ಕೆಎಸ್​ಪಿ ಌಪ್ ಮೂಲಕ ಮತ್ತಷ್ಟು ಜನಸ್ನೇಹಿಯಾಗಲಿದೆ ನಗರ ಪೊಲೀಸ್ ವ್ಯವಸ್ಥೆ: ಬಿ ದಯಾನಂದ, ಪೊಲೀಸ್ ಕಮೀಶನರ್

ಕೆಎಸ್​ಪಿ ಌಪ್ ಮೂಲಕ ಮತ್ತಷ್ಟು ಜನಸ್ನೇಹಿಯಾಗಲಿದೆ ನಗರ ಪೊಲೀಸ್ ವ್ಯವಸ್ಥೆ: ಬಿ ದಯಾನಂದ, ಪೊಲೀಸ್ ಕಮೀಶನರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 10, 2024 | 2:34 PM

ಕೆಎಸ್​ಪಿ ಌಪ್ ಈಗಾಗಲೇ ಕಾರ್ಯಾರಂಭಗೊಂಡಿದ್ದು ನಗರದ ನಿವಾಸಿಗಳು ಅದರ ಬಗ್ಗೆ ಮೆಚ್ಚುಗೆ ಸೂಚಿಸಿ ನಗರ ಪೊಲೀಸ್ ವ್ಯವಸ್ಥೆಯನ್ನು ಅಭಿನಂದಿಸುತ್ತಿದ್ದಾರೆ ಎಂದು ದಯಾನಂದ ಹೇಳಿದರು. ಇತ್ತೀಚಿಗೆ ಒಬ್ಬ ಪುಟ್ಬಾಲ್ ಕೋಚ್ ತಮ್ಮೆಲ್ಲ ಸಾಮಾನುಗಳನ್ನು ಕ್ಯಾಬೊಂದರಲ್ಲಿ ಬಿಟ್ಟು ಇಳಿದಾಗ ಸೇಫ್ಟಿ ಐಲ್ಯಾಂಡ್ ಮೂಲಕ ಪೊಲೀಸ್ ನೆರವು ಪಡೆದು ಎಲ್ಲ ಸಾಮಾನು ವಾಪಸ್ಸು ಪಡೆದುಕೊಂಡ ನಿದರ್ಶನವನ್ನು ಅವರು ವಿವರಿಸಿದರು.

ಬೆಂಗಳೂರು: ನಗರದ ಪೊಲೀಸ್ ವ್ಯವಸ್ಥೆಯು ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತಷ್ಟು ಜನಸ್ನೇಹಿ ಆಗಿದೆ. ಕೆಎಸ್​ಪಿ ಎಂಬ ಹೊಸ ಌಪ್ ಅನ್ನು ನಗರ ಪೊಲೀಸ್ ವಿನ್ಯಾಸಗೊಳಿಸಿದ್ದು ಇದು ಜನರಿಗೆ ಅದರಲ್ಲೂ ವಿಶೇಷವಾಗಿ ಅಪಾಯಕ್ಕೆ ಸಿಕ್ಕಿರುವ ಮಹಿಳೆಯರಿಗೆ ಆಪತ್ಬಾಂಧವನಾಗಿ ನೆರವವಾಗಲಿದೆ. ಕೆಎಸ್​ಪಿ ಌಪ್ ಬಗ್ಗೆ ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ವಿವರಣೆ ನೀಡಿದ ನಗರ ಪೊಲೀಸ್ ಕಮೀಶನರ್ ಬಿ ದಯಾನಂದ ಅವರು, ಕೆಎಸ್​ಪಿ ಌಪ್ ಮೂಲಕ ತೊಂದರೆಯಲ್ಲಿರುವ ನಾಗರಿಕರು ಪೊಲೀಸ್ ಕಮಾಂಡ್ ಸೆಂಟರ್ ನಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಟು-ವೇ ಆಡಿಯೋ-ವಿಶುಯಲ್ ಸಂಪರ್ಕ ಸಾಧಿಸಿ ತಮ್ಮ ಸಮಸ್ಯೆ ಹೇಳಿಕೊಂಡು ಕೂಡಲೇ ನೆರವು ಪಡೆಯಬಹುದು ಎಂದರು. ಹಾಗೆಯೇ, ಜನ ಌಪ್ ಬೇಸ್ಡ್ ಡೆಲಿವರಿ ಸಂಸ್ಥೆಗಳ ಮೂಲಕ ಹೊರಗಿನ ಊಟ ತಿಂಡಿ ಅರ್ಡರ್ ಮಾಡಿದಾಗ ಆಹಾರ ಪೊಟ್ಟಣ ಹೊತ್ತು ತರುವ ಡೆಲಿವರಿ ಬಾಯ್ ಎಲ್ಲಿದ್ದಾನೆ, ತಲುಪೋದು ಎಷ್ಟು ಹೊತ್ತಾಗತ್ತೆ ಅನ್ನೋದನ್ನು ಫೋನ್ ಗಳಲ್ಲಿ ಕಂಡುಕೊಳ್ಳುವ ರೀತಿಯಲ್ಲಿ ಸಂಕಷ್ಟದಲ್ಲಿರುವ ಜನ ಪೊಲೀಸ್ ಎಲ್ಲಿದ್ದಾರೆ, ತಮ್ಮನ್ನು ತಲುಪಲು ಎಷ್ಟು ಸಮಯ ಬೇಕಾಗುತ್ತದೆ, ಸರಿಯಾದ ವಿಳಾಸಕ್ಕೆ ಆಗಮಿಸುತ್ತಿದ್ದಾರೋ ಇಲ್ಲವೋ ಅನ್ನೋದನ್ನು ಕಂಡುಕೊಳ್ಳಬಹುದಾಗಿದೆ ಎಂದು ದಯಾನಂದ್ ಹೇಳಿದರು.

ಪೋನ್ ಅಥವಾ ಎಲೆಕ್ಟ್ರಾನಿಕ್ ಸಾಮಗ್ರಿಗಳಿಲ್ಲದೆ, ನಗರದ 50 ಆಯ್ದ್ದ ಸ್ಥಳಗಳಲ್ಲಿ ಅಳವಡಿಲಾಗಿರುವ ಸೇಫ್ಟಿ ಐಲ್ಯಾಂಡ್ ಗಳ ಮೂಲಕ ಕಮಾಂಡ್ ಸೆಂಟರ್ ಜೊತೆ ಸಂಪರ್ಕ ಸಾಧಿಸುವ ವ್ಯವಸ್ಥೆಯನ್ನು ಈಗ ಮೊಬೈಲ್ ಗಳಿಗೂ ವಿಸ್ತರಿಸಲಾಗಿದೆ ಎಂದು ದಯಾನಂದ್ ಹೇಳಿದರು. ಸಂಕಷ್ಟದಲಲ್ಲಿರುವವರು ಕಾಲ್ ಮಾಡಿದ ಕೂಡಲೇ ಹೊಯ್ಸಳ 112 ಸಿಬ್ಬಂದಿ ನೆರವಿಗೆ ಧಾವಿಸುತ್ತದೆ ಎಂದು ಪೊಲೀಸ್ ಆಯುಕ್ತ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪೋಷಕರು ಆತಂಕಪಡೋದು ಬೇಡ, ಬಾಂಬ್ ನಿಷ್ಕ್ರಿಯ ದಳ ಬೆದರಿಕೆ ಮೇಲ್ ಬಂದ ಶಾಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ: ಬಿ ದಯಾನಂದ, ಪೊಲೀಸ್ ಆಯುಕ್ತ