AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ ಬಯಲಿಗೆ ಬಂದ ಬಳಿಕ ಮೊದಲ ಬಾರಿ ಮೈಸೂರಿಗೆ ಭೇಟಿ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ

ಮುಡಾ ಹಗರಣ ಬಯಲಿಗೆ ಬಂದ ಬಳಿಕ ಮೊದಲ ಬಾರಿ ಮೈಸೂರಿಗೆ ಭೇಟಿ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 10, 2024 | 1:32 PM

Share

ಮುಖ್ಯಮಂತ್ರಿ ಎಲ್ಲೇ ಹೋದರೂ ಅವರ ಹಿಂದೆ ವಾಹನಗಳ ಹಿಂಡು ಹೋಗೋದು ಬೇಡ, ಮುಖ್ಯಮಂತ್ರಿಯವರೇ ಸರ್ಕಾರದ ಮಿತವ್ಯಯಕ್ಕೆ ಮಾದರಿಯಾಗಲಿ ಅಂತ ಕನ್ನಡಿಗರು ಬಡಕೊಂಡರೂ ಗಣ್ಯರ ಮೇಲೆ ಅದರ ಪ್ರಭಾವ ಬೀಳಲ್ಲ. ಪೆಟ್ರೋಲ್ ಬೆಲೆ ₹3.50 ಹೆಚ್ಚಿಸಿರುವ ಸಿದ್ದರಾಮಯ್ಯ ಮುಂದಿನ ಪೀಳಿಗೆಗೂ ಕೊಂಚ ಪೆಟ್ರೋಲ್ ಉಳಿಸಲಿ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಮೈಸೂರಿಗೆ ಪ್ರಯಾಣ ಬೆಳಸಿದರು. ಅದರಲ್ಲೇನು ವಿಶೇಷ ಅಂತೀರಾ? ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮವಾಗಿ ಸೈಟು ಹಂಚಿರುವ ಆರೋಪದ ಹಗರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ ಬಳಿಕ ಅವರು ಮೊದಲ ಬಾರಿ ಮೈಸೂರಿಗೆ ಹೋಗುತ್ತಿರುವುದು ಮತ್ತು ವಿಶೇಷ ವಿಮಾನವೊಂದರಲ್ಲಿ ತೆರಳುತ್ತಿರುವುದು ವಿಶೇಷ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇವತ್ತು ಚಾಮರಾಜನಗರದಲ್ಲಿ ಸಂಸದ ಸುನೀಲ್ ಬೋಸ್ ಗೆ ಸತ್ಕಾರ ಸಮಾರಂಭ ಏರ್ಪಡಿಸಲಾಗಿದ್ದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಾದ ಬಳಿಕ ಅವರು ನಂಜನಗೂಡಿನಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧಿವೇಶನ ಮುಂದಿನ ವಾರ ನಡೆಯಲಿದೆ ಮತ್ತ ನಿಸ್ಸಂದೇಹವಾಗಿ ವಿರೋಧಪಕ್ಷಗಳು ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭಾರೀ ಅವ್ಯವಹಾರಗಳನ್ನು ಅಸ್ತ್ರಗಳಾಗಿಸಿಕೊಂಡು ಸರ್ಕಾರದ ಮೇಲೆ ದಾಳಿ ನಡೆಸಲಿವೆ. ಸಿದ್ದರಾಮಯ್ಯ ದಾಳಿಗೆ ತಯಾರಾಗಿರುವರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ 14 ಸೈಟ್​ ನೀಡಲಾಗಿದೆ; ವಿಜಯೇಂದ್ರ ಆರೋಪ