AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಯಾಕೆ ಜೈಲಿನಲ್ಲೇ ಇರಬೇಕು? ಪೊಲೀಸರು ನೀಡಿದ 30 ಕಾರಣಗಳು ಇಲ್ಲಿವೆ..

ನಟ ದರ್ಶನ್​ಗೆ ಕಾನೂನಿನ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ರೇಣುಕಾ ಸ್ವಾಮಿಯ ಕೊಲೆ ಕೇಸ್​ನಲ್ಲಿ ಆರೋಪಿಗಳಾಗಿರುವ ದರ್ಶನ್​, ಪವಿತ್ರಾ ಗೌಡ ಹಾಗೂ ಇನ್ನುಳಿದ ಸಹಚರರ ನ್ಯಾಯಾಂಗ ಬಂಧನವನ್ನು ಆಗಸ್ಟ್​ 1ರವರೆಗೆ ಮುಂದುವರಿಸಲಾಗಿದೆ. ದರ್ಶನ್​ ಯಾಕೆ ಇನ್ನೂ ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕು ಎಂಬುದಕ್ಕೆ ಪೊಲೀಸರು 30 ಕಾರಣಗಳನ್ನು ನೀಡಿದ್ದಾರೆ.

ದರ್ಶನ್ ಯಾಕೆ ಜೈಲಿನಲ್ಲೇ ಇರಬೇಕು? ಪೊಲೀಸರು ನೀಡಿದ 30 ಕಾರಣಗಳು ಇಲ್ಲಿವೆ..
ದರ್ಶನ್​
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 18, 2024 | 4:48 PM

Share

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್​, ಪವಿತ್ರಾ ಗೌಡ ಮುಂತಾದವರು ಮತ್ತೆ 14 ದಿನ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ. ಈ ಕೇಸ್​ ತನಿಖಾ ಹಂತದಲ್ಲಿ ಇದೆ. ಅನೇಕ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದು, ಇನ್ನೂ ಒಂದಷ್ಟು ಮಾಹಿತಿ ಸಂಗ್ರಹಿಸುವುದು ಬಾಕಿ ಇದೆ. ದರ್ಶನ್​, ಪವಿತ್ರಾ ಗೌಡ ಮತ್ತು ಗ್ಯಾಂಗ್​ನವರ ನ್ಯಾಯಾಂಗ ಬಂಧನವನ್ನು ಯಾಕೆ ಮುಂದುವರಿಸಬೇಕು ಎಂಬುದಕ್ಕೆ ಪೊಲೀಸರು ಬರೋಬ್ಬರಿ 30 ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..

1. ಆರೋಪಿಗಳು ಕಿಡ್ನಾಪ್, ಕೊಲೆ, ಒಳ ಸಂಚು ಮತ್ತು ಸಾಕ್ಷಿನಾಶದಲ್ಲಿ‌ಭಾಗಿ. 2. ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆ. 3. ಐ ವಿಟ್ನೇಸ್, ಟೆಕ್ನಿಕಲ್, ಡಿಜಿಟಲ್ ಸಾಕ್ಷಿಯಲ್ಲಿ‌ ಧೃಢ. 4. ಕೇಸ್ ನಲ್ಲಿ 83,55,500 ರೂಪಾಯಿ ಆರೋಪಿಗಳಿಂದ ಸೀಜ್. 5. ಸೀಜ್ ಹಣ ನೀಡಿದ ವ್ಯಕ್ತಿಗಳ ಪತ್ತೆ ಬಾಕಿ ಇದೆ. 6. ಹಣ ನೀಡಿದ ವ್ಯಕ್ತಿಗಳ ಹೇಳಿಕೆ ದಾಖಲಿಸಬೇಕು. 7. ಜೊತೆಗೆ ಕೆಲ ಆರೋಪಿಗಳಿಂದ ಹಣದ ಮೂಲ ಪತ್ತೆ ಬಾಕಿ ಇದೆ. 8. ಕೃತ್ಯಕ್ಕೆ ಬಳಸಿದ ವಾಹನಗಳ ಆರ್.ಸಿ. ಮಾಲೀಕನ ಪತ್ತೆ ಬಾಕಿ ಇದೆ. 9. ಎಲ್ಲಾ ಆರೋಪಿಗಳು ಒಳಸಂಚು ಮಾಡಿರೋದು ಧೃಡ. 10. ಸಾಕ್ಷಿನಾಶ ಮಾಡಲು ಒಳಸಂಚು ಮಾಡಿರೋದು ಧೃಡ.

11. ಟೆಕ್ನಿಕಲ್, ಸೈಂಟಿಫಿಕ್ ಹಾಗೂ ಫಿಸಿಕಲ್ ಸಾಕ್ಷಿಗಳ ನಾಶ ಮಾಡಿದ್ದು ಧೃಡ. 12. ಎ 13 ದೀಪಕ್ ಬಳಸಿದ ಸ್ಕೂಟರ್ ಕಳ್ಳತನದ ಗಾಡಿ. 13. ಹೆಬ್ಬಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್ ಇರುವ ಗಾಡಿ. 14. ಹೊಂಡಾ ಡಿಯೋ ಕೆ.ಎ- 51 ಹೆಚ್‌ಡಿ-9022 ಸ್ಕೂಟರ್. 15. ನಕಲಿ ಸಿಮ್ ಬಳಕೆ ಮಾಡಿದ್ದೇಕೆ ಎಂಬ ತನಿಖೆ ಬಾಕಿ. 16. FSL ವರದಿ ಬಳಿಕ ಮತ್ತಷ್ಟು ತನಿಖೆ ಬಾಕಿ ಇದೆ. 17. ಮೊಬೈಲ್ ಡಾಟಾ ಒರಿಜಿನಲಿಟಿ ಚೆಕ್ ರಿಪೋರ್ಟ್ ಬರಬೇಕಿದೆ. 18. ಸಿ.ಎಫ್.ಎಸ್.ಎಲ್ ಹೈದ್ರಾಬಾದ್‌ ವರದಿ ಬರಬೇಕಿದೆ. 19. ಸೀಜ್ ಆಗಿರುವ ಸಿಸಿಟಿವಿ ಡಿವಿಆರ್ ರಿಟ್ರೀವ್ ಇನ್ನೂ ನಡೆಯುತ್ತಿದೆ. 20. ಡಿವಿಆರ್ ಡಾಟಾ ಪಡೆದ ನಂತರ ತನಿಖೆ ಬಾಕಿ ಇದೆ.

ಇದನ್ನೂ ಓದಿ: ಜೈಲು ಊಟದಿಂದ ದರ್ಶನ್​ಗೆ ಆಗಿದೆ ಹಲವು ಆರೋಗ್ಯ ಸಮಸ್ಯೆ; ಇಲ್ಲಿದೆ ವಿವರ

21. ಕೊಲೆ ಮುಂಚೆ ಕೊಲೆ ಬಳಿಕ ಅನೇಕರ ಜೊತೆ ಮಾತುಕತೆ. 22. ಆ ವ್ಯಕ್ತಿಗಳ ಪತ್ತೆ ಮಾಡಿ ವಿಚಾರಣೆ ಬಾಕಿ ಇದೆ. 23. ಈ ವೇಳೆ ಆರೋಪಿಗಳಿಗೆ ಜಾಮೀನು ನೀಡೋದು ಸೂಕ್ತವಲ್ಲ. 24. ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಜಾಸ್ತಿ ಇದೆ. 25. ಇನ್ನೂ ಅನೇಕರ ಪ್ರತ್ಯಕ್ಷ ಮತ್ತು ಪರೋಕ್ಷ ವ್ಯಕ್ತಿಗಳ 164 ಬಾಕಿ ಇದೆ. 26. ಹಣ ಬಲ, ಪ್ರಭಾವಿ ಬಲ ಇರುವ ಆರೋಪಿಗೆ ಜಾಮೀನಿಗೆ ಯೋಗ್ಯವಲ್ಲ. 27. ಸಾಕ್ಷಿಗಳಿಗೆ ಬೆದರಿಕೆ ಹಾಕಿ ಸಾಕ್ಷಿ ಹೇಳದಂತೆ ತಡೆ ಸಾಧ್ಯ. 28. ಪ್ರಕರಣದಲ್ಲಿ ಆರೋಪಿಗಳ ಪ್ರತ್ಯೇಕ ಪಾತ್ರದ ವಿಚಾರಣೆ ಬಾಕಿ. 29. ಆರೋಪಿಗಳ ಸಂಪೂರ್ಣ ಪಾತ್ರದ ಸಾಕ್ಷಿ ಕಲೆ ಹಾಕಬೇಕು. 30. ಪ್ರಕರಣದಲ್ಲಿ ಇನ್ನೂ ತನಿಖೆ ಹಂತದಲ್ಲಿದ್ದು ವಿಚಾರಣೆ ನಡೆಯುತ್ತಿದೆ.

ಈ ಎಲ್ಲ ಕಾರಣಗಳಿಂದ ಆರೋಪಿಗಳನ್ನು ಜೈಲಿನಲ್ಲಿಯೇ ಇಡಲು ತನಿಖಾಧಿಕಾರಿಗಳ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್