ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಹಿರಿಯ ನಿರ್ದೇಶಕ ಎ.ಟಿ. ರಘು ನಿಧನಕ್ಕೆ ದೊಡ್ಡಣ್ಣ ಕಂಬನಿ ಮಿಡಿದ್ದಾರೆ. ‘ಈ ವಿಷಯ ತಿಳಿದು ಮನಸ್ಸಿಗೆ ತುಂಬ ಆಘಾತ ಆಯಿತು. ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಅವರವರ ಸ್ಟೇಷನ್ ಬಂದಾಗ ಇಳಿದು ಹೋಗುತ್ತಿದ್ದಾರೆ. ಅಂಬರೀಶ್ ಮತ್ತು ಎ.ಟಿ. ರಘು ನಡುವಿನ ಬೆಸುಗೆ ತುಂಬ ಚೆನ್ನಾಗಿತ್ತು’ ಎಂದು ದೊಡ್ಡಣ್ಣ ಅವರು ಹೇಳಿದ್ದಾರೆ.
‘ರೆಬೆಲ್ ಸ್ಟಾರ್’ ಅಂಬರೀಶ್ (Ambareesh) ಜೊತೆ ಹಲವು ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ ಎ.ಟಿ. ರಘು (A T Raghu) ಅವರು ನಿಧನರಾಗಿದ್ದಾರೆ. ಅವರ ಜೊತೆಗಿನ ಒಡನಾಟದ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅವರು ಮಾತನಾಡಿದ್ದಾರೆ. ‘ತುಂಬ ನೋವಾಗುತ್ತದೆ. ನನಗೆ ಎ.ಟಿ. ರಘು ಅವರು ತುಂಬಾ ಆತ್ಮೀಯರು. ಸಿನಿಮಾ ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿರಲಿಲ್ಲ. ಮಗು ರೀತಿ ಇದ್ದರು. ಯಾರ ಮನಸ್ಸನ್ನೂ ಅವರು ನೋಯಿಸುತ್ತಿರಲಿಲ್ಲ. ನಾನು ರಘು ಜೊತೆ 7 ಸಿನಿಮಾ ಮಾಡಿದ್ದೆ’ ಎಂದು ದೊಡ್ಡಣ್ಣ (Doddanna) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.