‘ಬ್ಯಾಕ್‍ ಬೆಂಚರ್ಸ್’ ಸುಂದರಿ ಮಾನ್ಯ ಗೌಡ; ಇಂಜಿನಿಯರಿಂಗ್‍ ಮುಗಿಸಿ ನಟಿಯಾದ ಬೆಡಗಿ

‘ಬ್ಯಾಕ್‍ ಬೆಂಚರ್ಸ್’ ಮಾತ್ರವಲ್ಲದೇ ‘ಮಾನ್ಸೂನ್ ರಾಗ’, ‘ವೀರಂ’ ಸಿನಿಮಾದಲ್ಲಿ ಮಾನ್ಯ ನಟಿಸಿ ಅನುಭವ ಪಡೆದಿದ್ದಾರೆ. ಅಲ್ಲದೇ ತೆಲುಗಿನ ‘ಮಿಸಸ್ ಕರ್ನಲ್‍’ ಸಿನಿಮಾದಲ್ಲೂ ಅವರು ಅಭಿನಯಿಸಿದ್ದಾರೆ. ಈಗ ಅವರಿಗೆ ಅನೇಕ ಅವಕಾಶಗಳು ಸಿಗುತ್ತಿದೆ. ‘ಬ್ಯಾಕ್​ ಬೆಂಚರ್ಸ್​’ ಸಿನಿಮಾಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹೊಸ ಅಫರ್​ಗಳನ್ನು ಒಪ್ಪಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

‘ಬ್ಯಾಕ್‍ ಬೆಂಚರ್ಸ್’ ಸುಂದರಿ ಮಾನ್ಯ ಗೌಡ; ಇಂಜಿನಿಯರಿಂಗ್‍ ಮುಗಿಸಿ ನಟಿಯಾದ ಬೆಡಗಿ
ಮಾನ್ಯ ಗೌಡ
Follow us
ಮದನ್​ ಕುಮಾರ್​
|

Updated on: Jul 18, 2024 | 6:52 PM

ಯುವ ಪ್ರತಿಭೆಗಳಿಂದ ತುಂಬಿರುವ ‘ಬ್ಯಾಕ್‍ ಬೆಂಚರ್ಸ್’ ಸಿನಿಮಾ ಈ ಶುಕ್ರವಾರ (ಜುಲೈ 19) ರಿಲೀಸ್​ ಆಗುತ್ತಿದೆ. ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಈ ಸಿನಿಮಾವನ್ನು ರಾಜಶೇಖರ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ‘ಬ್ಯಾಕ್‍ ಬೆಂಚರ್ಸ್’ ಸಿನಿಮಾ ಮೂಲಕ ರಂಜನ್, ಜತಿನ್ ಆರ್ಯನ್, ಶಶಾಂಕ್ ಸಿಂಹ, ಆಕಾಶ್ ಎಂ.ಪಿ, ಕುಂಕುಮ್‍, ವಿಯೋಮಿ ವನಿತಾ, ಅನುಷಾ ಸುರೇಶ್ ಮುಂತಾದವರು ನಟಿಸಿದ್ದಾರೆ. ಇವರೆಲ್ಲರೂ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹೊಸ ನಟಿ ಮಾನ್ಯ ಗೌಡ ಸಹ ಕೂಡ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾದಲ್ಲಿ ಮಿಂಚಲಿದ್ದಾರೆ. ಇಂಜಿನಿಯರಿಂಗ್‍ ಮುಗಿಸಿ ಬಂದಿರುವ ಮಾನ್ಯ ಗೌಡ ಅವರು ಈ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ.

‘ಬ್ಯಾಕ್​ ಬೆಂಚರ್ಸ್​’ ಸಿನಿಮಾದಲ್ಲಿ ಮಾನ್ಯ ಗೌಡ ಅವರು ಮಾಯಾ ಎಂಬ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾ ಮೇಲೆ ಅವರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆಡಿಷನ್​ ನೀಡುವ ಮೂಲಕ ಅವರು ಈ ಚಿತ್ರಕ್ಕೆ ಆಯ್ಕೆ ಆದರು. ಆ ಅನುಭವದ ಬಗ್ಗೆ ಅವರು ಮಾತನಾಡಿದ್ದಾರೆ. ‘3 ವರ್ಷಗಳ ಹಿಂದೆ ನಾನು ಇಂಜಿನಿಯರಿಂಗ್‍ ಮುಗಿಸಿದೆ. ಬಾಲ್ಯದಿಂದಲೂ ಅಭಿನಯದ ಬಗ್ಗೆ ನನಗೆ ಆಸಕ್ತಿ. ಶಾಸ್ತ್ರೀಯ ನೃತ್ಯವನ್ನೂ ಕಲಿತಿದ್ದೇನೆ. ಅಲ್ಲದೇ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದೆ. ಹೀಗಿರುವಾಗಲೇ ಬ್ಯಾಕ್‍ ಬೆಂಚರ್ಸ್ ಸಿನಿಮಾಗೆ ಆಡಿಷನ್‍ ನಡೆಯುವ ವಿಷಯ ತಿಳಿಯಿತು. ಅದರಲ್ಲಿ ಪಾಲ್ಗೊಂಡೆ’ ಎಂದು ಮಾನ್ಯ ಗೌಡ ಹೇಳಿದ್ದಾರೆ.

‘ಈ ಆಡಿಷನ್​ನಲ್ಲಿ ಅಂದಾಜು 700 ಯುವಕ-ಯುವತಿಯರು ಪಾಲ್ಗೊಂಡಿದ್ದರು. ಡೈರೆಕ್ಟರ್​ ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ನಟಿಸಿ ತೋರಿಸಿದೆ. ಅಷ್ಟು ಜನರ ನಡುವೆ ನಾನು ಆಯ್ಕೆ ಆಗುತ್ತೀನೋ ಅಥವಾ ಇಲ್ಲವೋ ಎಂಬ ಅನುಮಾನ ನನಗಿತ್ತು. ಕೊನೆಗೂ, ಚಿತ್ರತಂಡಕ್ಕೆ ಸೆಲೆಕ್ಟ್​ ಆದ 30 ಜನರಲ್ಲಿ ನಾನೂ ಒಬ್ಬಳಾಗಿದ್ದೆ’ ಎಂದಿದ್ದಾರೆ ಮಾನ್ಯ. ಆಡಿಷನ್‍ನಲ್ಲಿ ಆಯ್ಕೆ ಆದ ಬಳಿ ಸುಚೇಂದ್ರ ಪ್ರಸಾದ್‍ ಅವರು ಈ ಕಲಾವಿದರಿಗೆ ಒಂದು ಕಾರ್ಯಾಗಾರ ಮಾಡಿದ್ದಾರೆ. ಅದರಲ್ಲಿ ಅನೇಕ ವಿಷಯಗಳ ಬಗ್ಗೆ ತರಬೇತಿ ನೀಡಿದ್ದಾರೆ. ಬಳಿಕ, 6 ತಿಂಗಳ ಕಾಲ ರಿಹರ್ಸಲ್‍ ನಡೆಸಿದ ಬಳಿಕವೇ ಚಿತ್ರತಂಡ ಶೂಟಿಂಗ್ ಮಾಡಿದೆ. ಇದರಿಂದ ಮಾನ್ಯ ಅವರಿಗೆ ಅನುಕೂಲ ಆಗಿದೆ.

ಇದನ್ನೂ ಓದಿ: ರೌಡಿಸಂ ಕಥೆಗೆ ಹೊಸ ಬಣ್ಣ ನೀಡಿದ ‘ಕೆಂಡ’ ಸಿನಿಮಾ; ಟ್ರೇಲರ್​ನಲ್ಲಿದೆ ಝಲಕ್​

ಶೂಟಿಂಗ್​ ಅನುಭವ ಮತ್ತು ಪಾತ್ರದ ಬಗ್ಗೆಯೂ ಮಾನ್ಯ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ‘ನಾನು ಹೊಸಬಳಾದ ಕಾರಣ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ಸಿನಿಮಾದ ಡೈರೆಕ್ಟರ್​ ರಾಜಶೇಖರ್ ಹಾಗೂ ಛಾಯಾಗ್ರಾಹಕ ಮನೋಹರ್ ಜೋಷಿ ಅವರು ನಮ್ಮೆಲ್ಲರಿಗೂ ಚೆನ್ನಾಗಿ ಗೈಡ್‍ ಮಾಡಿದರು. ಚೆನ್ನಾಗಿ ಹೇಳಿಕೊಟ್ಟಿರುವುದು ಮಾತ್ರವಲ್ಲದೇ ನನ್ನನ್ನು ತುಂಬ ಚೆನ್ನಾಗಿ ತೆರೆಮೇಲೆ ತೋರಿಸಿದ್ದಾರೆ. ನಟನೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್‍ ಹಾಗೂ ಮಾರ್ಕೆಟಿಂಗ್‍ ವಿಭಾಗಗಳಲ್ಲೂ ನಾನು ತೊಡಗಿಸಿಕೊಂಡಿದ್ದೇನೆ. ಇದರಿಂದ ಸಾಕಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು’ ಎಂದು ಮಾನ್ಯ ಹೇಳಿದ್ದಾರೆ.

‘ಈ ಸಿನಿಮಾದಲ್ಲಿ 4 ಪ್ರಮುಖ ನಾಯಕಿಯರ ಪಾತ್ರಗಳಿವೆ. ರಿಹರ್ಸಲ್‍ ವೇಳೆ ಈ ನಾಲ್ಕೂ ಪಾತ್ರಗಳನ್ನು ನಾನು ಮಾಡಿದ್ದೆ. ಅದರಲ್ಲಿ ನನಗೆ ಮಾಯಾ ಎಂಬ ಪಾತ್ರ ಬಹಳ ಇಷ್ಟವಾಯ್ತು. ಅದು ನನಗೆ ಸೂಟ್‍ ಆಗುತ್ತದೆ, ಅದನ್ನು ನಾನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರವನ್ನು ಕೊಟ್ಟಿದ್ದಾರೆ. ನಾನು ಈ ಪಾತ್ರದಲ್ಲಿ ಬಜಾರಿಯಾಗಿ ಕಾಣಿಸಿಕೊಂಡಿದ್ದೇನೆ. ತುಂಬ ಬೋಲ್ಡ್ ಆದಂತಹ ಪಾತ್ರವಿದು. ನನಗೆ ಇಷ್ಟವಾದ ಪಾತ್ರ ಸಿಕ್ಕಿದೆ ಎಂಬ ಖುಷಿ ನನಗಿದೆ. ಜನರಿಗೂ ಇದು ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂಬುದು ಮಾನ್ಯಾ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು