‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?
ಕಲರ್ಸ್ ಕನ್ನಡದ ಹೊಸ ಧಾರಾವಾಹಿ ‘ಮುದ್ದು ಸೊಸೆ’ ತ್ರಿವಿಕ್ರಂ ಮತ್ತು ಪ್ರತಿಮಾ ಠಾಕೂರ್ ಅವರ ಅಭಿನಯದಿಂದ ಸುದ್ದಿಯಲ್ಲಿದೆ. ತ್ರಿವಿಕ್ರಂ ‘ಬಿಗ್ ಬಾಸ್’ ಮೂಲಕ ಜನಪ್ರಿಯರಾದ ನಟ. ಈ ಧಾರಾವಾಹಿ ಅವರ ವೃತ್ತಿಜೀವನದಲ್ಲಿ ಹೊಸ ತಿರುವನ್ನು ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ .

ಕಲರ್ಸ್ ಕನ್ನಡದಲ್ಲಿ ‘ಮುದ್ದು ಸೊಸೆ’ ಹೆಸರಿನ (Muddu Sose Serial) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೊದಲ ದಿನ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ‘ಬಿಗ್ ಬಾಸ್’ ಮೂಲಕ ಫೇಮಸ್ ಆದ ತ್ರಿವಿಕ್ರಂ ಅವರು ಈ ಚಿತ್ರಕ್ಕೆ ಹೀರೋ ಆದರೆ, ಪ್ರತಿಮಾ ಠಾಕೂರ್ ಅವರು ಚಿತ್ರಕ್ಕೆ ನಾಯಕಿ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಸಾಕಷ್ಟಿದೆ. ಇದಕ್ಕೆ ಕಾರಣ ಆಗಿದ್ದು ಧಾರಾವಾಹಿಯ ಕಥೆ ಎನ್ನಲಾಗಿದೆ. ಆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಾ ಇದ್ದೇವೆ.
‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ತ್ರಿವಿಕ್ರಂ ಅವರು ಹೀರೋ ಆಗಿ ನಟಿಸಿದರೆ, ಪ್ರತಿಮಾ ಠಾಕೂರ್ ಅವರು ನಾಯಕಿ. ಈ ಚಿತ್ರದಲ್ಲಿ ತ್ರಿವಿಕ್ರಂ ಅವರು ಊರಿನ ಚಿಕ್ಕ ಗೌಡ ಭದ್ರೇ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಊರಿಗೆ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಅವರು ಯಾರಿಗೇ ಸಿಕ್ಕರೂ ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಾರೆ.
ಕಥಾ ನಾಯಕ ಭದ್ರೇ ಗೌಡ ಮದುವೆ ಬಗ್ಗೆ ಆಸಕ್ತಿ ಎಂಬುದೇ ಇಲ್ಲ. ಈ ಕಾರಣದಿಂದಲೇ ಆ ಬಗ್ಗೆ ಆಲೋಚಿಸುವುದೇ ಇಲ್ಲ. ಆದರೆ, ಮನೆಯವರ ಒತ್ತಾಯಕ್ಕೆ ಕಥಾ ನಾಯಕ ಮದುವೆ ಆಗಲು ಒಪ್ಪುತ್ತಾನೆ. ಆತ ಮದುವೆ ಆಗೋದು ಶಿಕ್ಷಣ ಪಡೆಯುತ್ತಿರುವ ಹುಡುಗಿ ವಿದ್ಯಾಳನ್ನು (ಪ್ರತಿಮಾ ಠಾಕೂರ್). ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇರುತ್ತದೆ. ಅದನ್ನೂ ಲೆಕ್ಕಿಸದೇ ವಿವಾಹ ನಡೆಯುತ್ತದೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ನಿಜವಾಗಲೂ ವಯಸ್ಸಿನ ಅಂತರ ಇರುವವರನ್ನೇ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗುತ್ತಿದೆ.
View this post on Instagram
ತ್ರಿವಿಕ್ರಮ್ಗೆ ಈಗ 33 ವರ್ಷ ಎನ್ನಲಾಗಿದೆ. ಅವರು ಜನಿಸಿದ್ದು 1992ರಲ್ಲಿ. ಅದೇ ಕಥಾ ನಾಯಕಿ ಪ್ರತಿಮಾಗೆ ಈಗ 20 ವರ್ಷ. ಅಂದರೆ ಇಬ್ಬರ ಮಧ್ಯೆ 13 ವರ್ಷಗಳ ಅಂತರ ಇದೆ. ಧಾರಾವಾಹಿಯ ಕಥೆಯೂ ಇದೇ ರೀತಿ ಇರುವುದರಿಂದ ಈ ರೀತಿ ವಯಸ್ಸಿನ ಅಂತರ ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಕೊಳಕು ಅಂಟದ ಬಿಳಿ ಹಾಳೆ ನೀನು’; ಧನರಾಜ್ಗೆ ಕೈಯಲ್ಲೇ ಪತ್ರ ಬರೆದು ಬರ್ತ್ಡೇ ವಿಶ್ ತಿಳಿಸಿದ ತ್ರಿವಿಕ್ರಂ
ತ್ರಿವಿಕ್ರಂ ಅವರು ಈ ಮೊದಲು ಕೆಲವು ಧಾರಾವಾಹಿಗಳನ್ನು ಮಾಡಿದ್ದರು. ಆ ಬಳಿಕ ಬಿಗ್ ಬಾಸ್ ಆಫರ್ ಬಂತು. ಅವರು ರನ್ನರ್ ಅಪ್ ಆದರು. ಆದರೆ, ಅವರಿಗೆ ಸಿಕ್ಕ ಖ್ಯಾತಿ ಅಪಾರ. ಈ ಧಾರಾವಾಹಿಯಿಂದ ಅವರ ಅದೃಷ್ಟ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:43 am, Tue, 15 April 25