ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇನೆ, ಇವತ್ತು ನಡೆದಿದ್ದು ದುರದೃಷ್ಟಕರ: ಯುಟಿ ಖಾದರ್, ಸ್ಪೀಕರ್
ಸ್ಪೀಕರ್ ಸರ್ಕಾರದ ಭಾಗವಾಗಿದ್ದಾರೆಂದು ಬಿಜೆಪಿ ಶಾಸಕರು ಅರೋಪಿಸುತ್ತಿದ್ದಾರೆ, ಅದನ್ನು ಜನ ತೀರ್ಮಾನಿಸುತ್ತಾರೆ, ವಿಷಯವನ್ನು ಜನರ ವಿವೇಚನೆಗೆ ಬಿಡುವುದೇ ಒಳಿತು, ಸಸ್ಪೆಂಡ್ ಆಗಿರುವ ಬಿಜೆಪಿ ಶಾಸಕರು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಭಾಗಿವಹಿಸುತ್ತಾರೋ ಇಲ್ಲವೋ ಅನ್ನೋದು ಬೇರೆ ವಿಚಾರ, ಅಧಿವೇಶನ ಯಾವಾಗ ನಡೆಸಲಾಗುತ್ತದೆ ಅಂತ ಇನ್ನೂ ತೀರ್ಮಾನವಾಗಿಲ್ಲ ಎಂದು ಖಾದರ್ ಹೇಳಿದರು.
ಬೆಂಗಳೂರು, ಮಾರ್ಚ್ 21: ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಿದ ಬಳಿಕ ವಿಧಾನಸೌಧದ ಅವರಣದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ವಿಧಾನಸಭಾಧ್ಯಕ್ಷ ಯುಟಿ ಖಾದರ್, ಬಜೆಟ್ ಅಧಿವೇಶನ (Budget Session) ಬಹಳ ಚೆನ್ನಾಗಿ ನಡೆಯುತ್ತಿತ್ತು, 80 ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು, ಆದರೆ ಕೊನೆಯಲ್ಲಿ ನಡೆದ ಘಟನೆ ಅತ್ಯಂತ ವಿಷಾದಕರ, ತಾನು ಸಭಾಧ್ಯಕ್ಷನಾಗಿ ಸಂವಿಧಾನದ ಪರ ನಿಂತಿದ್ದೇನೆ ಮತ್ತು ಅದರ ಆಶಯದಂತೆ ನಡೆದುಕೊಂಡಿದ್ದೇನೆ, ಉಳಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಅರೋಪ ಪ್ರತ್ಯಾರೋಪ ಸಾಮಾನ್ಯ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಕೇಳುವ ಶೈಲಿಯಿಂದ ಇಂಪ್ರೆಸ್ ಆದ ಸ್ಪೀಕರ್ ಯುಟಿ ಖಾದರ್