ಹಾವೇರಿ: ಲೇಡಿ ಕಂಡಕ್ಟರ್, ಡ್ರೈವರ್​ಗಳಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಬಸ್‌ ತಡೆದು ABVP ನೇತೃತ್ವದಲ್ಲಿ ಪ್ರತಿಭಟನೆ

ಶಕ್ತಿ ಯೋಜನೆ ಎಫೆಕ್ಟ್​​ ಹಿನ್ನಲೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದ್ದು, ಫುಟ್ ಬೋರ್ಡ್ ಮೇಲೆ ನಿಂತು ನೇತಾಡುತ್ತಾ ಶಾಲಾ ಕಾಲೇಜಿಗೆ ತೆರಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಲೇಡಿ ಕಂಡಕ್ಟರ್ ಹಾಗೂ ವಿದ್ಯಾರ್ಥಿ ನಡುವೆ ಗಲಾಟೆ ಆಗಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಇಂದು(ಬುಧವಾರ) ಹಾವೇರಿ(Haveri) ಬಸ್ ನಿಲ್ದಾಣದ ಎದುರು ಎಬಿವಿಪಿ (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಲೇಡಿ ಕಂಡಕ್ಟರ್, ಡ್ರೈವರ್​ಗಳಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಬಸ್‌ ತಡೆದು ABVP ನೇತೃತ್ವದಲ್ಲಿ ಪ್ರತಿಭಟನೆ
|

Updated on: Jul 10, 2024 | 3:48 PM

ಹಾವೇರಿ, ಜು.10: ಶಕ್ತಿ ಯೋಜನೆ ಎಫೆಕ್ಟ್​​ನಿಂದ ವಿದ್ಯಾರ್ಥಿಗಳು(Students) ಪರದಾಟ ನಡೆಸುತ್ತಿದ್ದು, ಫುಟ್ ಬೋರ್ಡ್ ಮೇಲೆ ನಿಂತು ನೇತಾಡುತ್ತಾ ಶಾಲಾ ಕಾಲೇಜಿಗೆ ತೆರಳುವಂತಹ ಪರಿಸ್ಥಿತಿ ಇದೆ. ಹೀಗೆ ಬಸ್​ನಲ್ಲಿ ನಿಂತುಕೊಳ್ಳುವ ವಿಚಾರದಲ್ಲಿ ಜಗಳವೊಂದು ನಡೆದಿದ್ದು, ಲೇಡಿ ಕಂಡಕ್ಟರ್ ಹಾಗೂ ಡ್ರೈವರ್​ಗಳು ಸೇರಿಕೊಂಡು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಇಂದು(ಬುಧವಾರ) ಹಾವೇರಿ(Haveri) ಬಸ್ ನಿಲ್ದಾಣದ ಎದುರು ನೂರಾರು ವಿಧ್ಯಾರ್ಥಿಗಳು ಸೇರಿಕೊಂಡು ಬಸ್‌ ತಡೆದು ಎಬಿವಿಪಿ (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗಾಂಧಿಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಮನೋಜ್ ಚಳ್ಳಾಳ ಎಂಬುವವನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಬಸ್ ರಶ್ ಇದ್ದ ಹಿನ್ನಲೆ ವಿದ್ಯಾರ್ಥಿ ಮನೋಜ್ ಪುಟ್ ಬೋರ್ಡ್ ಮೇಲೆ ನಿಂತಿದ್ದ. ಈ ಹಿನ್ನಲೆ ಬಸ್ ಒಳಗೆ ಬರುವಂತೆ ಮಹಿಳಾ ಕಂಡಕ್ಟರ್ ಸೂಚಿಸಿದ್ದಾರೆ. ಅದಕ್ಕೆ ‘ಬಸ್ ರಶ್ ಇದೆ ಒಳಗೆ ಹೇಗೆ ಬರಲಿ ಎಂದು ವಿದ್ಯಾರ್ಥಿ ವಾದಿಸಿದ್ದನಂತೆ. ಈ ಹಿನ್ನಲೆ ಮಹಿಳಾ ಕಂಡಕ್ಟರ್ ವಿದ್ಯಾರ್ಥಿ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದು, ಬಳಿಕ ಹಾವೇರಿ ಬಸ್ ನಿಲ್ದಾಣದ ವಿಶ್ರಾಂತಿ ಕೊಠಡಿ ಒಳಗೆ ಕರೆದು ಕೂಡ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಇದೀಗ ಲೇಡಿ ಕಂಡಕ್ಟರ್ ಹಾಗೂ ವಿದ್ಯಾರ್ಥಿ ಜಗಳ ಹಾವೇರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ