AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕರ ವಿರುದ್ಧ ವನ್ ಮ್ಯಾನ್ ಆರ್ಮಿಯಂತೆ ಕೂಗಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಬಿಜೆಪಿ ಶಾಸಕರ ವಿರುದ್ಧ ವನ್ ಮ್ಯಾನ್ ಆರ್ಮಿಯಂತೆ ಕೂಗಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 19, 2024 | 3:16 PM

Share

ಪ್ರದೀಪ್ ಈಶ್ವರ್ ಜನಪ್ರಿಯ ನಾಯಕ ಮತ್ತು ಶಾಸಕ ಅನ್ನೋದರಲ್ಲಿ ಅನುಮಾನವಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಹೆವಿವೇಟ್ ಡಾ ಕೆ ಸುಧಾಕರ್ ಅವರನ್ನು ಸೋಲಿಸಿದಾಗನಿಂದ ಅವರ ಖದರು ಬೇರೆಯಾಗಿದೆ. ಆದರೆ, ಪರಿಶ್ರಮ ಅಕಾಡೆಮಿಯಲ್ಲಿ ಅವರು ಟ್ಯೂಟರ್ ಆಗಿಯೂ ಕೆಲಸ ಮಾಡುವುದರಿಂದ ಸದನದಲ್ಲಿ ಒಂದೇ ಸಮ ಕಿರುಚಾಡುವುದು ಸೂಕ್ತವಲ್ಲ.

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸದನದ ಹೊರಗೆ ಮತ್ತು ಒಳಗೆ ಆವೇಶದಲ್ಲಿ ಮಾತಾಡುತ್ತಾರೆ. ಬಿಜೆಪಿ ಶಾಸಕರು ಕಲಾಪ ನಡೆಯದಂತೆ ಒಂದೇ ಸಮನೆ ಪ್ರತಿಭಟನೆ ನಡೆಸುತ್ತಿದ್ದ ಕಾರಣ ರೊಚ್ಚಿಗೆದ್ದ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಏನೆಲ್ಲ ಹಗರಣಗಳು ನಡೆದಿವೆ ಅಂತ ಒಂದು ಪಟ್ಟಿಯನ್ನು ಸದನದಲ್ಲಿ ಓದಿದರು. ಅವರು ಸಿಟ್ಟಿನಲ್ಲಿ ಅರೋಪ ಪಟ್ಟಿ ಓದುತ್ತಿದ್ದರೆ ಬಿಜೆಪಿ ಶಾಸಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಪಟ್ಟಿ ಓದುವುದನ್ನು ಮುಗಿಸದ ಬಳಿಕವೂ ಅವರು ಬಿಜೆಪಿ ಶಾಸಕರ ವಿರುದ್ಧ ಕೈ ಮಾಡಿ ಒಂದೇ ಸಮ ಏನನ್ನೋ ಹೇಳಿದರು. ಪ್ರಾಯಶಃ ಅವರ ಮೈಕ್ ಆಫ್ ಆಗಿತ್ತು ಅನಿಸುತ್ತೆ. ಹಾಗಾಗಿ ಏನು ಹೇಳುತ್ತಿದ್ದಾರೆ ಅಂತ ಕೇಳಿಸಲ್ಲ. ಸಭಾಧ್ಯಕ್ಷರು, ಈಶ್ವರ್ ನಿಲ್ಲಿಸಿ ಶರತ್ ಬಚ್ಚೇಗೌಡ ಮಾತಾಡುತ್ತಿದ್ದಾರೆ, ಅವರಿಗೆ ಮಾತಾಡಲು ಬಿಡಿಅ ಅಂತ ಹೇಳಿದರೂ ಈಶ್ವರ್ ಆವೇಶಕ್ಕೆ ಒಳಗಾದವರ ಹಾಗೆ ಕೂಗುವುದನ್ನು ಮುಂದುವರಿಸುತ್ತಾರೆ. ಕೊನೆಗೆ ಅವರ ಪಕ್ಷ ಪಕ್ಷದ ಇಬ್ಬರು ಸದಸ್ಯರು ಬಂದು ಸಮಾಧಾನಪಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟು ಹಂಚಿಕೆಯಾಗಿದೆ ಅಂತ ಯಡಿಯೂರಪ್ಪ ಹೇಳಿದ್ದರು: ಪ್ರದೀಪ್ ಈಶ್ವರ್