Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session: ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಕೇಳುವ ಶೈಲಿಯಿಂದ ಇಂಪ್ರೆಸ್ ಆದ ಸ್ಪೀಕರ್ ಯುಟಿ ಖಾದರ್

Karnataka Budget Session: ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಕೇಳುವ ಶೈಲಿಯಿಂದ ಇಂಪ್ರೆಸ್ ಆದ ಸ್ಪೀಕರ್ ಯುಟಿ ಖಾದರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 19, 2025 | 11:26 AM

ದರ್ಶನ್ ಪುಟ್ಟಣಯ್ಯ ಅವರ ಮಾತುಗಳಿಂದ ಸ್ಪೀಕರ್ ಯುಟಿ ಖಾದರ್ ಬಹಳ ಇಂಪ್ರೆಸ್ ಆಗುತ್ತಾರೆ. ಬೇರೆ ಸದಸ್ಯರು ಮಾತಾಡಲು ಎದ್ದುನಿಂತಾಗ ಖಾದರ್ ಅವರು ದರ್ಶನ್ ಅವರ ಮಾದರಿ ಅನುಸರಿಸುವಂತೆ ಹೇಳುತ್ತಾರೆ. ದರ್ಶನ್ ಪ್ರಶ್ನೆಗಳನ್ನು ಕೇಳಿದ ರೀತಿ ಮಾಧ್ಯಮದವರಿಗೂ ಸುಲಭವಾಗಿ ವರದಿ ಮಾಡಲು ಸಾಧ್ಯವಾಗುತ್ತದೆ ಎಂದು ಸ್ಪೀಕರ್ ಹೇಳುತ್ತಾರೆ.

ಬೆಂಗಳೂರು, 19 ಮಾರ್ಚ್: ಮೇಲುಕೋಟೆಯ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಯುಎಸ್ ನಲ್ಲಿ ಓದಿ ಬಹಳಷ್ಟು ವರ್ಷಗಳ ಅಲ್ಲಿದ್ದವರು. ಸಮಯದ ಮಹತ್ವವನ್ನು (importance of time) ಅವರ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇವತ್ತು ಸದನದಲ್ಲಿ ಮಾತಾಡಿದ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚಿಕ್ಕದಾಗಿ ಚೊಕ್ಕವಾಗಿ ಮತ್ತು ಎಲ್ಲರಿಗೂ ಅರ್ಥವಾಗುವಂತೆ ಹೇಳಿದರು ಮತ್ತು ತಾವು ಹೇಳಲಿರುವ ಅಂಶಗಳನ್ನು ಅವರು ಬರೆದುಕೊಂಡು ಬಂದಿದ್ದರು. ಕೊನೆಯಲ್ಲಿ ಅವರು ಮಾತಾಡಲು ತನಗೆ ಅವಕಾಶ ನೀಡಿದ್ದಕ್ಕೆ ಸ್ಪೀಕರ್​ಗೆ ಧನ್ಯವಾದ ಸಲ್ಲಿಸುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿಗೆ ಭೇಟಿ ನೀಡಿ ಸ್ನೇಹಿತ ದರ್ಶನ್​ರನ್ನು ಮಾತಾಡಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ