ರೌಡಿಸಂ ಕಥೆಗೆ ಹೊಸ ಬಣ್ಣ ನೀಡಿದ ‘ಕೆಂಡ’ ಸಿನಿಮಾ; ಟ್ರೇಲರ್​ನಲ್ಲಿದೆ ಝಲಕ್​

ಜುಲೈ 26ಕ್ಕೆ ‘ಕೆಂಡ’ ಸಿನಿಮಾ ರಿಲೀಸ್​ ಆಗಲಿದೆ. ಈಗಾಗಲೇ ಕೆಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾಗೆ ಪ್ರಶಸ್ತಿಗಳು ಕೂಡ ಬಂದಿವೆ. ರೂಪಾ ರಾವ್​ ನಿರ್ಮಾಣದ ಈ ಚಿತ್ರವನ್ನು ಸಹದೇವ್​ ಕೆಲವಡಿ ಅವರು ನಿರ್ದೇಶಿಸಿದ್ದಾರೆ. ಇದರಲ್ಲಿ ರೌಡಿಸಂ ಕಥೆ ಇದೆ. ಆದರೆ ಸಿನಿಮಾದ ನಿರೂಪಣಾ ಶೈಲಿ ಭಿನ್ನವಾಗಿದೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿದೆ.

ರೌಡಿಸಂ ಕಥೆಗೆ ಹೊಸ ಬಣ್ಣ ನೀಡಿದ ‘ಕೆಂಡ’ ಸಿನಿಮಾ; ಟ್ರೇಲರ್​ನಲ್ಲಿದೆ ಝಲಕ್​
‘ಕೆಂಡ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Jul 11, 2024 | 7:38 PM

ಭೂಗತ ಜಗತ್ತಿನ ಕಥೆ ಇರುವ ಸಿನಿಮಾಗಳು ಹೀಗೆಯೇ ಇರಲಿದೆ ಎಂಬ ಒಂದಷ್ಟು ಸಿದ್ಧಸೂತ್ರಗಳು ಚಿತ್ರರಂಗದಲ್ಲಿ ಇವೆ. ಆದರೆ ಆ ಸೂತ್ರಗಳನ್ನು ಬದಿಗೊತ್ತಿ ಹೊಸ ಬಗೆಯಲ್ಲಿ ಅಂಡರ್​ವರ್ಲ್ಡ್​ ಕಹಾನಿಯನ್ನು ಪ್ರೇಕ್ಷಕರ ಮುಂದಿಡಲು ಬರುತ್ತಿದೆ ‘ಕೆಂಡ’ ಸಿನಿಮಾ. ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಸಹದೇವ್ ಕೆಲವಡಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜುಲೈ 26ರಂದು ‘ಕೆಂಡ’ ಸಿನಿಮಾ ಬಿಡುಗಡೆ ಆಗಲಿದೆ. ‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ರೂಪಾ ರಾವ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಹೇಗಿರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

‘ಕೆಂಡ’ ಸಿನಿಮಾ ಈಗಾಗಲೇ ಕೆಲವು ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನ ಕಂಡಿದೆ. ಜೊತೆಗೆ ಕೆಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಬಿಡುಗಡೆಗೂ ಮುನ್ನವೇ ಇಷ್ಟೆಲ್ಲ ಮನ್ನಣೆ ಪಡೆದಿರುವ ಈ ಸಿನಿಮಾ ಈಗ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಟ್ರೇಲರ್​ ಅನಾವರಣ ಮಾಡಲಾಯಿತು. ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಅವರು ಟ್ರೇಲರ್​ ಬಿಡುಗಡೆ ಮಾಡಿದರು.

‘ಕೆಂಡ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕಿ ರೂಪಾ ರಾವ್, ನಿರ್ದೇಶಕ ಸಹದೇವ್ ಕೆಲವಡಿ, ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ಕಲಾವಿದರಾದ ಬಿ.ವಿ. ಭರತ್, ಶ್ರೀಧರ್ ಪ್ರಣವ್, ವಿನೋದ್ ರವೀಂದ್ರನ್, ಸತೀಶ್, ದೀಪ್ತಿ, ಪೃಥ್ವಿ ಮುಂತಾದವರು ಭಾಗಿ ಆಗಿದ್ದರು. ಸಿನಿಮಾದ ಬಗ್ಗೆ ರೂಪಾ ರಾವ್​, ಸಹದೇವ್​ ಕೆಲವಡಿ ಒಂದಷ್ಟು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಹೇಮಂತ್ ರಾವ್ ದೀರ್ಘ ಹಾಗೂ ಅಚ್ಚ ಕನ್ನಡದಲ್ಲೇ ಟೈಟಲ್ ನೀಡೋದೇಕೆ? ನಿರ್ದೇಶಕ ಕೊಟ್ಟರು ಉತ್ತರ

ಗಾರ್ಮೆಂಟ್ಸ್ ಕೆಲಸ ಮಾಡುವ ಯುವಕನೊಬ್ಬ ಪರಿಸ್ಥಿತಿಗಳ ಕೈಗೆ ಸಿಕ್ಕು ಭೂಗತ ಲೋಕಕ್ಕೆ ಪ್ರವೇಶ ಪಡೆಯುತ್ತಾನೆ. ರೌಡಿಸಂ ಕಥೆ ಇದ್ದರೂ ಕೂಡ ಈ ಸಿನಿಮಾ ಸಿದ್ಧಸೂತ್ರಗಳ ರೀತಿಯಲ್ಲಿ ಇಲ್ಲ. ಕ್ರೌರ್ಯದ ಕಥೆಯನ್ನು ಸೂಕ್ಷ್ಮ ಸಂವೇದನೆಯ ಮೂಲಕ ತೋರಿಸಲು ಕೂಡ ಸಾಧ್ಯ ಎಂಬುದು ಈ ಸಿನಿಮಾ ಮೂಲಕ ನಿರೂಪಿತವಾಗುವ ಲಕ್ಷಣ ಕಾಣಿಸಿದೆ. ‘ಕೆಂಡ’ ಟ್ರೇಲರ್​ನಲ್ಲಿ ಒಂದಷ್ಟು ವಿಚಾರಗಳು ಬಹಿರಂಗ ಆಗಿವೆ.

ರಿತ್ವಿಕ್ ಕಾಯ್ಕಿಣಿ ಅವರ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಅವರ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಅವರ ಕಲಾ ನಿರ್ದೇಶನ ‘ಕೆಂಡ’ ಸಿನಿಮಾಗೆ ಇದೆ. ಬಿ.ವಿ. ಭರತ್, ವಿನೋದ್ ಸುಶೀಲಾ, ಪ್ರಣವ್ ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಬಿಂದು ರಕ್ಷಿದಿ, ಸಚಿನ್ ಶ್ರೀನಾಥ್, ಶರತ್ ಗೌಡ, ಅರ್ಚನಾ ಶ್ಯಾಮ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ, ಪ್ರಭಾಕರ್ ಜೋಶಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್