AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ಕೊಡಲು ಬಗೆಬಗೆಯ ತಿಂಡಿ ತಂದ ಆಪ್ತರು; ಆದರೆ ಪೊಲೀಸರು ಮಾಡಿದ್ದೇನು?

ದರ್ಶನ್​ಗೆ ಕೊಡಲು ಬಗೆಬಗೆಯ ತಿಂಡಿ ತಂದ ಆಪ್ತರು; ಆದರೆ ಪೊಲೀಸರು ಮಾಡಿದ್ದೇನು?

ರಾಮು, ಆನೇಕಲ್​
| Edited By: |

Updated on: Jul 10, 2024 | 4:44 PM

Share

ಕೊಲೆ ಆರೋಪ ಹೊತ್ತಿರುವ ದರ್ಶನ್​ ಅವರಿಗೆ ಜೈಲಿನ ಊಟ ಸೇವಿಸುವುದು ಕಷ್ಟ ಆಗುತ್ತಿದೆ. ಹಾಗಾಗಿ ಹೊರಗಡೆಯಿಂದ ಅವರಿಗಾಗಿ ಬೇಕರಿ ಪದಾರ್ಥಗಳನ್ನು ಆಪ್ತರು ತಂದಿದ್ದಾರೆ. ಆದರೆ ಜೈಲಿನ ಗೇಟಿನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಬೇಕರಿ ತಿಂಡಿಗಳನ್ನು ಒಳಗೆ ತೆಗೆದುಕೊಂಡು ಹೋಗಲು ಪೊಲೀಸರು ಅನುಮತಿ ನೀಡಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ದರ್ಶನ್​ ಅವರಿಗೆ ಜೈಲಿನಲ್ಲಿ ಕಾಲ ಕಳೆಯುವುದು ಕಷ್ಟ ಆಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ದರ್ಶನ್​ಗೆ ನೀಡಲು ಅವರ ಆಪ್ತರು ಬಗೆಬಗೆಯ ತಿಂಡಿ ತಿನಿಸುಗಳನ್ನು ತಂದಿದ್ದಾರೆ. ಆದರೆ ಈ ಬೇಕರಿ ಪದಾರ್ಥಗಳನ್ನು ಜೈಲಿನ ಒಳಗೆ ತರಲು ಪೊಲೀಸರು ಅವಕಾಶ ನೀಡಿಲ್ಲ. ಹಲವು ಬಗೆಯ ತಿಂಡಿಗಳಿರುವ ಬಾಕ್ಸ್​ ಅನ್ನು ಪೊಲೀಸರು ಜೈಲಿನ ಗೇಟ್​ನಲ್ಲೇ ತಡೆದಿದ್ದಾರೆ. ‘ಈ ವಸ್ತುಗಳನ್ನು ಬಿಡಲು ಸಾಧ್ಯವಿಲ್ಲ. ಹಣ್ಣು ಮಾತ್ರ ನೀಡಬಹುದು’ ಎಂದು ಖಡಕ್​ ಆಗಿ ಪೊಲೀಸರು ಹೇಳಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಜೊತೆ ಪವಿತ್ರಾ ಗೌಡ ಹಾಗೂ ಇತರೆ ಸಹಚರರು ಕೂಡ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Ramu Ram
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More