Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget session: ಸಭಾಧ್ಯಕ್ಷನ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಸ್ಪೀಕರ್ ಯುಟಿ ಖಾದರ್

Karnataka Budget session: ಸಭಾಧ್ಯಕ್ಷನ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಸ್ಪೀಕರ್ ಯುಟಿ ಖಾದರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 21, 2025 | 5:46 PM

ಸಭಾಧ್ಯಕ್ಷ ಖಾದರ್ ಸದಸ್ಯರನ್ನು ಸಸ್ಪೆಂಡ್ ಮಾಡುವ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿ ಶಾಸಕರು ತಮ್ಮ ವರ್ತನೆಯಿಂದ ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ, ಅವರ ವರ್ತನೆಯನ್ನು ಸದನ ಕ್ಷಮಿಸುವುದು ಸಾಧ್ಯವಿಲ್ಲ, ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ನಂತರ ಖಾದರ್ ಶಾಸಕರ ಹೆಸರುಗಳನ್ನು ಓದಿ ವಜಾ ಮಾಡಿರುವುದಾಗಿ ಘೋಷಿಸುತ್ತಾರೆ.

ಬೆಂಗಳೂರು, ಮಾರ್ಚ್ 21: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಸೇರಿದಂತೆ ಬಿಜೆಪಿಯ 18 ಶಾಸಕರನ್ನು ಸಭಾಧ್ಯಕ್ಷ ಯುಟಿ ಖಾದರ್ 6 ತಿಂಗಳು ಅವಧಿಗೆ ಸದನದಿಂದ ವಜಾ ಮಾಡಿದರು. ಅಂದರೆ ಈ ಶಾಸಕರು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ದೊಡ್ಡನಗೌಡ ಪಾಟೀಲ್, ಅಶ್ವತ್ಥ್ ನಾರಾಯಣ, ಭರತ್ ಶೆಟ್ಟಿ, ಶರಣು ಸಲಗರ, ಬಿ ಸುರೇಶ್ ಗೌಡ, ಮುನಿರತ್ನ, ಚನ್ನಬಸಪ್ಪ, ಉಮಾನಾಥ ಕೋಟ್ಯಾನ್, ಬಿಪಿ ಹರೀಶ್, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಬಸವರಾಜ ಮತ್ತಿಮೂಡ, ಎಸ್​ ಆರ್ ವಿಶ್ವನಾಥ್​, ಯಶ್​​ಪಾಲ್ ಎ ಸುವರ್ಣ, ಎಂಆರ್ ಪಾಟೀಲ್, ಸಿಕೆ ರಾಮಮೂರ್ತಿ, ಡಾ ಚಂದ್ರು ಲಮಾಣಿ, ಬಿಎ ಬಸವರಾಜು ಮೊದಲಾದವರನ್ನು ಸಸ್ಟೆಂಡ್ ಮಾಡಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಸ್ಪೀಕರ್ ಯುಟಿ ಖಾದರ್ ಮತ್ತು ಶಾಸಕ ಸುನೀಲ ಕುಮಾರ ತುಳು ಭಾಷೆಯಲ್ಲಿ ಮಾತಾಡಿದಾಗ ಸದನ ಕಕ್ಕಾಬಿಕ್ಕಿ!