ದರ್ಶನ್ ನೋಡಲು ಸೋನಲ್ ಯಾಕೆ ಬರಲಿಲ್ಲ? ಉತ್ತರ ನೀಡಿದ ತರುಣ್ ಸುಧೀರ್
ನಟಿ ಸೋನಲ್ ಮಾಂಥೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರು ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ. ಈ ವಿಚಾರದ ಬಗ್ಗೆ ಜೈಲಿನಲ್ಲಿರುವ ದರ್ಶನ್ ಜೊತೆ ತರುಣ್ ಸುಧೀರ್ ಅವರು ಇಂದು (ಜುಲೈ 19) ಮಾತನಾಡಿ ಬಂದಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ದರ್ಶನ್ ಅವರನ್ನು ಮದುವೆಗೆ ಕರೆಯಲು ಸೋನಲ್ ಯಾಕೆ ಬಂದಿಲ್ಲ ಎಂಬ ಬಗ್ಗೆಯೂ ತರುಣ್ ಸುಧೀರ್ ಮಾತನಾಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಅವರು ಸದ್ಯದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ನಟಿ ಸೋನಲ್ ಮಾಂಥೆರೋ ಜೊತೆ ಅವರ ಮದುವೆ ನಡೆಯಲಿದೆ. ಆದರೆ ಇವರ ಮದುವೆಗೆ ನಟ ದರ್ಶನ್ ಬರುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ಯಾಕೆಂದರೆ, ದರ್ಶನ್ ಸದ್ಯಕ್ಕೆ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆಗಸ್ಟ್ 1ರ ತನಕ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಮುಂದುವರಿಯಲಿದೆ. ಆ ಬಳಿಕವೂ ಜಾಮೀನು ಸಿಗುವುದು ಸುಲಭವಿಲ್ಲ. ತರುಣ್ ಸುಧೀರ್ ಅವರು ಇಂದು (ಜುಲೈ 19) ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೋನಲ್ ಮಾಂಥೆರೋ ಬಂದಿಲ್ಲ. ಯಾಕೆ ಎಂಬುದಕ್ಕೆ ತರುಣ್ ಉತ್ತರಿಸಿದ್ದಾರೆ. ‘ಅನುಮತಿ ಇದ್ದಿದ್ದು 5 ಜನರಿಗೆ ಮಾತ್ರ. ಹಾಗಾಗಿ ನಾವು ಮಾತ್ರ ಬಂದಿದ್ದೇವೆ. 2 ವಾರದಿಂದ ನಾನು ಪ್ರಯತ್ನಿಸುತ್ತಿದ್ದೆ. ಮೊದಲು ಕುಟುಂಬದವರ ಭೇಟಿ ಆಗಬೇಕಿತ್ತು. ನನಗೆ ಇಂದು ಅವಕಾಶ ಸಿಕ್ಕಿತು’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos