‘ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ’: ತರುಣ್​ಗೆ ದರ್ಶನ್​ ಭರವಸೆ

ನಟ ದರ್ಶನ್​ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿರ್ದೇಶಕ ತರುಣ್​ ಸುಧೀರ್​ ಭೇಟಿ ಮಾಡಿದ್ದಾರೆ. ನಟಿ ಸೋನಲ್​ ಮಾಂಥೆರೋ ಜೊತೆ ಹಸೆಮಣೆ ಏರಲು ಸಜ್ಜಾಗಿರುವ ತರುಣ್​ ಸುಧೀರ್​ ಅವರು ಮದುವೆಯ ದಿನಾಂಕದ ಬಗ್ಗೆ ದರ್ಶನ್​ ಜತೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಮದುವೆ ಡೇಟ್​ ಬದಲಾಗುವುದು ಬೇಡ ಅಂತ ದರ್ಶನ್​ ಹೇಳಿರುವುದಾಗಿ ತರುಣ್​ ಮಾಹಿತಿ ನೀಡಿದ್ದಾರೆ.

‘ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ’: ತರುಣ್​ಗೆ ದರ್ಶನ್​ ಭರವಸೆ
ತರುಣ್​ ಸುಧೀರ್​, ದರ್ಶನ್​
Follow us
ರಾಮು, ಆನೇಕಲ್​
| Updated By: ಮದನ್​ ಕುಮಾರ್​

Updated on: Jul 19, 2024 | 2:56 PM

ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್​ ಅವರನ್ನು ನಿರ್ದೇಶಕ ತರುಣ್​ ಸುಧೀರ್​ ಇಂದು (ಜುಲೈ 19) ಭೇಟಿ ಆಗಿದ್ದಾರೆ. ದರ್ಶನ್​ ಅರೆಸ್ಟ್​ ಆದ ಬಳಿಕ ಇದೇ ಮೊದಲ ಬಾರಿಗೆ ತರುಣ್​ ಬಂದು ನೋಡಿದ್ದಾರೆ. ಇಬ್ಬರ ನಡುವೆ ಹಲವು ವರ್ಷಗಳಿಂದ ಆತ್ಮೀಯತೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ತರುಣ್​ ಸುಧೀರ್​ ಅವರು ನಟಿ ಸೋನಲ್​ ಮಾಂಥೆರೋ ಜೊತೆ ಮದುವೆ ಆಗಲಿದ್ದಾರೆ. ಆ ಮದುವೆಗೆ ತಾವು ಕೂಡ ಬರುವುದಾಗಿ ದರ್ಶನ್​ ಭರವಸೆ ನೀಡಿದ್ದಾರೆ ಎಂದು ತರುಣ್​ ಹೇಳಿದ್ದಾರೆ. ಪರಪ್ಪನ ಅಗ್ರಹಾರದಿಂದ ಹೊರಬಂದ ಬಳಿಕ ತರುಣ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

‘ದರ್ಶನ್​ ಅವರಿಗೆ ಸ್ವಲ್ಪ ಹುಷಾರಿರಲಿಲ್ಲ. ವಾತಾವರಣ ಬದಲಾವಣೆಯಿಂದ ಆ ರೀತಿ ಆಗಿತ್ತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನನ್ನನ್ನು ಯಾವಾಗಲೂ ನಗುತ್ತ ಮಾತನಾಡಿಸುವ ರೀತಿಯೇ ಇಂದು ಕೂಡ ಮಾತಾಡಿದರು. ಅವರಿಗೆ ಹೋಲಿಸಿದರೆ ನಾವೇ ವೀಕ್ ಆಗಿದ್ದೇವೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಆರಾಮಾಗಿದ್ದೇನೆ ಮಗನೆ ಅಂತ ಹೇಳಿದ್ರು’ ಎಂದಿದ್ದಾರೆ ತರುಣ್​ ಸುಧೀರ್​.

ಇದನ್ನೂ ಓದಿ: ದರ್ಶನ್ ಯಾಕೆ ಜೈಲಿನಲ್ಲೇ ಇರಬೇಕು? ಪೊಲೀಸರು ನೀಡಿದ 30 ಕಾರಣಗಳು ಇಲ್ಲಿವೆ..

‘ನನ್ನ ಮದುವೆ ಬಗ್ಗೆ ದರ್ಶನ್​ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ‘ನಾನು ಬಂದೇ ಬರ್ತೀನಿ’ ಎನ್ನುವ ನಂಬಿಕೆ ಅವರಲ್ಲಿ ಇದೆ. ದರ್ಶನ್​ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲೇ ನಾವು ಕೂಡ ಇದ್ದೇವೆ. ಹಾಗೆಯೇ ಆಗಲಿ ಅಂತ ಪ್ರಾರ್ಥಿಸುತ್ತೇವೆ’ ಎಂದಿದ್ದಾರೆ ತರುಣ್​.

‘ನನ್ನ ಮದುವೆಗೆ ಬರಲು ವಿಶೇಷ ಅನುಮತಿ ಇದೆಯೋ ಇಲ್ಲವೋ ಎಂಬ ನನಗೆ ತಿಳಿದಿಲ್ಲ. ಮದುವೆ ದಿನಾಂಕಕ್ಕೂ ಮೊದಲೇ ದರ್ಶನ್​ ಅವರು ಹೊರಗೆ ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ. ಇಂದು ಆಮಂತ್ರಣ ಪತ್ರಿಕೆ ನೀಡಲು ಸಾಧ್ಯವಾಗಿಲ್ಲ. ಯಾಕೆಂದರೆ ಜೈಲಿನ ಒಳಗೆ ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ’ ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ