ಚಿಕ್ಕ ವಯಸ್ಸಲ್ಲಿ ಹೇಗಿದ್ದರು ನೋಡಿ ಭೂಮಿಕಾ ರಮೇಶ್
ಭೂಮಿಕಾ ರಮೇಶ್ ಅವರು ಕನ್ನಡ ಕಿರುತೆರೆಯಲ್ಲಿ ಯಶಸ್ವಿಯಾಗಿರುವ ನಟಿ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಬಾಲ್ಯದಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಭೂಮಿಕಾ, ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕಷ್ಟಪಟ್ಟು ಯಶಸ್ಸು ಗಳಿಸಿದ ಅವರ ಪ್ರಯಾಣ ಅನೇಕರಿಗೆ ಸ್ಪೂರ್ತಿಯಾಗಿದೆ.

ಭೂಮಿಕಾ ರಮೇಶ್ ಅವರು ಇತ್ತೀಚೆಗೆ ಕೊನೆ ಆದ ‘ಲಕ್ಷ್ಮೀ ಬಾರಮ್ಮ’ (Lakshmi Baramma Serial) ಧಾರಾವಾಹಿಯಲ್ಲಿ ಮಹಾಲಕ್ಷ್ಮೀ ಪಾತ್ರ ಮಾಡಿದ್ದರು. ಈ ಧಾರಾವಾಹಿ ಗಮನ ಸೆಳೆಯಿತು. ಈ ಧಾರಾವಾಹಿ ಈಗ ಕೊನೆಗೊಂಡಿದ್ದು ಅಭಿಮಾನಿಗಳಿಗೆ ಹಾಗೂ ಈ ಧಾರಾವಾಹಿ ವೀಕ್ಷಕರಿಗೆ ಬೇಸರ ಇದೆ. ಭೂಮಿಕಾ ರಮೇಶ್ ಅವರಿಗೆ ಬಣ್ಣದ ಲೋಕ ಹೊಸದಲ್ಲ. ಮೊದಲಿನಿಂದಲೂ ಅವರು ಬಣ್ಣದ ಲೋಕದ ಜೊತೆ ನಂಟು ಹೊಂದಿದ್ದರು. ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರ ಬಾಲ್ಯದ ಚಿತ್ರಗಳು ಇವೆ.
ಭೂಮಿಕಾ ರಮೇಶ್ ಕನ್ನಡ ಕಿರುತೆರೆ ನಟಿ ಆಗಿದ್ದಾರೆ. ಅವರ ಊರು ಮೈಸೂರು. ‘ಸೈ ಅಂಟೆ ಸೈ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅವರು ಭಾಗಿ ಆಗಿದ್ದರು. ಆ ಬಳಿಕ ‘ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಭೂಮಿಕಾ ಉತ್ತಮ ಡ್ಯಾನ್ಸರ್ ಅನ್ನೋದು ಈ ವೇದಿಕೆಗಳ ಮೂಲಕ ಗೊತ್ತಾಯಿತು.
ಭೂಮಿಕಾ ಅವರ ಡ್ಯಾನ್ಸಿಂಗ್ ರಿಯಾಲಿಟಿ ಶೋ ಸಂದರ್ಭಗಳ ಕ್ಲಿಪ್ಗಳನ್ನು ಬಳಕೆ ಮಾಡಿಕೊಂಡು ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಅವರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಆಗಿನಷ್ಟೇ ಕ್ಯೂಟ್ ಈಗಲೂ ಇದ್ದಾರೆ ಎಂದು ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಭೂಮಿಕಾ ಅವರು ‘ದೊರೆಸಾನಿ’ ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ, ವಯಸ್ಸಿನಲ್ಲಿ ಚಿಕ್ಕವರು ಎನ್ನುವ ಕಾರಣಕ್ಕೆ ಅವರಿಗೆ ಆ ಪಾತ್ರ ಸಿಗಲೇ ಇಲ್ಲ. ಅವರು ಧಾರಾವಾಹಿಯಿಂದ ಹೊರಕ್ಕೆ ಇರಬೇಕಾಯಿತು. ಆದರೆ, ಅವರು ಪ್ರಯತ್ನ ಬಿಡಲೇ ಇಲ್ಲ. ಧಾ ರಾವಾಹಿಗಳಲ್ಲಿ ನಟಿಸಬೇಕು ಎಂಬ ಕನಸನ್ನು ನನಸು ಮಾಡಿಕೊಂಡರು.
View this post on Instagram
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭೂಮಿಕಾ ನಟಿಸಿದರು. ಈ ಧಾರಾವಾಹಿಯಿಂದ ಲಕ್ಷ್ಮೀ ಕಥೆ ಪ್ರತ್ಯೇಕತೆ ಪಡೆದುಕೊಂಡಿತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಅವರು ನಟಿಸೋಕೆ ಆರಂಭಿಸಿದರು. ಧಾರಾವಾಹಿ ಆರಂಭ ಆದಾಗ ಅವರಿಗೆ ಕೇವಲ 30 ವರ್ಷ. ಅವರು ಬಿಸಿಎ ಓದಿದ್ದಾರೆ.
ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಕ್ಷ್ಮೀ ಹೆಸರಿನ ಪಾತ್ರ ಮಾಡಿದ್ದರು. ಲಕ್ಷ್ಮೀ ಅತ್ತೆ ಕಾವೇರಿಗೆ ಮಗನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಮಗ ಕೈ ಬಿಟ್ಟು ಹೋಗಬಾರದು ಎಂದು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾಳೆ. ಕೊನೆಗೆ ಕಾವೇರಿ ಮುಖವಾಡ ಕಳಚಿ ಆಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಮೂಲಕ ಧಾರಾವಾಹಿ ಕೊನೆಗೊಳ್ಳುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.