ಬಿಜೆಪಿ ಸರ್ಕಾರದ ಹಗರಣಗಳ ಆರೋಪಪಟ್ಟಿಯನ್ನು ಸದನದಲ್ಲಿ ಓದಿದ ಸಿಎಂ ಸಿದ್ದರಾಮಯ್ಯ
ನಿಯತ್ತಿನಿಂದ ತೆರಿಗೆ ಪಾವತಿಸುವ ಕನ್ನಡಿಗರ ದುಡ್ಡು ಜನಪ್ರತಿನಿಧಿಗಳ ಅರಚಾಟ-ಕೂಗಾಟದಲ್ಲಿ ವೇಸ್ಟ್ ಅಗುತ್ತಿದೆ. ಸರ್ಕಾರದಲ್ಲಿ ಯಾರೇ ಇದ್ದರೂ ಹಗರಣಗಳ ಆರೋಪಗಳು ತಪ್ಪಿದ್ದಲ್ಲ. ಅವರು ಇವರ ಮೇಲೆ ಇವರು ಅವರ ಮೇಲೆ ಆರೋಪ ಮಾಡುವುದಕ್ಕೆ ಅಧಿವೇಶನ ನಡೆಸುವುದಾದರೆ ನಡೆಸದಿರುವುದೇ ಜನ ಪ್ರತಿನಿಧಿಗಳು ಕನ್ನಡಿಗರಿಗೆ ಮಾಡಬಹುದಾದ ದೊಡ್ಡ ಉಪಕಾರ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸದನಕ್ಕೆ ತಯಾರಾಗಿ ಬಂದಿದ್ದರು. ಬಿಜೆಪಿ ಶಾಸಕರು ಸದನದ ಕಾರ್ಯಕಲಾಪದ ಸಮಯ ವೃಥಾ ಹಾಳು ಮಾಡುತ್ತಿದ್ದಾರೆ ಅಂತ ನಿನ್ನೆ ಹೇಳಿದ್ದ ಅವರಿಗೆ ಇವತ್ತೂ ಕೂಡ ಅವರು ಅದನ್ನು ಮುಂದುವರಿಸುವ ಅನುಮಾನವಿತ್ತು. ಹಾಗಾಗೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದವು ಎಂದು ಆರೋಪಿಸಲಾಗಿದ್ದ ಹಗರಣ ದೊಡ್ಡ ಲಿಸ್ಟ್ ರೆಡಿ ಮಾಡಿಕೊಂಡು ಬಂದಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹಗರಣ, ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹಗರಣ, ಅರ್ ಅಶೋಕ ಕಂದಾಯ ಸಚಿವರಾಗಿದ್ದಾಗ ಅವರ ಇಲಾಖೆಯ ಹಗರಣ, ಕೋವಿಡ್ ಸಂದರ್ಭದಲ್ಲಿ ನಡೆದ ಹಗರಣ ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದಾಗಿ ಗಟ್ಟಿದ್ವನಿಯಲ್ಲಿ ಓದುತ್ತಾ ಹೋದಂತೆಲ್ಲ, ಬಿಜೆಪಿ ನಾಯಕರು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಅಂತ ಕೂಗುವುದನ್ನು ಮುಂದುವರಿಸಿದರು. ಸಿಎಂ ಅಶೋಕ ಹೆಸರು ಹೇಳಿದಾಗ ಅವರು ನಮ್ಮದನ್ನೂ ಸಿಬಿಐಗೆ ಕೊಡಿ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಏಳೆಂಟು ಸಚಿವರನ್ನು ಈಗಲೇ ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಶಾಸಕರ ಆಗ್ರಹ