‘ಈ ವಿವಾದವನ್ನು ಬೆಳೆಸಬೇಡಿ’; ಜೈನ ಧರ್ಮದವರ ಬಳಿ ಕ್ಷಮೆ ಕೇಳಿದ ಹಂಸಲೇಖ
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್ಶಿಟ್’ ಎಂದು ಹೇಳಿದ್ದರು ಹಂಸಲೇಖ. ಇದಕ್ಕೆ ಅನೇಕರು ವಿರೋಧ ಹೊರ ಹಾಕಿದ್ದರು. ಈಗ ಹಂಸಲೇಖ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಾಡುಗಳನ್ನು ನೀಡಿದ್ದಾರೆ. ಅವರ ಹಾಡುಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಹಂಸಲೇಖ ಗೀತ ಸಾಹಿತ್ಯಕ್ಕೆ ಮರುಳಾಗದವರೇ ಇಲ್ಲ. ಅವರ ಹಾಡುಗಳ ಬಗ್ಗೆ ಯಾರಿಗೂ ತಕರಾರು ಇಲ್ಲ. ಆದರೆ, ವೈಯಕ್ತಿವಾಗಿ ಕೆಲವೊಮ್ಮೆ ಅವರು ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಜೈನ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಹಂಸಲೇಖ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಂತೆಯೇ ಹಂಸಲೇಖ ಅವರು ಕ್ಷಮೆ ಕೇಳಿದ್ದಾರೆ.
ಹಂಸಲೇಖ ಹೇಳಿದ್ದು ಏನು?
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್ಶಿಟ್’ ಎಂದು ಹೇಳಿದ್ದರು ಹಂಸಲೇಖ. ಇದಕ್ಕೆ ಜೈನ ಧರ್ಮದವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಹಂಸಲೇಖ ಅವರು ಸಾರ್ವಜನಿಕವಾಗಿ ಜೈನ ಧರ್ಮವನ್ನು ಹೀಯಾಳಿಸಿದ್ದು ಸರಿ ಅಲ್ಲ. ಜಗತ್ತಿನ ಅತೀ ದೊಡ್ಡ ಅಂಹಿಸಾಮಯ ಹಾಗೂ ದಾನಧರ್ಮಗಳಲ್ಲಿ ಅಗ್ರ ಸ್ಥಾನದಲ್ಲಿ ಇರುವ ಜೈನ ಧರ್ಮವನ್ನು ಟೀಕಿಸಿದ ಹಂಸಲೇಖ ಈಗಲೇ ಕ್ಷಮೆ ಕೇಳಬೇಕು’ ಎಂದು ಜೈನ ಧರ್ಮದವರು ಆಗ್ರಹಿಸಿದ್ದರು.
ವಿಡಿಯೋ..
ಈಗ ಹಂಸಲೇಖ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಬಾಯ್ತಪ್ಪಿನಿಂದ ಆಡಿರೋ ಮಾತು ಎಂದಿರೋ ಅವರು, ಇನ್ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎನ್ನುವ ಭರವಸೆ ನಿಡಿದ್ದಾರೆ.
ಇದನ್ನೂ ಓದಿ: ‘ಪ್ಯಾನ್ ಇಂಡಿಯಾ ಅಂದ್ರೆ ಹೀರೋಗಳ ಶೋಕಿ; ದಾಡಿ, ಬಾಡಿ ಬೆಳೆಯತ್ತೆ ಅಷ್ಟೇ’: ಹಂಸಲೇಖ ಗರಂ
‘ದಯಮಾಡಿ ಕ್ಷಮಿಸಿ. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಎಂದು ಯೋಚನೆ ಮಾಡಿದವನಲ್ಲ. ಆ ಪದವನ್ನು ಬಳಕೆ ಮಾಡಬೇಕು ಎಂದು ಕೂಡ ನಾನು ಅಂದುಕೊಂಡಿಲ್ಲ. ನಾನಿದ್ದ ಜಾಗದಲ್ಲಿ ಎಲ್ಲರೂ ಎಳೆದಾಡುತ್ತಿದ್ದರು. ಅವರಿಗೆ ಗದರೋಕೆ ಹೋಗಿ ಈಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ಇನ್ನು ಎಂದಿಗೂ ಆ ಮಾತನ್ನು ಆಡಲ್ಲ. ನಾನು ಪಂಪನ ದಾಸಾನು ದಾಸ. ಕನ್ನಡ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿದ್ದೇನೆ. ಇದನ್ನು ದಯಮಾಡಿ ಬೆಳೆಸಬೇಡಿ. ಪತ್ರದಲ್ಲಿ ಬರೆದು ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದೇನೆ. ಅದೇ ನನ್ನ ಧ್ವನಿ ಎಂದುಕೊಳ್ಳಿ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.