ಪವಿತ್ರಾ ಆಪ್ತರಿಂದಲೇ ನಡೆಯಿತಾ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ?
ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಅವರು ಈಗ ಪೊಲೀಸರಿಗೆ ವರದಿ ನೀಡಿದ್ದಾರೆ. ರೇಣುಕಾ ಸ್ವಾಮಿ ದೇಹಕ್ಕೆ ಹಲವಾರು ಗಂಭೀರ ಹೊಡೆತಗಳು ಬಿದ್ದಿದ್ದವು. ಈ ಏಟುಗಳಿಂದ ರೇಣುಕಾ ಸ್ವಾಮಿ ನಲುಗಿ ಹೋಗಿದ್ಧಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ ಕಳೆದ ಒಂದೂವರೆ ತಿಂಗಳಿಂದ ಸದ್ದು ಮಾಡುತ್ತಲೇ ಇದೆ. ರೇಣುಕಾ ಸ್ವಾಮಿ ಹತ್ಯೆಯಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪ್ರಮುಖ ಆರೋಪಿಗಳಾಗಿದ್ದಾರೆ. ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ಎಲ್ಲರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಮಧ್ಯೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ. ಇದರಲ್ಲಿ ರೇಣುಕಾ ಸ್ವಾಮಿಗೆ ಎಷ್ಟು ಚಿತ್ರ ಹಿಂಸೆ ನೀಡಲಾಗಿತ್ತು ಎಂಬುದರ ಮಾಹಿತಿ ಇದೆ. ಇದರಲ್ಲಿರೋ ಮಾಹಿತಿಯಿಂದ ಅನೇಕರಿಗೆ ಶಾಕ್ ಆಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ ನಡೆದಿದೆ. ಅವರು ಈಗ ಪೊಲೀಸರಿಗೆ ವರದಿ ನೀಡಿದ್ದಾರೆ. ರೇಣುಕಾ ಸ್ವಾಮಿ ದೇಹಕ್ಕೆ ಹಲವಾರು ಗಂಭೀರ ಹೊಡೆತಗಳು ಬಿದ್ದಿದ್ದವು. ಈ ಏಟುಗಳಿಂದ ರೇಣುಕಾ ಸ್ವಾಮಿ ನಲುಗಿ ಹೋಗಿದ್ದರು. ನೋವ ತಾಳಲಾರದೆ ಹಂತ ಹಂತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಕೀಲರಿಗೆ ದರ್ಶನ್, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್ ಹೇಳೋದು ಕೇಳಿ..
ಪವಿತ್ರಾ ಆಪ್ತರಿಂದಲೇ ಮರಣೋತ್ತರ ಪರೀಕ್ಷೆ?
ಪವಿತ್ರಾ ಗೌಡ ಸ್ನೇಹಿತೆಯ ಪತಿಯಿಂದಲೇ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ವರದಿ ಆಗಿತ್ತು. ಅವರು ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿ ಸಹಿ ಮಾಡಿದ ವರದಿಯಲ್ಲಿ ಅವರ ಹೆಸರಿಲ್ಲ.
ನ್ಯಾಯಾಂಗ ಬಂಧನ
ದರ್ಶನ್ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಜುಲೈ 18ಕ್ಕೆ ಪೂರ್ಣಗೊಳ್ಳುವುದರಲ್ಲಿತ್ತು. ಅವರನ್ನು ವಿಡಿಯೋ ಕಾಲ್ ಮೂಲಕ ಜಡ್ಡ್ಎದುರು ಹಾಜರು ಪಡಿಸಲಾಗಿದೆ. ಆಗಸ್ಟ್ 2ರವರೆಗೆ ದರ್ಶನ್ ನ್ಯಾಯಾಂಗದ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.