ಜೈಲಿಗೆ ಭೇಟಿ ನೀಡಿ ಸ್ನೇಹಿತ ದರ್ಶನ್​ರನ್ನು ಮಾತಾಡಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಜೈಲಿಗೆ ಭೇಟಿ ನೀಡಿ ಸ್ನೇಹಿತ ದರ್ಶನ್​ರನ್ನು ಮಾತಾಡಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2024 | 4:07 PM

ರೈತ ನಾಯಕರಾಗಿದ್ದ ಕೆಎಸ್ ಪುಟ್ಟಣ್ಣಯ್ಯ ಮಗನಾಗಿರುವ ದರ್ಶನ್ ಪುಟ್ಟಣ್ಣಯ್ಯ ಯುಎಸ್ ನಲ್ಲಿ ಒಬ್ಬ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರೂ ಅಲ್ಲಿನ ಐಶಾರಾಮಿ ಬದುಕನ್ನು ಬಿಟ್ಟು ತಂದೆಯ ಹಾಗೆ ರಾಜ್ಯದ ಸಲಲುವಾಗಿ ಹೋರಾಡಲು ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಅವರು ಸದನದಲ್ಲಿ ಅದ್ಭುತವಾಗಿ ಮಾತಾಡುತ್ತಾರೆ.

ಅನೇಕಲ್ (ಬೆಂಗಳೂರು): ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಚಿತ್ರನಟ ಅವರನ್ನು ಇವತ್ತು ಕಂಡು ಮಾತಾಡಲು ಬಂದ ಕೆಲ ಜನರ ಪೈಕಿ ಮೇಲುಕೋಟೆ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣಯ್ಯ ಒಬ್ಬರು. ಶಾಸಕರೇ ಹೇಳುವ ದರ್ಶನ್ ಮತ್ತು ಅವರ ನಡುವೆ ಬಹಳ ವರ್ಷಗಳ ಸ್ನೇಹ. ಅವರನ್ನು ನೋಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದೆ, ಇವತ್ತು ಸಿಕ್ಕಿತು, ಹೋಗಿ ಮಾತಾಡಿದೆ ಎಂದು ಡೌನ್ ಟು ಅರ್ಥ್ ಸ್ವಭಾವದ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಇಬ್ಬರು ಸ್ನೇಹಿತರ ನಡುವೆ ನಡೆಯುವ ಸಂಭಾಷಣೆ ತಮ್ಮಿಬ್ಬರಲ್ಲಿ ನಡೆಯಿತು,. ಸೆಷನ್ಸ್ ನಡೆಯುತ್ತಿರುವ ಬಗ್ಗೆ ಕೇಳಿದರು. ಅವರ ಊಟ, ಅರೋಗ್ಯ ಮತ್ತು ದಿನಚರಿಯ ಬಗ್ಗೆ ಕೇಳಿದೆ. ಪುಸ್ತಕಗಳನ್ನು ಓದುತ್ತಿದ್ದಾರೆ, ಒಂದಷ್ಟು ಪುಸ್ತಗಳನ್ನು ಅವರಿಗೆ ಕೊಟ್ಟೆವು, ಬೆಳಗಿನ ಸಮಯದಲ್ಲಿ ಯೋಗ ಮಾಡುತ್ತಿರಬಹುದು, ಅದರ ಬಗ್ಗೆ ನಾನು ಕೇಳಲಿಲ್ಲ ಎಂದು ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:   ದರ್ಶನ್ ನೋಡಲು ಸೋನಲ್ ಯಾಕೆ ಬರಲಿಲ್ಲ? ಉತ್ತರ ನೀಡಿದ ತರುಣ್ ಸುಧೀರ್