ಎಲ್‌ಐಸಿಯಂತಹ ಉಳಿತಾಯ ಯೋಜನೆಗಳು, ಟ್ಯೂಷನ್ ಶುಲ್ಕವನ್ನು ವಿನಾಯಿತಿ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಬಜೆಟ್ ಪ್ರತಿಯಲ್ಲಿ ಹೆಚ್ಚಿನ ವಿವರ ನೀಡಿಲ್ಲ.
ಬಜೆಟ್ ಕುರಿತ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Wed, 1 February 23