ವಕೀಲರಿಗೆ ದರ್ಶನ್​, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್​ ಹೇಳೋದು ಕೇಳಿ..

ದರ್ಶನ್​ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದ್ದು, ಬೇಗ ಜಾಮೀನು ಸಿಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಲಾಯರ್ ನಾರಾಯಣಸ್ವಾಮಿ ಅವರು ಪರಪ್ಪನ ಅಗ್ರಹಾರದಲ್ಲಿ ಇಂದು (ಜುಲೈ 10) ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಕೀಲರು ಕೆಲವು ಮುಖ್ಯ ವಿಚಾರಗಳನ್ನು ತಿಳಿಸಿದ್ದಾರೆ.

ವಕೀಲರಿಗೆ ದರ್ಶನ್​, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್​ ಹೇಳೋದು ಕೇಳಿ..
ಪವಿತ್ರಾ ಗೌಡ, ದರ್ಶನ್​, ವಕೀಲ ನಾರಾಯಣಸ್ವಾಮಿ
Follow us
| Updated By: ಮದನ್​ ಕುಮಾರ್​

Updated on: Jul 10, 2024 | 9:05 PM

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್​, ನಟಿ ಪವಿತ್ರಾ ಗೌಡ ಹಾಗೂ ಇನ್ನುಳಿದ ಸಹಚರರಿಗೆ ಯಾವಾಗ ಜಾಮೀನು ಸಿಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ವಕೀಲ ನಾರಾಯಣಸ್ವಾಮಿ ಅವರು ಇಂದು (ಜುಲೈ 10) ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್​ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ಹೈಪ್ರೊಫೈಲ್​ ಕೇಸ್​ ಆದ್ದರಿಂದ ಎಲ್ಲರೂ ಇದರ ಮೇಲೆ ಕಣ್ಣಿಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾಯುತ್ತಿದ್ದಾರೆ. ದರ್ಶನ್​ ಜೊತೆ ಅರೆಸ್ಟ್ ಆಗಿರುವ ಇನ್ನುಳಿದವರ ಬಗ್ಗೆ ವಕೀಲ ನಾರಾಯಣಸ್ವಾಮಿ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ವೃತ್ತಿಯ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ.

ದರ್ಶನ್​, ಪವಿತ್ರಾ ಗೌಡ ಜೊತೆ ಅರೆಸ್ಟ್​ ಆಗಿರುವವರಲ್ಲಿ ಅನೇಕರು ಬಡವರು ಇದ್ದಾರೆ. ಅವರಿಗೂ ನಾರಾಯಣಸ್ವಾಮಿ ಅವರಿಂದ ಕಾನೂನಿನ ನೆರವು ಸಿಗುತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಈ ಬಗ್ಗೆ ವಕೀಲರು ಉತ್ತರಿಸಿದ್ದಾರೆ. ‘ಐದು ಜನರಿಗೆ ನಾವೇ ವಕಾಲತ್ತು ವಹಿಸಿದ್ದೇವೆ. ಅವರೆಲ್ಲ ಬಡವರು. ಇಲ್ಲಿ ಏನು ನಡೆಯುತ್ತಿದೆ ಎಂಬುದೇ ಅವರಿಗೆ ತಿಳಿದಿಲ್ಲ. ಕಾವೇರಿ ಗಲಾಟೆ ಆದಾಗ ಅನೇಕರ ಮೇಲೆ ಪೊಲೀಸರು ಸುಳ್ಳು ಕೇಸ್​ ಹಾಕಿದ್ದರು. 180 ಜನರನ್ನು ನಾವು ದುಡ್ಡು ತೆಗೆದುಕೊಳ್ಳದೇ ಉಚಿತವಾಗಿ ಬಿಡಿಸಿದ್ದೇವೆ’ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿಂದಲೇ ಫ್ಯಾನ್ಸ್ ಬಗ್ಗೆ ವಿಚಾರಿಸಿದ ನಟ ದರ್ಶನ್​; ಎಲ್ಲರಿಗೂ ಒಂದು ಮನವಿ

‘ಜೈಲಿನಲ್ಲಿ ಬಹಳ ಜನ ನಿರಪರಾಧಿಗಳು ಇದ್ದಾರೆ. ನಮ್ಮಂತವರ ಸೇವೆ ಅವರಿಗೆ ಅಗತ್ಯ ಇದ್ದರೆ ಖಂಡಿತಾ ಮಾಡುತ್ತೇವೆ. ದರ್ಶನ್​ ಕೇಸ್​ ಮಾತ್ರವಲ್ಲ. ಬೇರೆ ಯಾವುದೇ ಪ್ರಕರಣದಲ್ಲಿ ನಿರಪರಾಧಿಗಳು ಇದ್ದು, ಅವರಿಗೆ ಆರ್ಥಿಕ ಸಂಕಷ್ಟ ಇದೆ ಎಂದರೆ ನನ್ನಂತಹ ಲಾಯರ್​ಗಳು ಸಹಾಯ ಮಾಡುತ್ತಾರೆ. ನಮ್ಮದು ಸೇವೆಯ ವೃತ್ತಿ. ದರ್ಶನ್​ ಅವರು ಕೋಟಿಗಟ್ಟಲೆ ಹಣ ಕೊಟ್ಟರು, ಪವಿತ್ರಾ ಗೌಡ ಕೋಟಿ ರೂಪಾಯಿ ಕೊಟ್ಟರು, ಬಡವರಿಗೆಲ್ಲ ಲಾಯರ್​ ಸಹಾಯ ಮಾಡಲ್ಲ ಅಂತ ಜನರು ಹೇಳುತ್ತಾರೆ. ಅದೆಲ್ಲವೂ ಸುಳ್ಳು’ ಎಂದಿದ್ದಾರೆ ನಾರಾಯಣಸ್ವಾಮಿ.

‘ನಮ್ಮ ಸೇವೆಯನ್ನು ಯಾರೇ ಬಯಸಿದರೂ ನಾವು ಸಹಾಯ ಮಾಡುತ್ತೇವೆ. ನಾಳೆ ದರ್ಶನ್​ ಮತ್ತು ಪವಿತ್ರಾ ಗೌಡ ಅವರು ಬೇರೆ ಲಾಯರ್​ನ ಇಡಬಹುದು. ಇನ್ನುಳಿದ ಹುಡುಗರಿಗೂ ಬೇರೆ ಲಾಯರ್​ ಬರುತ್ತಾರೆ ಎಂದೇನೂ ಇಲ್ಲ. ಆಗ ನಾವು ಮುಂದುವರಿಯಬಹುದು. ಏನು ಬೇಕಾದರೂ ಆಗಬಹುದು. ಇಂದು ನಾನು ದರ್ಶನ್​, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳನ್ನೂ ಭೇಟಿ ಮಾಡಿ ಬಂದಿದ್ದೇನೆ’ ಎಂದು ನಾರಾಯಣಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ