ದರ್ಶನ್​ಗಾಗಿ ಬಟ್ಟೆ ಹೊತ್ತು ತಂದ ಅಕ್ಕನ ಮಗ, ಜೈಲಲ್ಲಿ ನಟನ ತೂಕ ಕಮ್ಮಿಯಾಗುತ್ತಿದೆ!

ದರ್ಶನ್​ಗಾಗಿ ಬಟ್ಟೆ ಹೊತ್ತು ತಂದ ಅಕ್ಕನ ಮಗ, ಜೈಲಲ್ಲಿ ನಟನ ತೂಕ ಕಮ್ಮಿಯಾಗುತ್ತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 10, 2024 | 4:36 PM

ವ್ಯಕ್ತಿಯೊಬ್ಬ ಮೊದಲ ಬಾರಿಗೆ ಅರೋಪಿಯಾಗಿ ಅಥವಾ ಅಪರಾಧಿಯಾಗಿ ಜೈಲು ಸೇರಿದಾಗ ಅದು ಅವನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಸೆಲಿಬ್ರಿಟಿಗಳ ಅದು ಹೆಚ್ಚಿನ ಪರಿಣಾಮ ಬೀರೋದು ಸಹಜವೇ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ದರ್ಶನ್ ಎರಡನೇ ಬಾರಿ ಜೈಲಿಗೆ ಹೋಗಿದ್ದು ದುರದೃಷ್ಟಕರ.

ಆನೇಕಲ್ (ಬೆಂಗಳೂರು): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿ ಪರಪ್ಪನ ಅಗ್ರಹಾರದ ಜೈಲ್ಲಲ್ಲಿರುವ ಚಿತ್ರನಟ ದರ್ಶನ್ ಅವರನ್ನು ನೋಡಲು ಪ್ರತಿದಿನ ಯಾರಾದರೂ ಬರುತ್ತಿರುತ್ತಾರೆ. ಇವತ್ತು ಅವರ ಅಕ್ಕನ ಮಗನೊಬ್ಬ ಎರಡು ಚೀಲಗಳಲ್ಲಿ ಬಟ್ಟೆ ತಂದರು. ಅವರು ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಕಾವಲಿದ್ದ ಇಬ್ಬರು ಪೊಲೀಸರ ಪೈಕಿ ಒಬ್ಬರು ಒಂದು ಬ್ಯಾಗನ್ನು ಮುಟ್ಟಿ ನೋಡುತ್ತಾರೆ. ದರ್ಶನ್ ಅಳಿಯ ಪೊಲೀಸರೊಂದಿಗೆ ಮಾತಾಡಿದ ಒಳಗಡೆ ಹೋದ ನಂತರ ಇನ್ನೊಬ್ಬ ಪೊಲೀಸ್ ಅವರ ಬ್ಯಾಗುಗಳಲ್ಲಿ ಏನಿದೆ ಅಂತ ಜೈಲು ಆವರಣದ ಮತ್ತೊಂದು ಭಾಗದಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. . ಒಂದು ತಿಂಗಳಿಗಿಂತ ಹೆಚ್ಚು ಸಮಯದಿಂದ ದರ್ಶನ್ ಜೈಲಲ್ಲಿದ್ದಾರೆ ಮತ್ತು ಅವರ ತೂಕ ಸುಮಾರು 10 ಕೇಜಿಗಳಷ್ಟು ಕಡಿಮೆಯಾಗಿದೆ ಅಂತ ಗೊತ್ತಾಗಿದೆ. ಇತ್ತ ಹೊರಗಡೆ, ಅವರ ಬಿಡುಗಡೆಗಾಗಿ ಅಭಿಮಾನಿಗಳು ಹರಕೆ ಹೊರುತ್ತಿದ್ದಾರೆ, ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು’; ಜುಲೈ 18ರವರೆಗೆ ದರ್ಶನ್​ಗೆ ಜೈಲೂಟವೇ ಗತಿ